Future Group- Reliance Deal: ‘ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಉದ್ಯೋಗ ನಷ್ಟ’

ರಿಲಯನ್ಸ್ ಇಂಡಸ್ಟ್ರೀಸ್​​ನಿಂದ ಫ್ಯೂಚರ್ ರೀಟೇಲ್ ಆಸ್ತಿ ಖರೀದಿ ಮಾಡುವ ವ್ಯವಹಾರ ಪೂರ್ಣ ಆಗದಿದ್ದಲ್ಲಿ 11 ಲಕ್ಷದಷ್ಟು ಉದ್ಯೋಗ ನಷ್ಟ ಆಗುತ್ತದೆ ಎಂದು ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

Future Group- Reliance Deal: 'ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಉದ್ಯೋಗ ನಷ್ಟ'
ಮುಕೇಶ್ ಅಂಬಾನಿ
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2021 | 5:05 PM

ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮಧ್ಯೆ ಒಂದು ವೇಳೆ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಎಫ್​ಎಂಸಿಜಿ ವಿತರಕರು, ವರ್ತಕರ ಒಕ್ಕೂಟ ಮತ್ತು ದೆಹಲಿ ಮೂಲದ ಎನ್​ಜಿಒ ಹೇಳಿಕೆಯಲ್ಲಿ ತಿಳಿಸಿವೆ. ‘ಫ್ಯೂಚರ್ ಸಮೂಹ ಹಾಗೂ ರಿಲಯನ್ಸ್ ಸೇರಿ ಎಲ್ಲ ಉದ್ಯಮಗಳನ್ನು ನಡೆಸಿಕೊಂಡು ಹೋಗುವುದಾಗಿ ಹೇಳಿವೆ. ಅವುಗಳಲ್ಲಿ ಬಿಗ್ ಬಜಾರ್, ಈಜೀಡೇ, ನೀಲ್​ಗಿರೀಸ್, ಸೆಂಟ್ರಲ್, ಬ್ರ್ಯಾಂಡ್ ಫ್ಯಾಕ್ಟರಿ ಮತ್ತಿತರ ಸಂಸ್ಥೆಗಳು ಒಳಗೊಂಡಿವೆ. ಆಗ ಉದ್ಯೋಗಿಗಳು ಹಾಗೂ ಸರಬರಾಜುದಾರರು ತಮ್ಮ ಬದುಕಿನ ಮಾರ್ಗ ಕಳೆದುಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನ (ಎಫ್​ಎಂಸಿಜಿ) ವಿತರಕರ ಒಕ್ಕೂಟ, ಎಫ್​ಎಂಸಿಜಿ ವಿತರಕರು ಮತ್ತು ವರ್ತಕರ ಒಕ್ಕೂಟ ದೆಹಲಿ ಹಾಗೂ ಪಬ್ಲಿಕ್ ರೆಸ್ಪಾನ್ಸ್ ಎಗೇನ್ಸ್ಟ್ ಹೆಲ್ಪ್​​ಲೆಸ್​ನೆಸ್ ಅಂಡ್ ಆ್ಯಕ್ಷನ್ ಫಾರ್ ರೀಡ್ರಸೆಲ್ (PRAHAR) ಹೇಳಿಕೆ ನೀಡಿದೆ.

‘ಆದರೆ, ಅಮೆಜಾನ್​ನಿಂದ ಪದೇಪದೇ ತಡೆಯೊಡ್ಡಲಾಗುತ್ತಿದೆ. ಆ ಕಾರಣಕ್ಕೆ ಈ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಒಂದು ವೇಳೆ ಈ ವ್ಯವಹಾರ ಸುಸೂತ್ರವಾಗಿ ಆಗದಿದ್ದಲ್ಲಿ ಹಲವರು ಜೀವನದ ದಾರಿಯೇ ಕಳೆದುಕೊಂಡಂತಾಗುತ್ತದೆ’ ಎಂದು ತಿಳಿಸಲಾಗಿದೆ.

ಫ್ಯೂಚರ್ ಸಮೂಹವು ಭಾರತದಾದ್ಯಂತ 450 ನಗರಗಳಲ್ಲಿ 2000ದಷ್ಟು ಮಳಿಗೆಗಳನ್ನು ಹೊಂದಿದೆ. ಒಂದು ವೇಳೆ ರಿಲಯನ್ಸ್ ಜತೆಗಿನ ವ್ಯವಹಾರ ನಿಂತುಹೋದರೆ ಮಳಿಗೆಗಳನ್ನು ಮುಚ್ಚಿಬಿಡುತ್ತದೆ. ಇದರಿಂದ ಹನ್ನೊಂದು ಲಕ್ಷದಷ್ಟು ಉದ್ಯೋಗ ನಷ್ಟವಾಗುತ್ತದೆ. ಇದರ ಜತೆಗೆ 6000ದಷ್ಟು ಮಾರಾಟಗಾರರು ಮತ್ತು ಸರಬರಾಜುದಾರರು ತಮ್ಮ ಅತಿದೊಡ್ಡ ಗ್ರಾಹಕರನ್ನು ಕಳೆದುಕೊಂಡಂತಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಾಕಿ ಇರುವ ಮೊತ್ತ ಪಾವತಿ ಆಗುತ್ತದೆ ಈ ವ್ಯವಹಾರದ ಭಾಗವಾಗಿ, ಮಾರಾಟಗಾರರು ಮತ್ತು ಸರಬರಾಜುದಾರರಿಗೆ ಬಾಕಿ ಇರುವ ಎಲ್ಲ ಮೊತ್ತ ಪಾವತಿ ಮಾಡುವುದಾಗಿ ರಿಲಯನ್ಸ್ ಹೇಳಿದೆ. ‘ಆದ್ದರಿಂದ ಮುಖ್ಯವಾಗಿ ಈ ವ್ಯವಹಾರ ಮತ್ತು ಫ್ಯೂಚರ್ ರೀಟೇಲ್​​ಗೆ ಸರಬರಾಜು ಮಾಡುವವರ ರಕ್ಷಣೆ ಆಗುತ್ತದೆ’ ಎಂದು ಹೇಳಲಾಗಿದೆ.

ಫ್ಯೂಚರ್ ಸಮೂಹದ ರೀಟೇಲ್, ಲಾಜಿಸ್ಟಿಕ್ಸ್ ಮತ್ತು ವೇರ್​​ಹೌಸಿಂಗ್ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್​ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಫ್ಯೂಚರ್ ಸಮೂಹ ತಮ್ಮ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅಮೆಜಾನ್, ಈ ವ್ಯವಹಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಅಂದಹಾಗೆ, 24,713 ಕೋಟಿ ರೂಪಾಯಿಗೆ ತನ್ನ ಆಸ್ತಿಯನ್ನು ರಿಲಯನ್ಸ್ ರೀಟೇಲ್ ವೆಂಚರ್ಸ್​ಗೆ ಮಾರಾಟ ಮಾಡುವುದಕ್ಕೆ ಕಳೆದ ವರ್ಷ ಆಗಸ್ಟ್​​ನಲ್ಲಿ ಫ್ಯೂಚರ್ ಸಮೂಹ ಒಪ್ಪಂದ ಮಾಡಿಕೊಂಡಿತ್ತು.

ಫ್ಯೂಚರ್ ಕೂಪನ್ಸ್​​ನಲ್ಲಿ ಅಮೆಜಾನ್ ಪಾಲು ಶೇ 49 ಅನ್​ಲಿಸ್ಟೆಡ್ ಕಂಪೆನಿಯಾದ ಫ್ಯೂಚರ್ ಕೂಪನ್ಸ್​​ನಲ್ಲಿ ಅಮೆಜಾನ್ ಕಂಪೆನಿ ಶೇಕಡಾ 49ರಷ್ಟು ಪಾಲು ಹೊಂದಿದೆ. ಫ್ಯೂಚರ್ ಸಮೂಹ- ರಿಲಯನ್ಸ್ ಇಂಡಸ್ಟ್ರೀಸ್ ಮಧ್ಯೆ ವ್ಯವಹಾರ ನಡೆಯುವಾಗ ತನ್ನನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಮೂಲಕ ಈಗಾಗಲೇ ಇರುವ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆಜಾನ್ ಆರೋಪ ಮಾಡಿದೆ.

ಇದನ್ನೂ ಓದಿ: ಬ್ಯಾಟರಿ ತಯಾರಿಕೆಗೆ ಧುಮುಕಲಿದೆ ರಿಲಯನ್ಸ್; ಅಂಬಾನಿ ಸಿದ್ಧಪಡಿಸಿದ್ದಾರೆ ಹೊಸ ತಂತ್ರ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್