AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ ಶೂಟೌಟ್ ಪ್ರಕರಣ: ರಾಜ್ಯದ ಕಾನೂನು ಸುವ್ಯವಸ್ಥೆ ನಾಗರಿಕ ಸಮಾಜವನ್ನು ಆತಂಕಕ್ಕೀಡು ಮಾಡಿದೆ

ಬೀದರ್ ಶೂಟೌಟ್ ಪ್ರಕರಣ: ರಾಜ್ಯದ ಕಾನೂನು ಸುವ್ಯವಸ್ಥೆ ನಾಗರಿಕ ಸಮಾಜವನ್ನು ಆತಂಕಕ್ಕೀಡು ಮಾಡಿದೆ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jan 16, 2025 | 7:08 PM

Share

ಎಟಿಎಂಗಳನ್ನು ಸ್ಥಾಪಿಸುವಾಗ ಮತ್ತು ಅವಗಳಲ್ಲಿ ನಗದನ್ನು ತುಂಬಲು ಹಣವನ್ನು ಸಾಗಿಸುವಾಗ ಅನುಸರಿಸಬೇಕಾದ ಗೈಡ್ ಲೈನ್ ಗಳ ಬಗ್ಗೆ ಗೃಹ ಇಲಾಖೆ ನೀಡುವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳನ್ನು ಬಗ್ಗೆ ಪರಮೇಶ್ವರ್ ಮಾತಾಡುತ್ತಾರೆ. ಆದರೆ ನಡೆದುಹೋಗಿರುವ ಅಚಾತುರ್ಯ, ಜೀವ ಕಳೆದುಕೊಂಡ ಗಾರ್ಡ್​ಗಳು, ಅವರ ಕುಟುಂಬಗಳ ಬಗ್ಗೆ ಅವರು ಮಾತಾಡಲ್ಲ. ಸರ್ಕಾರ ಸಂವೇದಾನಾನಶೀಲತೆಯನ್ನೂ ಕಳೆದುಕೊಂಡಿದೆಯೇ?

ಬೆಂಂಗಳೂರು: ತಮ್ಮ ಇಲಾಖೆಯ ಸಮರ್ಥನೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಏನೇ ಹೇಳಿದರೂ ರಾಜ್ಯದಲ್ಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಅಲ್ಲಗಳೆಯಲಾಗದು. ಬೀದರ್ ನಲ್ಲಿ ಇವತ್ತು ಹಾಡುಗಗಲೇ ಮತ್ತು ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುತ್ತದೆ. ಎಟಿಎಂಗಳಿಗೆ ನಗದು ತುಂಬುವ ವಾಹನವನ್ನು ಬೈಕ್ ಮೇಲೆ ಫಾಲೋ ಮಾಡುತ್ತ ಬಂದ ಇಬ್ಬರು ಹೆಲ್ಮೆಟ್ ಧಾರಿಗಳು ಕ್ಯಾಶ್ ವ್ಯಾನ್​ನಲ್ಲಿದ್ದ ಇಬ್ಬರು ಗಾರ್ಡ್​​ಗಳ ಮೇಲೆ ಗುಂಡು ಹಾರಿಸಿ ₹ 93 ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಒಬ್ಬ ಗಾರ್ಡ್ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಗಾರ್ಡ್ ಶಿವಕುಮಾರ್ ಬಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.