Shubha Poonja Profile: ಮಾದಕ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ!

Bigg Boss Kannada Season 8, Shubha Poonja Profile: ಪ್ರಬುದ್ಧ ನಟನೆಯ ಜತೆಗೆ ಮಾದಕ ನೋಟದ ಮೋಡಿ ಮಾಡಿರುವ ಶುಭಾ ಪೂಂಜಾ ಕರುನಾಡ ಪ್ರೇಕ್ಷಕರನ್ನು ಇನ್ನು ಬಿಗ್ ಬಾಸ್ ಮನೆಯಲ್ಲಿ ರಂಜಿಸಲಿದ್ದಾರೆ. ಕನ್ನಡ ಬಿಗ್ ಬಾಸ್ 8ನೇ ಸೀಸನ್​ನ …. ಅಭ್ಯರ್ಥಿಯಾಗಿ ಅವರು ಮನೆ ಪ್ರವೇಶಿಸಿದ್ದಾರೆ.

Shubha Poonja Profile: ಮಾದಕ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ!
ಶುಭಾ ಪೂಂಜಾ ಬಿಗ್ ಬಾಸ್​ಗೆ ಎಂಟ್ರಿ
Follow us
TV9 Web
| Updated By: ganapathi bhat

Updated on:Apr 06, 2022 | 7:38 PM

Bigg Boss Kannada Season 8 Contestant Shubha Poonja Profile: ಮೊಗ್ಗಿನ ಮನಸು ಚಲನಚಿತ್ರದ ಮೂಲಕ ಮನೆಮಾತಾದ ನಟಿ ಶುಭಾ ಪೂಂಜಾ ತಮಿಳು ಚಿತ್ರರಂಗದಲ್ಲೂ ಮಿಂಚಿದವರು. ದೂರದರ್ಶನ ಜಾಹಿರಾತು, ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿ, ಭರವಸೆಯ ನಟಿ ಎನಿಸಿಕೊಂಡವರು ಈಗ ಮತ್ತೆ ಟೆಲಿವಿಷನ್ ಕ್ಷೇತ್ರದ ಯಶಸ್ವಿ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಪ್ರಬುದ್ಧ ನಟನೆಯ ಜತೆಗೆ ಮಾದಕ ನೋಟದ ಮೋಡಿ ಮಾಡಿರುವ ಶುಭಾ ಪೂಂಜಾ ಕರುನಾಡ ಪ್ರೇಕ್ಷಕರನ್ನು ಇನ್ನು ಬಿಗ್ ಬಾಸ್ ಮನೆಯಲ್ಲಿ ರಂಜಿಸಲಿದ್ದಾರೆ. ಕನ್ನಡ ಬಿಗ್ ಬಾಸ್ 8ನೇ ಸೀಸನ್​ನ 2ನೇ ಅಭ್ಯರ್ಥಿಯಾಗಿ ಅವರು ಮನೆ ಪ್ರವೇಶಿಸಿದ್ದಾರೆ.

ಶುಭಾ ಪೂಂಜಾ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಮಚ್ಚಿ, ತಿರುದಿಯಾ ಇದಯತಾಯ್, ಒರು ಪೊಣ್ಣು ಒರು ಪೈಯನ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಜಾಕ್​ಪಾಟ್ ಸಿನಿಮಾ ಮೂಲಕ ಕನ್ನಡ ಸಿನಿಮಾಗಳಲ್ಲೂ ಹವಾ ಸೃಷ್ಟಿಸಿದ ಅವರು ಮೊಗ್ಗಿನ ಮನಸು ಸಿನಿಮಾಗೆ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ ಫಿಲ್ಮ್​ಫೇರ್ ಅವಾರ್ಡ್ ಪಡೆದಿದ್ದಾರೆ. ಸ್ಲಂ ಬಾಲ ಸಿನಿಮಾದಲ್ಲಿ ದುನಿಯಾ ವಿಜಯ್ ಜತೆಗೂ ಶುಭಾ ಪೂಂಜಾ ನಟಿಸಿದ್ದಾರೆ.

2004ರಿಂದ ಸಿನಿರಂಗದಲ್ಲಿ ಸಕ್ರಿಯರಾಗಿರುವ ಶುಭಾ ಪೂಂಜಾ ಸದ್ಯ ಸಮೋಸಾ ಎಂಬ ಚಲನಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಮಂಗಳೂರಿನ ಬೆಡಗಿ ಶುಭಾ, ಬೆಂಗಳೂರಿನಲ್ಲಿ ಬೆಳೆದವರು. ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು 2003ರಲ್ಲಿ ಮಿಸ್ ಚೆನ್ನೈ ಟಾಪ್ ಮಾಡೆಲ್ ಅವಾರ್ಡ್ ಕೂಡ ಪಡೆದಿದ್ದರು. ಬಹಳಷ್ಟು ಯುವ ಅಭಿಮಾನಿ ಬಳಗವನ್ನು ಹೊಂದಿರುವ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಕೂಡ ಮೋಡಿ ಮಾಡುತ್ತಾರೆ ಎಂಬುದು ಅಭಿಮಾನಿಗಳ ಆಶಯ.

ಕಳೆದ ಏಳು ಸೀಸನ್​ನಲ್ಲೂ ನಿಮಗೆ ಬುಲಾವ್ ಬರುತ್ತಿತ್ತು. ಆದರೆ, ಈ ಬಾರಿಯೇ ಯಾಕೆ ಬಿಗ್ ಬಾಸ್​ಗೆ ಆಗಮಿಸಿದಿರಿ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದರು. ಶೀಘ್ರದಲ್ಲೇ ಮದುವೆ ಆಗಲಿದ್ದೇನೆ. ಈಗ ಬಿಗ್ ಬಾಸ್ ಮನೆಗೆ ಹೋಗದಿದ್ದರೆ ಇನ್ನೆಂದೂ ಹೋಗಲು ಆಗುವುದಿಲ್ಲ ಎಂದು ಯೋಚಿಸಿ ಈಗ ಬರುತ್ತಿದ್ದೇನೆ. ಬಿಗ್ ಬಾಸ್ ಮನೆಗೆ ಆಗಮಿಸಲು ಇದು ಸರಿಯಾದ ಸಮಯ ಎಂದು ಶುಭಾ ಪೂಂಜ ಹೇಳಿದರು.  ನನ್ನ ಎಲ್ಲಾ ಕೆಲಸಗಳಲ್ಲೂ ಅಮ್ಮ ತುಂಬಾ ಪ್ರೋತ್ಸಾಹ ನೀಡುತ್ತಾರೆ ಎಂದು ಶುಭಾ ತಿಳಿಸಿದರು.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: ಮೊದಲ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಧನುಶ್ರೀ

Bigg Boss Kannada 8: ಕನ್ನಡ ಬಿಗ್​ ಬಾಸ್​​ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!

Published On - 6:31 pm, Sun, 28 February 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ