ಉಡುಪಿ: ಪುರಾತತ್ವ ಇಲಾಖೆ ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಈಗ ಇಲಾಖೆ ಕೆಲಸವನ್ನ ಮಾಡುತ್ತಿಲ್ಲ ಎಂದು ನಗರದಲ್ಲಿ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಬಂದ ನಂತರ ಇಲಾಖೆಯ ಮೇಲೆ ನಿರೀಕ್ಷೆ ಇತ್ತು. ಸಕ್ಷಮವಾಗಿ ಕಾರ್ಯನಿರ್ವಹಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. BJP ಬಂದ ಬಳಿಕ ಇಲಾಖೆ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಕೆ.ಕೆ.ಮೊಹಮ್ಮದ್ ಬೇಸರ ವ್ಯಕ್ತಪಡಿಸಿದರು.
ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ಗೆ ಗಣ್ಯರಿಂದ ಸನ್ಮಾನ
ಸಂಸ್ಕೃತಿ ಉಳಿಸುತ್ತೇವೆಂಬ ವಾತಾವರಣವನ್ನು ಸೃಷ್ಟಿಸಿದ್ದರು. ಹಾಗಾಗಿ, ನಾನು ಬಿಜೆಪಿ ಬಹಿರಂಗವಾಗಿಯೇ ಟೀಕಿಸುತ್ತಿದ್ದೇನೆ. ಪ್ರಾಚ್ಯ ವಸ್ತುಗಳ ಸಂರಕ್ಷಣೆ ಕಳಪೆಯಾಗಿದೆ. ನಮ್ಮ ಕೆಲಸ ಹಿಂದಿಗಿಂತಲೂ ಕಳಪೆ ಆಗಿದೆ ಎಂದು ಮೊಹಮ್ಮದ್ ಹೇಳಿದರು.
‘ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರ್ಕಾರಗಳು ಅತ್ಯುತ್ತಮ ಕೊಡುಗೆ ನೀಡಿದ್ದವು’ ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರ್ಕಾರಗಳು ಅತ್ಯುತ್ತಮ ಕೊಡುಗೆಯನ್ನು ನೀಡಿದ್ದವು. ಆದರೆ, ಬಿಜೆಪಿ ಸರ್ಕಾರದಿಂದ ಮಂದಿರ ಮಸೀದಿಗಳ ರಕ್ಷಣೆ ಆಗ್ತಿಲ್ಲ. ಬಿಜೆಪಿ ಸರ್ಕಾರದ ಮೊದಲ 5 ವರ್ಷಗಳ ಬಗ್ಗೆ ನನ್ನ ಟೀಕೆ ಇಲ್ಲ. BJP ಸರ್ಕಾರ 2ನೇ ಅವಧಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರು
ಅಯೋಧ್ಯೆಯ ರಾಮಮಂದಿರದ ಉತ್ಖನನದ ರೂವಾರಿ ಆಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಅವರ ಅಪಾರ ಕೊಡುಗೆಯನ್ನು ಗೌರವಿಸಿ ಇಂದು ಪಾದೂರು ಪ್ರಶಸ್ತಿ ಪುರಸ್ಕಾರಯನ್ನು ನೀಡಿ ಸನ್ಮಾನಿಸಲಾಯಿತು. ಖ್ಯಾತ ಇತಿಹಾಸಕಾರ ಡಾ.ಪಾದೂರು ಗುರುರಾಜ ಭಟ್ ಅವರ ನೆನಪಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಕೆ.ಕೆ.ಮೊಹಮ್ಮದ್ ಇಂದು ಭಾಜನರಾದರು.
ಪಾದೂರು ಪ್ರಶಸ್ತಿ ಪುರಸ್ಕಾರ ಸಮಾರಂಭ
‘ಕಾಶಿ ಮತ್ತು ಮಥುರಾ ವಿವಾದವನ್ನು ಈ ರೀತಿ ಬಗೆಹರಿಸಲು ಸಾಧ್ಯವಿಲ್ಲ’ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಕೆ.ಮೊಹಮ್ಮದ್ ಇಷ್ಟೊಂದು ಭಾವನಾತ್ಮಕವಾಗಿ ನನಗೆ ಎಲ್ಲಿಯೂ ಗೌರವ ಸಿಕ್ಕಿಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ ಎಂದು ಹೇಳಿದರು. ಆದರೆ, ಕಾಶಿ ಮತ್ತು ಮಥುರಾ ವಿವಾದವನ್ನು ಈ ರೀತಿ ಬಗೆಹರಿಸಲು ಸಾಧ್ಯವಿಲ್ಲ. ಏಕೆಂದರೆ, 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆ ಅನ್ವಯ 1947ಕ್ಕೆ ಮೊದಲು ಇದ್ದ ಸ್ಥಿತಿಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಆದರೆ, ಅಯೋಧ್ಯೆಯ ರಾಮಮಂದಿರ ಪ್ರಕರಣ ಈ ಕಾಯ್ದೆಯಿಂದ ಹೊರತಾಗಿದೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್
ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ ಬೇರೆ ದೇವಾಲಯಗಳಿಗೆ ಬೇಡಿಕೆ ಇಡುವಂತಿಲ್ಲ. ಮುಸಲ್ಮಾನರು ಸ್ವಇಚ್ಛೆಯಿಂದ ಹಸ್ತಾಂತರ ಮಾಡಿದರೆ ಈ ಬಿಕ್ಕಟ್ಟು ಬಗೆಹರಿಯುತ್ತದೆ. ಮುಸಲ್ಮಾನರು ತಾವೇ ಮುಂದೆ ಬಂದು ಹೃದಯಾಂತರಾಳದಿಂದ ಬಿಟ್ಟುಕೊಟ್ಟರೆ ವಿವಾದ ಬಗೆಹರಿಯುತ್ತದೆ ಎಂದು ಮೊಹಮ್ಮದ್ ಹೇಳಿದರು.
‘ರಾಮಮಂದಿರ ವಿಚಾರವನ್ನು ವಿವಾದಿತ ಎನ್ನುವುದು ತಪ್ಪು’ ರಾಮಮಂದಿರ ವಿಚಾರವನ್ನು ವಿವಾದಿತ ಎನ್ನುವುದು ತಪ್ಪು. ಈಗ ಆ ಪ್ರಕರಣದಲ್ಲಿ ಯಾವುದೇ ವಿವಾದಗಳು ಉಳಿದಿಲ್ಲ. ಕೆಲವರು ವಿವಾದವನ್ನು ಜೀವಂತ ಇರಿಸಲು ಪ್ರಯತ್ನಿಸುತ್ತಿರಬಹುದು. ಆದರೆ, ಸುಪ್ರೀಂ ಕೋರ್ಟ್ ಈ ವಿವಾದವನ್ನು ಸಂಪೂರ್ಣವಾಗಿ ಬಗೆಹರಿಸಿದೆ. ಯಾವ ಗೊಂದಲಕ್ಕೂ ಅವಕಾಶವಿಲ್ಲ ಎಂದು ಪುರಾತತ್ವಶಾಸ್ತ್ರಜ್ಞ ಪದ್ಮಶ್ರೀ ಕೆಕೆ ಮೊಹಮ್ಮದ್ ಹೇಳಿದರು.
‘ರಾಮಮಂದಿರ ವಿಚಾರವನ್ನು ವಿವಾದಿತ ಎನ್ನುವುದು ತಪ್ಪು’
ಇದನ್ನೂ ಓದಿ: ಈ ಜನನಾಯಕರು.. ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ -ಸಿದ್ದುಗೆ ಪಲಿಮಾರು ಶ್ರೀ ತಿರುಗೇಟು