ಈ ಜನನಾಯಕರು.. ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ -ಸಿದ್ದುಗೆ ಪಲಿಮಾರು ಶ್ರೀ ತಿರುಗೇಟು
ಈ ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ. ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ಈ ಜನನಾಯಕರು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಪಲಿಮಾರು ವಿದ್ಯಾಧೀಶಶ್ರೀ ಪರೋಕ್ಷವಾಗಿ ತಿರುಗೇಟು ಕೊಟ್ಟರು.
ಉಡುಪಿ: ಕೆಲವರು ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡು. ಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷ್ಯ ಭೂಗರ್ಭದಿಂದ ಪಡೆಯಲಾಗಿದೆ. ಮೊಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿ ಕಣ್ಣ ಮುಂದಿವೆ. ಆದರೆ, ಕೆಲ ಜನನಾಯಕರು ಮಂದಿರಕ್ಕೆ 10 ರೂಪಾಯಿ ಕೊಡಬೇಕಿದ್ದರೂ ಅಯೋಧ್ಯೆ ರಾಮಮಂದಿರ ಕ್ಷೇತ್ರ ವಿವಾದಿತ ಭೂಮಿ ಎನ್ನುತ್ತಿದ್ದಾರೆ ಎಂದು ರಾಮಮಂದಿರ ವಿವಾದಿತ ಕ್ಷೇತ್ರ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪಲಿಮಾರು ವಿದ್ಯಾಧೀಶಶ್ರೀಗಳು ತಿರುಗೇಟು ಕೊಟ್ಟಿದ್ದಾರೆ.
ಮಂದಿರ ಇದ್ದ ಬಗ್ಗೆ ಎಲ್ಲಾ ಪುರಾವೆ ನ್ಯಾಯಾಲಯಕ್ಕೆ ನೀಡಲಾಗಿದೆ. ಐವರು ನ್ಯಾಯಮೂರ್ತಿಗಳು ಸೇರಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮುದಾಯದ ನ್ಯಾಯಮೂರ್ತಿ ಇದ್ದರು. ಆದರೂ ವಕೀಲರಾಗಿದ್ದ ಓರ್ವ ಜನನಾಯಕ ತೀರ್ಪನ್ನು ಒಪ್ಪುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಪಲಿಮಾರು ವಿದ್ಯಾಧೀಶಶ್ರೀ ಕಿಡಿಕಾರಿದರು.
‘ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ಈ ಜನನಾಯಕರು ನೀಡುತ್ತಿದ್ದಾರೆ’ ಈ ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ. ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ಈ ಜನನಾಯಕರು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಪಲಿಮಾರು ವಿದ್ಯಾಧೀಶಶ್ರೀ ಪರೋಕ್ಷವಾಗಿ ತಿರುಗೇಟು ಕೊಟ್ಟರು. ನಗರದಲ್ಲಿ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಅವರಿಗಾಗಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಾಮೀಜಿಗಳು ಈ ಕುರಿತು ಮಾತನಾಡಿದರು.
‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಅಲ್ಲ, ಮಠದ ರೀತಿಯಲ್ಲಿದೆ’ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದದ ವಿಚಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಅಲ್ಲ, ಮಠದ ರೀತಿಯಲ್ಲಿದೆ ಎಂದು ಪಲಿಮಾರು ವಿದ್ಯಾಧೀಶ ತೀರ್ಥರು ಹೇಳಿದರು. ಸದ್ಯ ಶೈವಾಗಮ, ಮಾಧ್ವ ಸಂಪ್ರದಾಯ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ಕುಕ್ಕೆ ಶ್ರೀಕ್ಷೇತ್ರ, ಮಠದವರೇ ಪೂಜೆ ಮಾಡಿಕೊಂಡಿದ್ದರು. ತಲೆ ಮೇಲೆ ಉತ್ಸವಮೂರ್ತಿ ಹೊರುವ ಸಂಪ್ರದಾಯವಿಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಹಾಗೆ ಪೂಜೆ ಮಾಡಲಿ ಎಂದು ಶ್ರೀಗಳು ಹೇಳಿದರು.
‘ನನಗೆ ರುದ್ರನ ಮೇಲೆ ಯಾವುದೇ ದ್ವೇಷ ಇಲ್ಲ’ ನನಗೆ ರುದ್ರನ ಮೇಲೆ ಯಾವುದೇ ದ್ವೇಷ ಇಲ್ಲ. ನಾನೂ ಪಾರಾಯಣ ಮಾಡಿಸುತ್ತೇನೆಂದ ವಿದ್ಯಾಧೀಶ ತೀರ್ಥರು ಮಂತ್ರ ಕ್ರಮ ತಂತ್ರ ಎಂಬುದಿದೆ. ಅದೇ ರೀತಿ ನಡೆದರೆ ಚೆಂದ. ಹಾಗಾಗಿ, ಮಧ್ವ ಸಂಪ್ರದಾಯವೇ ಇರಲಿ ಎಂದು ಪರೋಕ್ಷವಾಗಿ ಹೇಳಿಕೆ ಕೊಟ್ಟರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠದ ಸಂಪ್ರದಾಯದಂತೆ ಪೂಜಾ ವಿಧಾನ ನಡೆಯುತ್ತಿದೆ. ಉತ್ಸವ ಮೂರ್ತಿ ತಲೆ ಮೇಲೆ ಹೊರುವ ಸಂಪ್ರದಾಯವಿಲ್ಲ. ಹಿಂದಿನಿಂದ ನಡೆದುಕೊಂಡು ಬಂದಂತೆ ಪೂಜೆ ನಡೀಬೇಕು. ವ್ಯತ್ಯಾಸಗಳು ಆದರೆ ಮುಂದೆ ದೇಶಕ್ಕೆ ಆಪತ್ತು ಬರುತ್ತದೆ. ಹೀಗಾಗಿ, ಮಧ್ವ ಸಂಪ್ರದಾಯವೇ ಇರಲಿ ಎಂದು ಉಡುಪಿ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಗಳು ಹೇಳಿದರು.
‘ನಮ್ಮ ಮೇಲೆ ಈ ವಿಚಾರವಾಗಿ ಯಾವುದೇ ರೀತಿ ಒತ್ತಡ ಇಲ್ಲ’ ಇತ್ತ, ಈ ವಿವಾದದ ಬಗ್ಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೂಜಾಪದ್ಧತಿ ಬಗ್ಗೆ 2 ಗುಂಪುಗಳ ನಡುವೆ ಜಿಜ್ಞಾಸೆ ಮೂಡಿದೆ. ಮಾ.1ರಂದು ಎರಡೂ ಗುಂಪಿನವರ ಜೊತೆ ಸಭೆ ನಡೆಸಿ ಚರ್ಚೆ ಮಾಡುತ್ತೇವೆ. ನಮ್ಮ ಮೇಲೆ ಈ ವಿಚಾರವಾಗಿ ಯಾವುದೇ ರೀತಿ ಒತ್ತಡ ಇಲ್ಲ. ಶಿವನ ಅಂಶ ಇರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಕುಕ್ಕೆಯಲ್ಲಿ ಈ ಬಗ್ಗೆ ಆಗಮ ಪಂಡಿತರು ತೀರ್ಮಾನಿಸುತ್ತಾರೆ. ದೇಗುಲ, ಮುಜರಾಯಿ ಇಲಾಖೆ ಆಗಮ ಪಂಡಿತರ ತೀರ್ಮಾನ ಕೈಗೊಳ್ಳುತ್ತಾರೆ. ಅಷ್ಟಮಂಗಲದ ವಿಚಾರವನ್ನು ಆಡಳಿತ ಮಂಡಳಿ ಗಮನಿಸುತ್ತೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ -ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
Published On - 4:52 pm, Sun, 28 February 21