ರಾಮಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ -ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ. 1,500 ಕೋಟಿ ಹಣ ಸಂಗ್ರಹವಾಗುತ್ತೆಂದು ಅಂದುಕೊಂಡಿದ್ದೆವು. ರಾಮ ಭಕ್ತರು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥಶ್ರೀ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ -ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥಶ್ರೀ
Follow us
|

Updated on: Feb 27, 2021 | 11:05 PM

ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಮರ್ಪಣಾ ಅಭಿಯಾನಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀಗಳಿಂದ ತೆರೆ ಬಿದ್ದಿದೆ. ಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ ಎಂದು ಕಾರ್ಯಕ್ರಮದ ಬಳಿಕ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ರಾಷ್ಟ್ರಧರ್ಮ ಸಂಸ್ಥೆ ನಿಧಿ ಸಮರ್ಪಣಾ ಅಭಿಯಾನ ನಡೆಸಿತ್ತು.

ಮಂದಿರ ನಿರ್ಮಾಣಕ್ಕೆ 2,100 ಕೋಟಿ ರೂ. ಸಂಗ್ರಹವಾಗಿದೆ. 1,500 ಕೋಟಿ ಹಣ ಸಂಗ್ರಹವಾಗುತ್ತೆಂದು ಅಂದುಕೊಂಡಿದ್ದೆವು. ರಾಮ ಭಕ್ತರು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾರೆ. ವಿವಾದಿತ ಭೂಮಿ ಅಲ್ಲವೆಂದು ನ್ಯಾಯಾಲಯ ತೀರ್ಪು ನೀಡಿದೆ. ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್‌ ತೀರ್ಪು ನೀಡಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥಶ್ರೀ ಹೇಳಿದ್ದಾರೆ. ಬೆಂಗಳೂರಿನ ಲಾಲ್​ಬಾಗ್​ ವೆಸ್ಟ್​ಗೇಟ್​ ಬಳಿಯ ಅನಂತವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

ಅನಂತ ವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ 60 ಸಾವಿರ ನಾಣ್ಯಗಳಿಂದ ಶ್ರೀರಾಮನ ಕಲಾಕೃತಿ ನಿರ್ಮಾಣವಾಯ್ತು. ರಾಮಮಂದಿರ ಹಾಗೂ ಶ್ರೀರಾಮನ ಕಲಾಕೃತಿ ನಿರ್ಮಾಣವಾಯ್ತು. ಜ.15ಕ್ಕೆ ಆರಂಭವಾಗಿದ್ದ ದೇಣಿಗೆ ಸಮರ್ಪಣಾ ಅಭಿಯಾನಕ್ಕೆ ಶ್ರೀಗಳಿಂದ ತೆರೆ ಬಿದ್ದಿದೆ.

‘ರಾಮನಿಗೆ ಸಿದ್ದರಾಮಯ್ಯ, ಹೆಚ್‌ಡಿಕೆ ಅಪಮಾನ ಮಾಡ್ತಿದ್ದಾರೆ’ ಬಿಜೆಪಿ, ಆರ್‌ಎಸ್‌ಎಸ್ ವಿರೋಧಿಸಲು ಹೋಗಿ ರಾಮನಿಗೆ ಸಿದ್ದರಾಮಯ್ಯ, ಹೆಚ್‌ಡಿಕೆ ಅಪಮಾನ ಮಾಡ್ತಿದ್ದಾರೆ ಎಂದು ವಿಜಯಪುರ ನಗರದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಿಧಿ ಸಂಗ್ರಹ ಕುರಿತು ಆಕ್ಷೇಪಿಸಿದ್ದಕ್ಕೆ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಕುರಿತು ಆಕ್ಷೇಪಿಸಿದ್ದರು. ಶ್ರೀರಾಮ ಹಾಗೂ ರಾಮ ಭಕ್ತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಇದನ್ನೂ ಓದಿ: ವಹ್ನಿಕುಲ ಕ್ಷತ್ರಿಯ ಕುಲದೇವತೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಹಿರಿಯ ಸಾಹಿತಿ S​​.L.ಭೈರಪ್ಪ ಕ್ಷಮೆಯಾಚಿಸುವಂತೆ ಆಗ್ರಹ