ಆಂಜನೇಯನ ದರ್ಶನಕ್ಕೆ ಬಂದು.. 20 ಸಾವಿರದ ಮೊಬೈಲ್ ಕದ್ದೊಯ್ದ ಖತರ್ನಾಕ್ ಕಳ್ಳಿಯರು
ದೇವರ ದರ್ಶನಕ್ಕೆಂದು ಬಂದ ಕಳ್ಳಿಯರಿಬ್ಬರು 20 ಸಾವಿರದ ಮೊಬೈಲ್ ಕದ್ದೊಯ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಆಂಜನೇಯ ದೇಗುಲದಲ್ಲಿ ನಡೆದಿದೆ. ದೇವನಾಳ ಗ್ರಾಮದ ಗಿರೀಶ್ ಎಂಬುವವರಿಗೆ ಸೇರಿದ ಮೊಬೈಲ್‌ನ ಈ ಖತರ್ನಾಕ್ ಲೆಡೀಸ್ ಕದ್ದಿದ್ದಾರೆ.

ದೇವರ ದರ್ಶನಕ್ಕೆಂದು ಬಂದ ಕಳ್ಳಿಯರಿಬ್ಬರು 20 ಸಾವಿರದ ಮೊಬೈಲ್ ಕದ್ದೊಯ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಆಂಜನೇಯ ದೇಗುಲದಲ್ಲಿ ನಡೆದಿದೆ. ದೇವನಾಳ ಗ್ರಾಮದ ಗಿರೀಶ್ ಎಂಬುವವರಿಗೆ ಸೇರಿದ ಮೊಬೈಲ್‌ನ ಈ ಖತರ್ನಾಕ್ ಲೆಡೀಸ್ ಕದ್ದಿದ್ದಾರೆ. ಗಿರೀಶ್ ಹುಡುಗನೊಬ್ಬನ ಕೈಗೆ ಮೊಬೈಲ್ ಕೊಟ್ಟು ದೇವರ ದರ್ಶನಕ್ಕೆ ತೆರಳಿದ್ರು. ಈ ವೇಳೆ, ಬಾಲಕನ ಕೈಯಲ್ಲಿದ್ದ ಮೊಬೈಲ್ ಕದ್ದು ಕಳ್ಳಿಯರಿಬ್ಬರು ಪರಾರಿಯಾಗಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

20 ಸಾವಿರದ ಮೊಬೈಲ್ ಕದ್ದೊಯ್ದ ಖತರ್ನಾಕ್ ಕಳ್ಳಿಯರು
108 ಆಂಬುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ 108 ಆಂಬುಲೆನ್ಸ್ನಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ನಡಿದಿದೆ. ಕಂದಗಲ್-ಇಳಕಲ್ ಮಾರ್ಗ ಮಧ್ಯೆ ಗರ್ಭಿಣಿ ಮಗುವಿಗೆ ಜನ್ಮನೀಡಿದ್ದಾರೆ.
ಕಂದಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಳಕಲ್ ಸರ್ಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್ನಲ್ಲಿ ಹೊರಟಿದ್ದ ನಿಂಗಮ್ಮಗೆ ಮಾರ್ಗ ಮಧ್ಯೆ ಹೆರಿಗೆ ಬೇನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಸಿಬ್ಬಂದಿ ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ನಿಂಗಮ್ಮ ಮತ್ತು ಮಗು ಆರೋಗ್ಯವಾಗಿದ್ದಾರೆ. ಸದ್ಯ, ತಾಯಿ ಮಗುವನ್ನು ಇಳಕಲ್ ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

108 ಆಂಬುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಕೋಣನೂರು, ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು, ಚುಂಚನಹಳ್ಳಿಯಲ್ಲಿ ನಡೆದಿದೆ. ಅರಣ್ಯ ಪ್ರದೇಶದ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅಗ್ನಿ ಅವಘಡದಿಂದ ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಬಾವಿಯಲ್ಲಿ ಸಂಗ್ರಹಿಸಿದ್ದ ಜಿಲೆಟಿನ್, ಡಿಟೋನೇಟರ್ ಜಪ್ತಿ ಬಾವಿಯಲ್ಲಿ ಸಂಗ್ರಹಿಸಿದ್ದ ಜಿಲೆಟಿನ್, ಡಿಟೋನೇಟರ್ ಜಪ್ತಿ ಮಾಡಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ವರದಿಯಾಗಿದೆ. ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಶಾಂತಿಲಾಲ್ ಮತ್ತು ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ತ್ಯಾಗರಾಜ್ ಬಂಧಿತ ಆರೋಪಿಗಳು.
ಇಬ್ಬರನ್ನು ಬಂಧಿಸಿ ಜಿಲೆಟಿನ್ ಹಾಗೂ ಡಿಟೋನೇಟರ್ ಜಪ್ತಿ ಮಾಡಲಾಗಿದೆ. ಹತ್ತರವಾಟದ ಕಲ್ಲಪ್ಪ ಸೂಜಿ ಎಂಬುವವರ ಬಾವಿಯಲ್ಲಿ ಇವೆಲ್ಲಾ ಪತ್ತೆಯಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಯಲ್ಲಿ ಸಂಗ್ರಹಿಸಿದ್ದ ಜಿಲೆಟಿನ್, ಡಿಟೋನೇಟರ್ ಜಪ್ತಿ
ಲಾರಿಗೆ ಬೈಕ್ ಡಿಕ್ಕಿ: ಇಬ್ಬರ ಸಾವು ಸುಲ್ತಾನಪುರ ಕ್ರಾಸ್ ಬಳಿ ಲಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಕ್ರಾಸ್ನಲ್ಲಿ ನಡಿದಿದೆ. ವಿಠಲಾಪುರದ ರಾಜಶೇಖರ(20), ಜಗದೀಶ್(21) ಮೃತ ದುರ್ದೈವಿಗಳು. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಭೀಕರ ದೃಶ್ಯ
ಇದನ್ನೂ ಓದಿ: ಅಂತೂ 4 ದಶಕಗಳ ಕಗ್ಗಂಟು ಬಗೆಹರಿಯಿತು.. ಹೊಸ ಅವತಾರದಲ್ಲಿ ಕಾಣಸಿಗಲಿದೆ ಸುಪ್ರಸಿದ್ಧ ಅಗಸ್ತ್ಯ ತೀರ್ಥ!