ಈ ಹಿಂದೆ ಗದಗ ಶಹರ ಠಾಣೆ ಸಿಪಿಐ ಪಿ.ವಿ. ಸಾಲಿಮಠ ಹೆಸರಲ್ಲಿ ನಕಲಿ ಫೆಸ್ಬುಕ್ ಖಾತೆಯನ್ನು ಸೃಷ್ಟಿ ಮಾಡಿದ ಠಕ್ಕರು ಅವರ ಗೆಳೆಯರಿಂದ ಹಣ ವಸೂಲಿ ಮಾಡಿರುವ ವಿಚಿತ್ರವಾದರೂ ಸತ್ಯವಾದ ಘಟನೆ ಗದಗದಲ್ಲಿ ನಡೆದಿತ್ತು.
ಪಂಚಾಕ್ಷರಿ ಸಾಲಿಮಠ ಹೆಸರಿನಲ್ಲಿ ನಕಲಿ ಪೇಸ್ಬುಕ್ ಅಕೌಂಡ್ ಕ್ರಿಯೇಟ್ ಮಾಡಿದ ನಂತರ ಕಳ್ಳರು ಅರ್ಜೆಂಟಾಗಿ ಹಣದ ಅವಶ್ಯಕತೆ ಇದೆ ಎಂದು ಸಾಲಿಮಠ ಅವರ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ವಸೂಲಿ ಮಾಡಿದ್ದರು. ವಿಷಯ ಗೊತ್ತಾದ ಕೂಡಲೇ ಖುದ್ದು ಸಿಪಿಐ ಸಾಲಿಮಠ, ತಮ್ಮ ಸ್ಟೇಟಸ್ ಮೂಲಕ ಸ್ನೇಹಿತರಿಗೆ ಸಂದೇಶ ನೀಡಿ, ’ನನ್ನ ಫೇಸ್ಬುಕ್ ಹ್ಯಾಕ್ ಆಗಿದೆ ಯಾರೂ ಹಣ ಹಾಕಬೇಡಿ’ ಅಂತ ಸಂದೇಶ ಪೋಸ್ಟ್ ಮಾಡಿದ್ದರು. ಆಮೇಲೆ ಅವರು ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಸೈಬರ್ ಕ್ರೈಂ ಗೆ ದೂರು ನೀಡಿದ್ದರು. ಜನ ಸಾಮಾನ್ಯರಿಗೆ ಆಗುತ್ತಿದ್ದ ಹ್ಯಾಕಿಂಗ್ ಸಮಸ್ಯೆಯನ್ನು ಈಗ ಪೊಲೀಸ್ ಅಧಿಕಾರಿಗಳಿಗೂ ಆಗುತ್ತಿದೆ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: Food Department website: ಆಹಾರ ಇಲಾಖೆಯ ವೆಬ್ಸೈಟ್ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ