AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Food Department website: ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ

Food Department : ಆಹಾರ ಇಲಾಖೆಯ ವೆಬ್​ಸೈಟ್ ಹ್ಯಾಕ್ ಮಾಡಿ ಎಪಿಎಲ್ ಕಾರ್ಡುದಾರರನ್ನೆ ಬಿಪಿಎಲ್ ಕಾರ್ಡುದಾರರೆಂದು ಅಪಲೋಡ್ ಮಾಡಿ ಪಡಿತರ ದೋಚುತ್ತಿದ್ದ ಕೃತ್ಯದಲ್ಲಿ ಶಾಮೀಲಾಗಿದ್ದ ಹುಲಿಗೆಮ್ಮ ಸೇರಿ ಐವರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.

Food Department website: ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ
ಆಹಾರ ಇಲಾಖೆಯ ವೆಬ್​ಸೈಟ್​ ಹ್ಯಾಕ್ ಮಾಡಿದವರು
sandhya thejappa
| Updated By: ಸಾಧು ಶ್ರೀನಾಥ್​|

Updated on: Feb 22, 2021 | 11:36 AM

Share

ರಾಯಚೂರು: ಜಿಲ್ಲೆಯಲ್ಲಿ ಸದ್ದಿಲ್ಲದೇ ಆಹಾರ ಇಲಾಖೆಯ ವೆಬ್​ಸೈಟ್ ಹ್ಯಾಕ್ ಮಾಡಿ ಎಪಿಎಲ್ ಕಾರ್ಡುದಾರರನ್ನು ಬಿಪಿಎಲ್ ಕಾರ್ಡುದಾರರೆಂದು ಆನ್​ಲೈನ್​ನಲ್ಲಿ ಅಪ್ಲೋ​ಡ್ ಮಾಡಿ ನಿತ್ಯವೂ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಧಾನ್ಯ ದೋಚುತ್ತಿದ್ದ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ನಿರಂತರವಾಗಿ ದಂಧೆ ನಡೆಸುತ್ತಿದ್ದ ಐವರ ವಿರುದ್ಧ ಎಫ್ಐಆರ್ ಹಾಕಿರುವ ಪೊಲೀಸರು ಸದ್ಯ ನಾಲ್ವರನ್ನು ಜೈಲಿಗೆ ತಳ್ಳಿದ್ದಾರೆ. ಈ ಪ್ರಕರಣ ಸಂಬಂಧ ಭಾಗ್ಯಶ್ರಿ, ತಿಮ್ಮಣ್ಣ, ಬಸವರಾಜ ಮತ್ತು ಬಸಪ್ಪ ಎಂಬುವವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಸಂಚಾಲಕಿ ಭಾಗ್ಯಶ್ರಿ ಮತ್ತು ಆಕೆಯ ಸಹಾಯಕ ತಿಮ್ಮಣ್ಣ ಸೇರಿಕೊಂಡು ಆಹಾರ ಇಲಾಖೆಯ ವೆಬ್​ಸೈಟ್ ಹ್ಯಾಕ್ ಮಾಡಿ ಸುಮಾರು 545 ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರಾಗಿ ಪರಿವರ್ತಿಸಿ ಪಡಿತರ ಲೂಟಿ ಮಾಡಿದ್ದರು ಎಂದು ತಿಳಿದುಬಂದಿದೆ.  ಇವರಿಬ್ಬರ ಕೃತ್ಯಕ್ಕೆ ಸಹಕರಿಸಿರುವ ಸಿಂಧನೂರು ನಗರದಲ್ಲಿರುವ ಕಂಪ್ಯೂಟರ್ ಸೆಂಟರ್​ನ ಬಸವರಾಜ ಎಂಬಾತ ಹುಲಿಗೆಮ್ಮ ಮತ್ತು ಬಸಪ್ಪ ದಂಪತಿಯ ಎಪಿಎಲ್ ಕಾರ್ಡನ್ನ ಬಿಪಿಎಲ್ ಕಾರ್ಡನ್ನಾಗಿ ಪರಿವರ್ತಿಸಿದ್ದಾರೆ. Food Department website

ಆಹಾರ ಇಲಾಖೆಯ ವೆಬ್​ಸೈಟ್ ಹ್ಯಾಕ್ ಮಾಡಿ ಎಪಿಎಲ್ ಕಾರ್ಡುದಾರರನ್ನೆ ಬಿಪಿಎಲ್ ಕಾರ್ಡುದಾರರೆಂದು ಅಪ್​ಲೋಡ್ ಮಾಡಿ ಪಡಿತರ ದೋಚುತ್ತಿದ್ದ ಕೃತ್ಯದಲ್ಲಿ ಶಾಮೀಲಾಗಿದ್ದ ಹುಲಿಗೆಮ್ಮ ಸೇರಿ ಐವರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ನಾಲ್ವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಪರಾರಿಯಾಗಿರುವ ಹುಲಿಗೆಮ್ಮ ಪತ್ತೆಗೆ ಜಾಲ ಬೀಸಿದ್ದಾರೆ. ಹೀಗಾಗಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದವರನ್ನು ಕೇವಲ ಜೈಲಿಗೆ ತಳ್ಳಿದರೆ ಸಾಲದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಪಿಎಲ್ ಕಾರ್ಡುದಾರರು ಆಗ್ರಹಿಸುತ್ತಿದ್ದಾರೆ.

ಪೊಲೀಸ್​ ತನಿಖೆಯಿಂದ ಬಯಲು ಬೆಳಗುರ್ಕಿ ಗ್ರಾಮದ 545 ಜನ ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರೆಂದು ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್ಲೋಡ್ ಮಾಡಿ ನಿರಂತರವಾಗಿ ಆಹಾರ ಇಲಾಖೆಯ ಪಡಿತರ ದೋಚುತ್ತಿರುವ ಬಗ್ಗೆ ಪೊಲೀಸರು ನಡೆಸಿರುವ ತನಿಖೆಯಿಂದ ಬಯಲಾಗಿದೆ. ಆದರೆ ಆಹಾರ ಇಲಾಖೆಯಲ್ಲಿ ಇಷ್ಟೆಲ್ಲಾ ಗೋಲ್​ಮಾಲ್ ನಡೆಯುತ್ತಿದ್ದರೂ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ಹತ್ತಾರು ಅನುಮಾನಕ್ಕೆ ಆಸ್ಪದ ನೀಡುತ್ತಿದೆ. ಆಹಾರ ಇಲಾಖೆಯ ಸಿಬ್ಬಂದಿಯ ಸಹಕಾರವಿಲ್ಲದೇ ವೆಬ್​ಸೈಟ್ ಹ್ಯಾಕ್ ಮಾಡಲು ಹೇಗೆ ಸಾಧ್ಯವೆಂಬ ಮಾತುಗಳು ಸಿಂಧನೂರಲ್ಲಿ ಹರಿದಾಡುತ್ತಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಅರುಣಕುಮಾರ್ ಈಗಾಗಲೇ ಕೆಲ ಖಾಸಗಿ ಫ್ರಾಂಚೈಸಿಗಳನ್ನ ಇಲಾಖೆಯ ಆಯುಕ್ತರು ರದ್ದುಗೊಳಿಸಲು ಸೂಚಿಸಿದ್ದಾರೆ. ಹೀಗಾಗಿ ಆ ನಿಟ್ಟಿನಲ್ಲಿ ಆನ್​ಲೈನ್​ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಾಂಚೈಸಿಗಳನ್ನ ರದ್ದುಗೊಳಿಸಲು ಇಲಾಖೆ ನಿರ್ಧರಿಸಲಾಗದೆ. ಈಗಾಗಲೇ 35 ಪ್ರಾಂಚೈಸಿಗಳನ್ನ ರದ್ದುಗೊಳಿಸಲು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

 Koo ಆ್ಯಪ್​ ಮಾಹಿತಿ ಕದಿಯಬಹುದು ಎಂದ ಹ್ಯಾಕರ್ಸ್​​: ತಿರುಗೇಟು ನೀಡಿದ ಸಿಇಒ

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ