ಅಂತೂ 4 ದಶಕಗಳ ಕಗ್ಗಂಟು ಬಗೆಹರಿಯಿತು.. ಹೊಸ ಅವತಾರದಲ್ಲಿ ಕಾಣಸಿಗಲಿದೆ ಸುಪ್ರಸಿದ್ಧ ಅಗಸ್ತ್ಯ ತೀರ್ಥ!
ಜಿಲ್ಲೆಯೆಂದರೆ ಥಟ್ಟನೆ ನೆನಪಾಗೋದು ಐತಿಹಾಸಿಕ ಹಾಗೂ ಸುಂದರವಾದ ಅಗಸ್ತ್ಯ ತೀರ್ಥ ಹೊಂಡ. ನೈಜ ಪ್ರಕೃತಿ ಸೌಂದರ್ಯದ ಜೊತೆಗೆ ಚಾಲುಕ್ಯರ ಕಲಾವೈಭವವನ್ನು ಸಾರುವ ಈ ಕರುನಾಡಿನ ಕಲಾಮಂದಿರಕ್ಕೆ ಕೊನೆಗೂ ಹೊಸ ರೂಪ ಸಿಗಲಿದೆ.
ಬಾಗಲಕೋಟೆ: ಜಿಲ್ಲೆಯೆಂದರೆ ಥಟ್ಟನೆ ನೆನಪಾಗೋದು ಐತಿಹಾಸಿಕ ಹಾಗೂ ಸುಂದರವಾದ ಅಗಸ್ತ್ಯ ತೀರ್ಥ ಹೊಂಡ. ನೈಜ ಪ್ರಕೃತಿ ಸೌಂದರ್ಯದ ಜೊತೆಗೆ ಚಾಲುಕ್ಯರ ಕಲಾವೈಭವವನ್ನು ಸಾರುವ ಈ ಕರುನಾಡಿನ ಕಲಾಮಂದಿರಕ್ಕೆ ಕೊನೆಗೂ ಹೊಸ ರೂಪ ಸಿಗಲಿದೆ. ಹೌದು, ಹೊಂಡ ಹಾಗೂ ಅದರ ಅಕ್ಕಪಕ್ಕದಲ್ಲಿ ಇರುವ ಅನಧಿಕೃತ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಯೆಸ್, ಐತಿಹಾಸಿಕ ಕ್ಷೇತ್ರದ ಸೌಂದರ್ಯಕ್ಕೆ ಅಕ್ಕಪಕ್ಕದಲ್ಲಿದ್ದ ಹಲವು ಕಟ್ಟಡಗಳು ಅಡ್ಡಿ ಉಂಟುಮಾಡುತ್ತಿದ್ದವು. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಬಿಟ್ಟಿತ್ತು. ಆದರೆ, ಇದೀಗ, 4 ದಶಕಗಳ ಕಗ್ಗಂಟು ಬಗೆಹರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಹೊಂಡದ ಅಕ್ಕಪಕ್ಕದಲ್ಲಿದ್ದ 96 ಮನೆಗಳ ನಿವಾಸಿಗಳ ಸ್ಥಳಾಂತರಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಬಾಗಲಕೋಟೆ ಎಸಿ ಯಶವಂತ್ ಗುರಿಕಾರರಿಂದ ದಿಟ್ಟ ಕ್ರಮ ತೆಗೆದುಕೊಳ್ಳಲಾಗಿದೆ. ಇತ್ತ ಮನೆಗಳ ತೆರವಿಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಂದ ಒಪ್ಪಿಗೆ ದೊರೆತಿದ್ದು ಕೇವಲ 6 ಕೋಟಿ 16 ಲಕ್ಷ ರೂಪಾಯಿ ಯೋಜನಾ ವೆಚ್ಚದಲ್ಲಿ ತೆರವಿಗೆ ಕೇಂದ್ರ ಪುರಾತತ್ವ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿದೆ.
ಅಂದ ಹಾಗೆ, ಹಿಂದಿನ ಅಧಿಕಾರಿಗಳಿಂದ ಇದೇ ಯೋಜನೆಗೆ 36 ಕೋಟಿ ಯೋಜನಾ ವೆಚ್ಚದ ಪ್ರಸ್ತಾವನೆ ಮಾಡಲಾಗಿತ್ತು. ಆದರೆ, ಈಗ ಸರ್ಕಾರದ ಬೊಕ್ಕಸಕ್ಕೆ ಐಎಎಸ್ ಅಧಿಕಾರಿ ಯಶವಂತ್ ಗುರಿಕಾರ 30 ಕೋಟಿ ಮೊತ್ತವನ್ನು ಉಳಿತಾಯ ಮಾಡಿದ್ದಾರೆ.
ಹೊಂಡದ ಬಳಿಯಿದ್ದ 96 ಕುಟುಂಬಗಳಿಗೆ ಹೈಟೆಕ್ ನಿವೇಶನ ನೀಡಲಾಗುವುದು. ಅಂತೆಯೇ, ಚಾಲುಕ್ಯ ನಗರದಲ್ಲಿ ಹೈಟೆಕ್ ನಿವೇಶನ ಹಂಚಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಜೊತೆಗೆ, ತಾವು ಖಾಲಿ ಮಾಡುತ್ತಿರುವ ಕಟ್ಟಡ ಮೌಲ್ಯದ ದುಪ್ಪಟ್ಟು ಹಣವನ್ನು ನಿವಾಸಿಗಳು ಪಡೆಯಲಿದ್ದಾರೆ.
ಶೀಘ್ರದಲ್ಲೇ ಹೊಂಡದ ಪಕ್ಕದ ಮನೆಗಳ ತೆರವು ಕಾರ್ಯ ಪ್ರಾರಂಭವಾಗಲಿದೆ. ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪಿ.ಸಿಯ ಹುಟ್ಟುಹಬ್ಬಕ್ಕೆ ಗ್ರೀಟಿಂಗ್ಸ್ ಕಳುಹಿಸಿದ ಎಡಿಜಿಪಿ! ಇತ್ತ, ಮಹಿಳಾ ಪಿ.ಸಿಗೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹುಟ್ಟುಹಬ್ಬಕ್ಕೆ ಗ್ರೀಟಿಂಗ್ಸ್ ಕಳುಹಿಸಿರುವುದು ಎಲ್ಲೆಡೆ ವೈರಲ್ ಆಗಿದೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಕೋಲಾರದ ಎಸಿಬಿ ಡಬ್ಲ್ಯುಪಿಸಿ ನಾಗವೇಣಿಗೆ ಗ್ರೀಟಿಂಗ್ಸ್ ಕಳುಹಿಸಿದ್ದರು.
ಇನ್ನು, ಈ ಬಗ್ಗೆ, ನಾಗವೇಣಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದರು. ಎಸಿಬಿ ಡಬ್ಲ್ಯುಪಿಸಿಗೆ ಎಡಿಜಿಪಿ ಕಳಿಸಿದ್ದ ಗ್ರೀಟಿಂಗ್ಸ್ ಇದೀಗ ಫುಲ್ ವೈರಲ್ ಆಗಿದೆ. ಇಲಾಖಾ ಸಿಬ್ಬಂದಿಯನ್ನು ಪ್ರೋತ್ಸಾಹಿಸಿ ಶುಭಾಶಯ ಕೋರಿದ್ದ ಎಜಿಜಿಪಿ ಸೀಮಂತ್ ಕುಮಾರ್ ಸಿಂಗ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಕೇಸ್: ಪ್ರಕರಣ ರದ್ದು ಕೋರಿ ನಟಿ ಕಂಗನಾರಿಂದ ಹೈಕೋರ್ಟ್‌ಗೆ ಅರ್ಜಿ