ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಕೇಸ್: ಪ್ರಕರಣ ರದ್ದು ಕೋರಿ ನಟಿ ಕಂಗನಾರಿಂದ ಹೈಕೋರ್ಟ್‌ಗೆ ಅರ್ಜಿ

ತಮ್ಮ ವಿರುದ್ಧ ದಾಖಲಾಗಿರುವ ಕೇಸ್​ ರದ್ದುಪಡಿಸುವಂತೆ ಕೋರಿ ನಟಿ ಕಂಗನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರೈತರ ಪ್ರತಿಭಟನೆ ಬಗ್ಗೆ ನಟಿ ಕಂಗನಾ ರಣಾವತ್​ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರಿನ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಾಗಿತ್ತು.

ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಕೇಸ್: ಪ್ರಕರಣ ರದ್ದು ಕೋರಿ ನಟಿ ಕಂಗನಾರಿಂದ ಹೈಕೋರ್ಟ್‌ಗೆ ಅರ್ಜಿ
ನಟಿ ಕಂಗನಾ
Follow us
KUSHAL V
|

Updated on: Feb 27, 2021 | 6:27 PM

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಕೇಸ್​ ರದ್ದುಪಡಿಸುವಂತೆ ಕೋರಿ ನಟಿ ಕಂಗನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರೈತರ ಪ್ರತಿಭಟನೆ ಬಗ್ಗೆ ನಟಿ ಕಂಗನಾ ರಣಾವತ್​ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರಿನ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಾಗಿತ್ತು. ವಕೀಲ ರಮೇಶ್ ನಾಯ್ಕ್ ದೂರು ದಾಖಲಿಸಿದ್ದರು. ಇದಲ್ಲದೆ, ಪೊಲೀಸ್ ತನಿಖೆಗೆ ತುಮಕೂರಿನ ಕೋರ್ಟ್ ಆದೇಶಿಸಿತ್ತು. ಇದೀಗ, ಪ್ರಕರಣ ರದ್ದು ಕೋರಿ ನಟಿ ಕಂಗನಾ ಹೈಕೋರ್ಟ್​ ಮೊರೆಹೋಗಿದ್ದಾರೆ. ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಲು ಕಂಗನಾ ಮನವಿ ಮಾಡಿದ್ದಾರೆ.

ಅಂದ ಹಾಗೆ, ಈ ಹಿಂದೆ, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು ಎಂದು ಕರೆದು ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿರುವ ವಿಚಾರಕ್ಕೆ ನಗರದ ವಕೀಲರೊಬ್ಬರು ವಿರೋಧ ವ್ಯಕ್ತಪಡಿಸಿದ್ದರು. ನಗರದ ಪೊಲೀಸ್ ಠಾಣೆಯಲ್ಲಿ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಕಂಗನಾ ರಣಾವತ್ ಅಧಿಕೃತ ಟ್ವಿಟರ್ ಖಾತೆಯನ್ನು ರದ್ದುಗೊಳಿಸುವಂತೆಯೂ ಸರ್ಕಾರವನ್ನು ಆಗ್ರಹಿಸಿದ್ದರು.

ಕಂಗನಾ ವಿರುದ್ಧ ದೂರು ದಾಖಲಿಸಿ. ಒಂದುವೇಳೆ ಪೊಲೀಸರು ದೂರು ದಾಖಲಿಸಿಕೊಳ್ಳದಿದ್ದರೆ ತಾನೇ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ ಎಂದು ನ್ಯಾಯವಾದಿ ಹರ್ಷವರ್ಧನ್ ಪಾಟೀಲ್ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ತನಿಖೆ ನಂತರವೇ ದೂರು ದಾಖಲಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಆದರೂ ದೂರು ದಾಖಲಿಸಿಕೊಳ್ಳುವಂತೆ ವಕೀಲರು ಒತ್ತಾಯಿಸಿದ್ದರು.

ಐಪಿಸಿ ಸೆಕ್ಷನ್ 153, 153(A), 503, 504, 505(1), 505(B), 505(c), 505(2), 506ರ ಅಡಿಯಲ್ಲಿ ದೂರು ದಾಖಲಿಸಿ ಎಂದು ಹರ್ಷವರ್ಧನ್ ಹೇಳಿದ್ದರು. ಕಂಗನಾ ರಣಾವತ್ ಟ್ವಿಟರ್ ಖಾತೆ ರದ್ದು ಮಾಡಬೇಕು ಎಂದೂ ವಕೀಲ ಹರ್ಷವರ್ಧನ್ ಪಾಟೀಲ್ ಆಗ್ರಹಿಸಿದ್ದರು. 24 ಗಂಟೆಯಲ್ಲಿ ದೂರು ದಾಖಲಿಸಿಕೊಳ್ಳಬೇಕು ಎಂದು ಪೊಲೀಸರನ್ನು ನ್ಯಾಯವಾದಿ ಒತ್ತಾಯಿಸಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳ ವಿರುದ್ಧ ಟ್ವೀಟ್ ಪ್ರಹಾರ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್, ಕೃಷಿ ಕಾನೂನು ರೈತರಿಗೆ ಸಹಕಾರಿ ಆಗಿರುವಾಗ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ. ಈ ರೀತಿ ಗಲಭೆ ಮಾಡುವವರು ಭಯೋತ್ಪಾದಕರು.. ಅದನ್ನು ಹೇಳಲು ಭಯವಾಗುತ್ತಿದೆಯೇ? ಎಂದು ಟ್ವೀಟ್ ಮಾಡಿದ್ದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಿರತರಾಗಿರುವ ರೈತರ ಬಗ್ಗೆ ನಾವು ಯಾಕೆ ಚರ್ಚಿಸುತ್ತಿಲ್ಲ ಎಂದು ಅಮೆರಿಕದ ಪಾಪ್ ತಾರೆ ರಿಹಾನ್ನಾ ಟ್ವೀಟ್ ಮಾಡಿದ್ದರು. ರಿಹಾನ್ನಾ ಟ್ವೀಟ್ ಬೆನ್ನಲ್ಲೇ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್, ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಕೂಡಾ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಪಂಜಾಬಿ ಗಾಯಕ, ನಟ ದಿಲ್ಜಿತ್ ದೊಸಾಂಜ್, ರಿಹಾನ್ನಾ ಅವರಿಗೆ ‘ರಿರಿ’ ಹಾಡನ್ನು ಅರ್ಪಿಸಿರುವುದಾಗಿ ಟ್ವೀಟಿಸಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ಕಂಗನಾ, ದಿಲ್ಜಿತ್​ರನ್ನು ಖಾಲಿಸ್ತಾನಿ ಎಂದು ಕರೆದಿದ್ದರು. ಈ ವೇಳೆ ಕಂಗನಾ ರಣಾವತ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಟ್ವಿಟರ್ ಸಂಸ್ಥೆ ಡಿಲೀಟ್ ಮಾಡಿತ್ತು.

‘ನ್ಯಾಯಾಲಯದ ತೀರ್ಪಿನ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಇತ್ತ, ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ತೀರ್ಪು ಬಗ್ಗೆ ಗಮನಿಸಿಲ್ಲ.ಈ ಬಗ್ಗೆ ಕೋರ್ಟ್ ಸಹ ನನಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಯಾವುದೇ ಮಾಹಿತಿ ಇಲ್ಲದ್ದಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದು ಶ್ರೀಗಳು ಹೇಳಿದರು.

ನ್ಯಾಯಾಲಯದ ವಿಚಾರವನ್ನ ಜಗದ್ಗುರುಗಳಿಗೆ ಬಿಟ್ಟು ಬಿಡ್ತೇನೆ. ಅದರಲ್ಲಿ ನಾನು ಯಾವುದೇ ರೀತಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ಹೋರಾಟ ಮಠದ ಆಸ್ತಿ ಉಳಿಸೋಕೆ ಇರೋದು. ಮಠದ ಆಸ್ತಿ ನಾಶವಾಗಿದೆ ಅದರ ಅಳಿವು ಉಳಿವಿನ ಪ್ರಶ್ನೆ ಇದೆ. ಹೀಗಾಗಿ ಮಠದ ಆಸ್ತಿಯನ್ನ ಉಳಿಸಬೇಕೆಂದು ಹೋರಾಟ ಮಾಡುತ್ತೇನೆ. ಮಠದ ಆಸ್ತಿ ಮರಳಿ ಬರುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಕೋರ್ಟ್ ತೀರ್ಪಿನಿಂದ ನನಗೇನೂ ಹಿನ್ನಡೆಯಾಗಿಲ್ಲ. ಹಿನ್ನಡೆಯಾಗುವಂತಹ ಕೆಲಸಕ್ಕೆ ನಾನು ಕೈ ಹಾಕುವುದಿಲ್ಲ ಎಂದು ಗದಗದಲ್ಲಿ ಬಾಲೆ ಹೊಸೂರಿನ ದಿಂಗಾಲೇಶ್ವರಶ್ರೀ ಹೇಳಿದರು.

ಇದನ್ನೂ ಓದಿ: ನಾನು ಕನಕಪುರ ಬಂಡೆ ಅಲ್ಲ.. ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ -ಡಿಕೆಶಿ ಜಬರ್​ದಸ್ತ್​ ಡೈಲಾಗ್!​