CM Yediyurappa Happy Birthday ಎಂದು ಸಾಲು ಸಾಲು ಟ್ವೀಟ್ ಏಟು ನೀಡಿದ ಕರ್ನಾಟಕ ಕಾಂಗ್ರೆಸ್

Happy birthday CMYediyurappa ಎಂದು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಆ ನಂತರ ಮುಖ್ಯಮಂತ್ರಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದೆ.

CM Yediyurappa Happy Birthday ಎಂದು ಸಾಲು ಸಾಲು ಟ್ವೀಟ್ ಏಟು ನೀಡಿದ ಕರ್ನಾಟಕ ಕಾಂಗ್ರೆಸ್
ಬಿಜೆಪಿ ಹಾಗೂ ಕಾಂಗ್ರೆಸ್ ಧ್ವಜ
Follow us
Srinivas Mata
| Updated By: ರಾಜೇಶ್ ದುಗ್ಗುಮನೆ

Updated on: Feb 27, 2021 | 6:47 PM

ಬೆಂಗಳೂರು, ಫೆಬ್ರವರಿ 27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 79ನೇ ಜನ್ಮದಿನದ ಶುಭಾಶಯ ಕೋರಿರುವ ಕರ್ನಾಟಕ ಕಾಂಗ್ರೆಸ್, ಆ ನೆಪದಲ್ಲಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಾಲುಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅಷ್ಟೇ ಅಲ್ಲ, ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಹಾಗೂ ಸ್ವತಃ ಯಡಿಯೂರಪ್ಪನವರಿಗೆ ಸಂಬಂಧಿಸಿದಂತೆ ಇರುವ ಆರೋಪಗಳ ಬಗ್ಗೆಯೂ ಪ್ರಸ್ತಾಪ ಮಾಡಿದೆ. ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ 79ನೇ ಜನ್ಮದಿನದ ಶುಭಾಶಯಗಳು. ಆಯಸ್ಸು, ಆರೋಗ್ಯದಿಂದ ಕೂಡಿದ ಸುಖಕರ ಬದುಕು ನಿಮ್ಮದಾಗಿರಲಿ ಎಂದು ಆಶಿಸುತ್ತೇವೆ ಎಂಬುದರೊಂದಿಗೆ ಆ ಟ್ವಿಟ್ಟರ್ ಪ್ರಶ್ನಾವಳಿಯು ಶುರುವಾಗುತ್ತದೆ.

* ನಿಮ್ಮ ಮೇಲೆ ಅಕ್ರಮ ಡಿನೋಟಿಫಿಕೇಷನ್​ನಂತಹ ಗುರುತರವಾದ ಪ್ರಕರಣಗಳಿವೆ, “ನೀವೇ ಸಿಎಂ, ನಿಮ್ಮನ್ನು ಯಾರು ತನಿಖೆ ನಡೆಸುತ್ತಾರೆ” ಎನ್ನುವಂತ ಪ್ರಶ್ನೆ ಸುಪ್ರೀಂ ಕೋರ್ಟ್ ಕೇಳಿದೆ. ತನಿಖೆ ಹೇಗೆ ಎದುರಿಸುತ್ತೀರಿ? ಕಳಕಿಂತ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮುಜುಗರ ಎನಿಸುವುದಿಲ್ಲವೇ?

* 79ನೇ ಹುಟ್ಟುಹಬ್ಬ ಇಂದು, ನಿಮಗೆ ಒಳ್ಳೆಯದಾಗಲಿ. ವೇತನವಿಲ್ಲದ ನೌಕರರು, ಮಾಸಾಶನವಿಲ್ಲದ ವೃದ್ಧರು, ವಿಧವೆಯರು, ಅಂಗವಿಕಲರು, ಪರಿಹಾರವಿಲ್ಲದ ನೆರೆ ಸಂತ್ರಸ್ತರು, ಅನುದಾನವಿಲ್ಲದ ಶಾಸಕರು, ಸ್ಥಗಿತಗೊಂಡ ಯೋಜನೆಗಳು ಈ ಸ್ಥಿತಿಯನ್ನು ನೋಡಿಯೂ ಸಂಭ್ರಮಿಸುವ ಮನಸಾಗುತ್ತಿದೆಯೇ ನಿಮಗೆ?

* 14ನೇ ಹಣಕಾಸು ಆಯೋಗದ ಅಡಿಯಲ್ಲಿ ಕೇಂದ್ರ ತೆರಿಗೆಯಲ್ಲಿ 4.7%ರಷ್ಟು ಪಾಲು ರಾಜ್ಯಕ್ಕೆ ಸಿಗುತ್ತಿದ್ದು, 15ನೇ ಹಣಕಾಸು ಆಯೋಗ ಅದನ್ನು 3.6%ಗೆ ಇಳಿಸಿದೆ. ಕೇಂದ್ರದಿಂದ ಈ ಅನ್ಯಾಯ & ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತದೆ, ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದ್ದರ ಬಗ್ಗೆ ಕೊಂಚವೂ ಪಶ್ಚಾತ್ತಾಪವಿಲ್ಲವೇ?

* ರಾಜ್ಯಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಮ್ಮದೇ ಮುಖಂಡರು ನಡೆಸುತ್ತಿದ್ದಾರೆ, ಅಕ್ರಮ ಸ್ಫೋಟಕ ದಂಧೆ ಎಗ್ಗಿಲ್ಲದೆ ಸಾಗಿದೆ. ತಾವು ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಅಸಹಾಯಕತನ ತೋರುತ್ತಿದ್ದೀರಿ. ಇದು ನಿಮ್ಮ ವಯೋಸಹಜ ದಣಿವಾ ಅಥವಾ ಗಣಿ ಲಾಬಿಗೆ ಮಣಿದಿದ್ದಾ?

* ರಾಜ್ಯದಲ್ಲಿ ಸಂಭವಿಸಿದ ಪ್ರವಾಹ, ಆಗಿರುವ ನಷ್ಟ. 2019ರಲ್ಲಿ – ಅಂದಾಜು 35,000 ಕೋಟಿ, 2020ರಲ್ಲಿ – ಅಂದಾಜು 30,000 ಕೋಟಿ. ಕೇಂದ್ರ ಕೊಟ್ಟಿದ್ದು ಕೇವಲ 1869 ಕೋಟಿ. ಇದಕ್ಕಿಂತ ಒಂದು ರೂಪಾಯಿಯೂ ಹೆಚ್ಚು ತರಲಾಗಲಿಲ್ಲ ನಿಮ್ಮ ಕೈಯ್ಯಲ್ಲಿ. ಕೇಂದ್ರಕ್ಕಿರುವ ದ್ವೇಷ ನಿಮ್ಮ ಮೇಲೋ ರಾಜ್ಯದ ಮೇಲೋ?

* ಹಿಂದೆ ಮುಖ್ಯಮಂತ್ರಿ ಆದಿರಿ ಗಣಿ ಹಗರಣ ಚೆಕ್ ಮೂಲಕ ಲಂಚ ಡಿನೋಟಿಫಿಕೇಷನ್ ಹಗರಣ ಅಕ್ರಮ ಆಸ್ತಿ ಕುಟುಂಬ ಹಸ್ತಕ್ಷೇಪ

* ಈ ಬಾರಿ ಮುಖ್ಯಮಂತ್ರಿ ಆದಿರಿ RTGS ಮೂಲಕ ಲಂಚ ಕರೋನಾ ಭ್ರಷ್ಟಾಚಾರ ವರ್ಗಾವಣೆ ದಂಧೆ ಕುಟುಂಬ ಹಸ್ತಕ್ಷೇಪ

ನೀವು ಪ್ರತಿ ಬಾರಿಯೂ ಕಳಂಕಿತ ಮುಖ್ಯಮಂತ್ರಿಯಾದಿರಿ

* “ಸಾಲ ಮಾಡಿಯಾದರೂ ಕೊರೊನಾ ನಿಯಂತ್ರಿಸುವೆ, ಪ್ರವಾಹ ಪೀಡಿತರಿಗೆ ಪರಿಹಾರ ನೀಡುವೆ, ನೌಕರರಿಗೆ ಸಂಬಳ ಕೊಡುವೆ” ಎಂದು ಎಲ್ಲದಕ್ಕೂ ಸಾಲದ ಮಂತ್ರವನ್ನೇ ಜಪಿಸಿದಿರಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ & GST ಬಾಕಿ ಕೇಳಲಾಗದೆ ರಾಜ್ಯದ ಜನತೆಯ ಮೇಲೆ ಸಾಲದ ಹೊರೆ ಹೊರಿಸಿದ್ದೇ ನಿಮ್ಮ ಸಾಧನೆ ಆಯ್ತಲ್ಲ

* ಸಿದ್ದು ಸವದಿ ಅವರು ಪುರಸಭೆ ಸದಸ್ಯೆ ಚಾಂದಿನಿ ಅವರ ಮೇಲಿನ ಹಲ್ಲೆ ಮಾಡಿದ ಪರಿಣಾಮ ಗರ್ಭಪಾತವಾಯಿತು. ನೀವು ನೊಂದ ಮಹಿಳೆಗೆ ಸಾಂತ್ವನವೂ ಹೇಳಲಿಲ್ಲ, ದುರ್ವರ್ತನೆಯ ಶಾಸಕರ ರಾಜೀನಾಮೆಯನ್ನೂ ಪಡೆಯಲಿಲ್ಲ. ಮಹಿಳಾ ಘನತೆ ಕಾಪಾಡಿ, ರಕ್ಷಣೆ ನೀಡುವಲ್ಲಿ ಸೋತು ನೀವು ಮೌನ ವಹಿಸಿದ್ದು ಆತ್ಮವಂಚನೆಯಲ್ಲವೇ?

ಇದನ್ನೂ ಓದಿ: BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ ‘ಬ್ರ್ಯಾಂಡ್’ ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ