ನಾನು ಕನಕಪುರ ಬಂಡೆ ಅಲ್ಲ.. ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ -ಡಿಕೆಶಿ ಜಬರ್​ದಸ್ತ್​ ಡೈಲಾಗ್!​

ನಾನು ಕನಕಪುರ ಬಂಡೆ ಅಲ್ಲ.. ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ -ಡಿಕೆಶಿ ಜಬರ್​ದಸ್ತ್​ ಡೈಲಾಗ್!​
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)

ನಾನು ಕನಕಪುರ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಿರುದಿನ ಬಗ್ಗೆ ಸಖತ್​ ಡೈಲಾಗ್ ಹೊಡೆದರು. ಜೊತೆಗೆ, ಬಿಜೆಪಿಯವರು ನಾವು ಹಿಂದೂ ಮುಂದೂ ಅಂತಾರೆ. ನಾವು ಹಾಗೇನಿಲ್ಲ, ನಮಗೆ ಎಲ್ಲಾ ಧರ್ಮಗಳು ಸೇರಿ ಒಂದು ಎಂದು ಸಹ ಹೇಳಿದರು.

KUSHAL V

| Edited By: sadhu srinath

Feb 27, 2021 | 6:02 PM

ಉಡುಪಿ: ಕಾಂಗ್ರೆಸ್ ಪಕ್ಷ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬೆಳೆಸಿದ್ರೆ BJP ಬ್ಯಾಂಕ್ ಮುಚ್ಚಿತು. ಕರಾವಳಿ ಸಂಸದರೆಲ್ಲ ಎಲ್ಲಿಗೆ ಹೋಗಿದ್ರು? ಧ್ವನಿ ಎಲ್ಲಿ ಅಡಗಿತ್ತು? ಮನೆ ಕಟ್ಟಲು ಶ್ರಮ ಜಾಸ್ತಿ, ಅದಕ್ಕೆ ಬ್ಯಾಂಕ್​ ಮೇಲೆ JCB ಹಾಕಿದ್ರಲ್ವಾ? ಎಂದು ನಗರದಲ್ಲಿ ನಡೆದ ಕಾಂಗ್ರೆಸ್ ಜನಧ್ವನಿ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಪ್ರಶ್ನೆಗಳ ಸುರಿಮಳೆಗೈದರು. ಕೇಂದ್ರದ ಈ ನಡೆ ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಅವಿಭಜಿತ ದ.ಕ ಜಿಲ್ಲೆಗೇ ಅವಮಾನ. ಸಂಸದರಾದ ಶೋಭಾ, ನಳಿನ್ ಕಟೀಲು ಎಲ್ಲಿಗೆ ಹೋಗಿದ್ದರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪ್ರಶ್ನೆ ಮಾಡಿದರು.

DK SHIVAKUMAR 1

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮೀನುಗಾರಿಕೆ ಡೀಸೆಲ್​ಗೆ ಸಬ್ಸಿಡಿ ಇಲ್ಲ. ಕೊರೊನಾ ಬಳಿಕ ಈ ಸರ್ಕಾರ ಜನರಿಗೆ ಕಿರುಕುಳ ನೀಡ್ತಿದೆ. ಮುಂಬೈ, ಕರಾವಳಿಗರಿಗೆ ಕೊರೊನಾ ಬಂದಾಗ ತಡೆದಿದ್ದರು. ನಮ್ಮ ಸ್ವಂತ ಊರುಗಳಿಗೆ ಬರಬೇಡಿ ಎಂದು ತಡೆದಿದ್ದರು. ಜನರ ರಕ್ಷಣೆ ಮಾಡದ ಮೇಲೆ ಈ ಸರ್ಕಾರ ಯಾಕೆ ಬೇಕು? ಎಂದು ಖಾರವಾಗಿ ಪ್ರಶ್ನಿಸಿದರು.

‘ನಾನು ಕನಕಪುರ ಬಂಡೆ ಅಲ್ಲ; ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ’ ನಾನು ಕನಕಪುರ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಿರುದಿನ ಬಗ್ಗೆ ಸಖತ್​ ಡೈಲಾಗ್ ಹೊಡೆದರು. ಜೊತೆಗೆ, BJPಯವರು ನಾವು ಹಿಂದೂ ಮುಂದೂ ಅಂತಾರೆ. ನಾವು ಹಾಗೇನಿಲ್ಲ, ನಮಗೆ ಎಲ್ಲಾ ಧರ್ಮಗಳು ಸೇರಿ ಒಂದು. ರಕ್ತ, ಉಸಿರು, ಬೆವರಿನಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಸಿದ್ದರಾಮಯ್ಯರನ್ನ ಟಾರ್ಗೆಟ್​ ಮಾಡ್ತಿದ್ದಾರೆನ್ನುವುದು ಸುಳ್ಳು’ ಸಿದ್ದರಾಮಯ್ಯರನ್ನ ಟಾರ್ಗೆಟ್​ ಮಾಡ್ತಿದ್ದಾರೆನ್ನುವುದು ಸುಳ್ಳು. ಯಾರು ಕೂಡ ಯಾರನ್ನೂ ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್​-JDS​ ಮೈತ್ರಿ ಬಗ್ಗೆ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ. JDS​​ನವರು ನಮಗೆ ಮೇಯರ್​ ಸ್ಥಾನ ಕೊಡ್ತೇವೆ ಅಂದರು. ಆದ್ರೆ ಕೊನೆ ಕ್ಷಣದಲ್ಲಿ JDSನವರು ನಾಮಪತ್ರ ಸಲ್ಲಿಸಿದ್ದಾರೆ. ನಾವು ನಮ್ಮ ಪಕ್ಷದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕೆಂದು ಪ್ರಯತ್ನ ಮಾಡಿದೆವು.

ಆದರೆ ಸ್ಥಳೀಯ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತು ನಾನು ವರದಿ ತರಿಸಿಕೊಳ್ಳುತ್ತೇನೆ ಎಂದು ಶಿವಕುಮಾರ್​ ಹೇಳಿದರು. ಜೊತೆಗೆ, ಯಾರ ಗೌರವಕ್ಕೂ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ. ಯಾರನ್ನೂ ಕಟ್ಟಿಹಾಕಲು ನಾನು ಅವಕಾಶ ಕೊಡುವುದಿಲ್ಲ ಎಂದು ಸಹ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ತನ್ವೀರ್​ ಸೇಠ್ ಕಿಡಿಕಾರಿದ ವಿಚಾರವಾಗಿ ನಮ್ಮ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವಂತಿಲ್ಲ. ಯಾರೂ ಕೂಡ ಅವಹೇಳನಕಾರಿ ಹೇಳಿಕೆ ಕೊಡುವಂತಿಲ್ಲ. ಈ ಬಗ್ಗೆ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ತನ್ವೀರ್ ಸೇಠ್ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ತನ್ವೀರ್ ಸೇಠ್​​ಗೆ ಸೋಮವಾರ ಬರುವುದಕ್ಕೆ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ, ಇದೊಂದು ಸಮುದ್ರ ಇದ್ದಂತೆ’ ಇತ್ತ, ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ, ಇದೊಂದು ಸಮುದ್ರ ಇದ್ದಂತೆ ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಇವಾಗ ಸ್ವಲ್ಪ ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ಬಂದಿದೆ. ಪಕ್ಷದಲ್ಲಿ ಹೈಕಮಾಂಡ್ ಬಿಟ್ಟು ಬೇರೆಯವರ ಮಾತು ನಡೆಯಲ್ಲ. ಹೈಕಮಾಂಡ್​ ಬಿಟ್ಟು ಯಾರೂ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಯಾವುದೇ ಪಕ್ಷಕ್ಕಾದರೂ ಹೈಕಮಾಂಡ್​ ಇರಬೇಕು. ಹೈಕಮಾಂಡ್ ಆದೇಶದಂತೆ ನಡೆಯಬೇಕು. ಆದರೆ, ಯಾರದೋ ಮಾತು ಕೇಳಿ ತನ್ವೀರ್ ಸೇಠ್​ ಮಾತನಾಡ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಸಮರ್ಥರಿದ್ದಾರೆ, ಎಲ್ಲವನ್ನೂ ಸರಿ ಮಾಡ್ತಾರೆ. ಡಿಕೆಶಿ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ ಸರಿಮಾಡ್ತಾರೆ ಎಂದು ಶಾಶಕರು ಹೇಳಿದರು.

ರಾಜಕೀಯದಲ್ಲಿ ಅಸಮಾಧಾನ ಸಹಜ. ನನಗೂ ಅಸಮಾಧಾನವಿತ್ತು, ನಾನು ಕೂಡ ಮಂತ್ರಿ ಆಗಬೇಕಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಆಗದಿದ್ದಕ್ಕೆ ಅಸಮಾಧಾನವಿತ್ತು ಎಂದು ಕುಷ್ಟಗಿಯಲ್ಲಿ ಅಮರೇಗೌಡ ಬಯ್ಯಾಪುರ ಹೇಳಿದರು.

ಇದನ್ನೂ ಓದಿ: Chandan Shetty | ಕನ್ನಡ ಹಾಡು ಹಾಕಲ್ಲ ಎಂದಿದ್ದಕ್ಕೆ ಆಕ್ರೋಶ: ಪಬ್​ಗಳ ವಿರುದ್ಧ ಮತ್ತೆ ಸಿಡಿದೆದ್ದ ಚಂದನ್ ಶೆಟ್ಟಿ!

Follow us on

Related Stories

Most Read Stories

Click on your DTH Provider to Add TV9 Kannada