AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಕನ್ನಡ ಬಿಗ್​ ಬಾಸ್​ ನೋಡೋದೆಲ್ಲಿ? ಮನೆ ಒಳಗೆ ಹೋಗೋವವರು ಯಾರು? ಇಲ್ಲಿದೆ ಮಾಹಿತಿ

ನಾಳೆ ಸಂಜೆ 6 ಗಂಟೆಗೆ ವೇದಿಕೆ ಮೇಲೆ ಸುದೀಪ್​ ಬರಲಿದ್ದಾರೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದಕ್ಕೂ ಮೊದಲು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ.

Bigg Boss Kannada 8: ಕನ್ನಡ ಬಿಗ್​ ಬಾಸ್​ ನೋಡೋದೆಲ್ಲಿ? ಮನೆ ಒಳಗೆ ಹೋಗೋವವರು ಯಾರು? ಇಲ್ಲಿದೆ ಮಾಹಿತಿ
ಸುದೀಪ್​
ರಾಜೇಶ್ ದುಗ್ಗುಮನೆ
|

Updated on:Feb 27, 2021 | 8:39 PM

Share

ಕೊರೊನಾ ವೈರಸ್​ನಿಂದ ಕನ್ನಡ ಬಿಗ್​ ಬಾಸ್​ ಸೀಸನ್​ 8 ತಡವಾಗಿ ಆರಂಭಗೊಳ್ಳುತ್ತಿದೆ. ಈ ಬಾರಿ ಬಿಗ್​ ಬಾಸ್​ ಮನೆ ಒಳಗೆ ಹೋಗುವುದಕ್ಕೂ ಮೊದಲು ಅಭ್ಯರ್ಥಿಗಳು ಕ್ವಾರಂಟೈನ್​ ಆಗುವುದು ಕಡ್ಡಾಯ. ಅಂತೆಯೇ, ಬಿಗ್​ ಬಾಸ್​ ಮನೆಗೆ ತೆರಳುವ 17 ಅಭ್ಯರ್ಥಿಗಳು ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಕಲರ್ಸ್​ ಕನ್ನಡದ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಖಚಿತಪಡಿಸಿದ್ದಾರೆ. ಬಿಗ್​ ಬಾಸ್​ 8 ಎಲ್ಲಿ ಪ್ರಸಾರವಾಗುತ್ತದೆ? ಲೈವ್​ ನೋಡೋದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಗಲಿದೆ. ಈ ವರ್ಷವೂ ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ.

ನಾಳೆ ಸಂಜೆ 6 ಗಂಟೆಗೆ ವೇದಿಕೆ ಮೇಲೆ ಸುದೀಪ್​ ಬರಲಿದ್ದಾರೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದಕ್ಕೂ ಮೊದಲು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ. ರಾತ್ರಿ 11 ಗಂಟೆ ಸುಮಾರಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಟಿವಿಯಲ್ಲಿ ನೀವು ಬಿಗ್ ಬಾಸ್​ ನೋಡಬೇಕು ಎಂದಾದರೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ನೋಡಬೇಕು. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ನಿಮಗೆ ಬಿಗ್​ ಬಾಸ್​ ಸಿಗಲಿದೆ. ಸ್ಪರ್ಧಿಗಳ ಸಂಭಾವ್ಯ ಪಟ್ಟಿ

ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಬಿಗ್​ಬಾಸ್​ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ. ಹಾಗಾದರೆ, ಈ ಬಾರಿ ಬಿಗ್​ ಬಾಸ್​ ಮನೆಗೆ ತೆರಳಲಿರುವವರು ಯಾರು ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

-ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ -ಕಾಮಿಡಿ ಕಿಲಾಡಿ ನಯನಾ -ನಿರ್ದೇಶಕ ರವಿ ಶ್ರೀವತ್ಸ -ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ -ರಘು ವೈನ್ ಸ್ಟೋರ್​ನ ರಘು ಗೌಡ -ಕಿರಣ್ ಶ್ರೀನಿವಾಸ್ -ಸುನಿಲ್ ರಾವ್ -‘ಲವ್ ಗುರು’ ರಾಜೇಶ್ -ಕಿರುತೆರೆ ನಟಿ ಸಮೀಕ್ಷಾ -ಅಗ್ನಿಸಾಕ್ಷಿಯ ಸುಕೃತಾ -ಅಮೃತವರ್ಷಿಣಿಯ ರಜಿನಿ -ತಬಲಾ ನಾಣಿ -ತರಂಗ ವಿಶ್ವ -ಸರಿಗಮಪ.. ಹನುಮಂತ -ನಿರೂಪಕ ಅಮರ್ ಪ್ರಸಾದ್

ಇದನ್ನೂ ಓದಿ: Bigg Boss Kannada 8: ಈ ಬಾರಿ ಕನ್ನಡ ಬಿಗ್​ಬಾಸ್​ನಲ್ಲಿ​ ಇವರೆಲ್ಲಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ!

Published On - 5:54 pm, Sat, 27 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ