AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಈ ಬಾರಿ ಕನ್ನಡ ಬಿಗ್​ಬಾಸ್​ನಲ್ಲಿ​ ಇವರೆಲ್ಲಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ!

Bigg Boss Kannada Season 8: ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಕಳೆದ ಸೀಸನ್​ನಲ್ಲಿಯಂತೂ ಬೇರೆಯವರು ಬಾಯ್ಬಿಡುತ್ತಾರೆ ಎಂದಾದಾಗ ಕೊನೆಕ್ಷಣದಲ್ಲಿ ಸ್ವತಃ ವಾಹಿನಿಯವರೇ ಗುಟ್ಟು ಬಿಟ್ಟುಕೊಟ್ಟು ಇವರೇ ಈ ಬಾರಿಯ ಸ್ಪರ್ಧಿಗಳು ಎಂದಿದ್ದರು.

Bigg Boss Kannada 8: ಈ ಬಾರಿ ಕನ್ನಡ ಬಿಗ್​ಬಾಸ್​ನಲ್ಲಿ​ ಇವರೆಲ್ಲಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ!
ಬಿಗ್​​ಬಾಸ್​​ ಕನ್ನಡ 8
Skanda
| Updated By: ಸಾಧು ಶ್ರೀನಾಥ್​|

Updated on: Feb 26, 2021 | 11:35 AM

Share

ಕನ್ನಡ ಕಿರುತರೆಯ ಮಟ್ಟಿಗೆ ಬಿಗ್​ಬಾಸ್ (Bigg Boss)​ ಅತಿ ದೊಡ್ಡ ಮಟ್ಟದ ರಿಯಾಲಿಟಿ ಶೋ ಎಂದೇ ಹೆಸರಾಗಿದೆ. ಈಗಾಗಲೇ 7 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್​ಬಾಸ್​ ಇದೀಗ ಕೊರೊನಾ ಕಾಟ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಹೊಸತನದೊಂದಿಗೆ ಕಂಗೊಳಿಸುತ್ತಾ ಮರಳಿ ಬರಲು ತಯಾರಾಗಿದೆ. ಫೆಬ್ರವರಿ 28ರಿಂದ ಬಿಗ್​ಬಾಸ್​ 8 (Bigg Boss 8) ಶುರುವಾಗುತ್ತಿದ್ದು, ಈ ಬಾರಿ ದೊಡ್ಮನೆ ಪ್ರವೇಶಿಸಲಿರುವ ಸ್ಪರ್ಧಿಗಳು ಯಾರು ಎಂದು ತಿಳಿದುಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಕಳೆದ ಒಂದೆರೆಡು ವಾರಗಳಿಂದ ಒಂದಷ್ಟು ಜನರ ಹೆಸರು ಬಿಗ್​ಬಾಸ್​ ಜೊತೆ ತಳುಕು ಹಾಕಿಕೊಂಡಿತ್ತಾದರೂ ಆ ಪೈಕಿ ಕೆಲವರು ನಾವು ಬಿಗ್​ಬಾಸ್​ ಮನೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಈ ಬಾರಿ ಒಳಹೋಗುತ್ತಿರುವ ಅಭ್ಯರ್ಥಿಗಳು ಯಾರು ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಕಳೆದ ಸೀಸನ್​ನಲ್ಲಿಯಂತೂ ಬೇರೆಯವರು ಬಾಯ್ಬಿಡುತ್ತಾರೆ ಎಂದಾದಾಗ ಕೊನೆಕ್ಷಣದಲ್ಲಿ ಸ್ವತಃ ವಾಹಿನಿಯವರೇ ಗುಟ್ಟು ಬಿಟ್ಟುಕೊಟ್ಟು ಇವರೇ ಈ ಬಾರಿಯ ಸ್ಪರ್ಧಿಗಳು ಎಂದಿದ್ದರು. ಇನ್ನು ಬಿಗ್​ಬಾಸ್​ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ.

ಅದೇ ರೀತಿ ಈ ಬಾರಿಯೂ ಒಂದಷ್ಟು ಜನ ನಾವು ಬಿಗ್​ಬಾಸ್​ಗೆ ಹೋಗುವುದಿಲ್ಲ ಎಂದಿದ್ದಾರೆ. ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಜತ್ಕಲ್​, ಅಗ್ನಿಸಾಕ್ಷಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ, ನಟಿ ವಿನಯಾ ಪ್ರಸಾದ್, ಕಾವ್ಯ ಗೌಡ, ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ತಾವು ಬಿಗ್​ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಪೈಕಿ ಕೆಲವರು ತಾವೇ ಸ್ಪಷ್ಟನೆ ಕೊಟ್ಟಿದ್ದರೆ, ಇನ್ನು ಕೆಲವರು ಆಪ್ತರ ಮೂಲಕ ಹೇಳಿಸಿದ್ದಾರೆ.

ಸದ್ಯ ಬಿಗ್​ಬಾಸ್​ ಮನೆಗೆ ಹೋಗುತ್ತಿರುವವರ ಪಟ್ಟಿಯಲ್ಲಿ ಕೆಲವಷ್ಟು ಜನರ ಹೆಸರು ಪದೇಪದೇ ಕೇಳಿಬರುತ್ತಿದ್ದು, ಈ ಕೆಳಕಂಡವರು ದೊಡ್ಮನೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ ಕನ್ನಡದ ಹೆಸರಾಂತ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ ಹೆಸರು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಓಡಾಡುತ್ತಿದೆ. ಲೈಫ್ 360 ಮತ್ತು ಅಂದವಾದ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅನುಶಾರನ್ನು ಬಿಗ್​ ಬಾಸ್ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಕಾಮಿಡಿ ಕಿಲಾಡಿ ನಯನಾ ಬಿಗ್ ಬಾಸ್ ನಯನಾ ಆಗುತ್ತಾರಾ? ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬಂದಿರುವ ಮತ್ತೊಂದು ಹೆಸರು ಕಾಮಿಡಿ ಕಿಲಾಡಿ ನಯನಾ ಅವರದು. ನಯನಾ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡನೇ ಮಾತಿಲ್ಲ. ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ನಕ್ಕುನಗಿಸಿ, ಪ್ರೇಕ್ಷಕರನ್ನು ರಂಜಿಸಿ, ಅಭಿಮಾನಿಗಳ ಮನಗೆದ್ದಿದ್ದ ನಯನಾ ಇನ್ನು ಬಿಗ್ ಬಾಸ್ ನಯನಾ ಆಗುತ್ತಾರಾ ಎಂದು ಕಾದುನೋಡಬೇಕಿದೆ.

ನಿರ್ದೇಶಕ ರವಿ ಶ್ರೀವತ್ಸ ಬಿಗ್ ಬಾಸ್ ಎಂಟ್ರಿ ಬಹುತೇಕ ಖಚಿತ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಿಗ್ ಬಾಸ್ ಅಭಿಮಾನಿಗಳು, ಏನಾಗುತ್ತೋ ಬಿಡುತ್ತೋ ರವಿ ಶ್ರೀವತ್ಸ ಬಿಗ್ ಬಾಸ್ ಮನೆಗೆ ಹೋಗೋದು ಮಾತ್ರ ಶೇ. 99.99 ರಷ್ಟು ಗ್ಯಾರೆಂಟಿ ಎನ್ನುತ್ತಿದ್ದಾರೆ.

ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗುಂಡಮ್ಮ ಬ್ರಹ್ಮಗಂಟು ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ಗೀತಾ ಭಾರತಿ ಭಟ್ ಹೆಸರು ಬಿಗ್ ಬಾಸ್ ಸೀಸನ್ 8ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಬ್ರಹ್ಮಗಂಟು ಧಾರಾವಾಹಿ ಮುಕ್ತಾಯ ಹಂತದಲ್ಲಿದೆ ಎಂಬ ಗುಲ್ಲಿದೆ. ಜತೆಗೆ, ಗೀತಾ ಭಾರತಿ ಭಟ್, ಬಿಗ್ ಬಾಸ್ ಇಂಟ್ರೊ ವೀಡಿಯೋ ಚಿತ್ರೀಕರಣವನ್ನು ಮುಗಿಸಿದ್ದಾರೆ ಎಂಬ ಸುದ್ದಿಯೂ ಅಲ್ಲಲ್ಲಿ ಕೇಳಿಬಂದಿದೆ.

ರಘು ವೈನ್ ಸ್ಟೋರ್​ನ ರಘು ಗೌಡ ಸಾಮಾಜಿಕ ಜಾಲತಾಣದಲ್ಲಿ ರಘು ವೈನ್ ಸ್ಟೋರ್ ಮೂಲಕ ಹವಾ ಸೃಷ್ಟಿಸಿದ್ದ ರಘು ಗೌಡ ಈ ಬಾರಿ ಬಿಗ್ ಬಾಸ್ ಮನೆಯ ಅತಿಥಿ ಎಂಬುದು ಬಿಗ್ ಬಾಸ್ ಅಭಿಮಾನಿಗಳ ಗಲ್ಲಿಯಲ್ಲಿ ಸುತ್ತಾಡುತ್ತಿರುವ ಸುದ್ದಿ. ರಘು ಗೌಡ ಚುಟುಕು ವೀಡಿಯೋಗಳಿಂದ ನೆಟ್ಟಿಗರ ಮನಗೆದ್ದಿದ್ದಾರೆ. ಹಲವರ ಸ್ಟೇಟಸ್​ನಲ್ಲಿ ಈಗಾಗಲೇ ಜಾಗ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದರೆ ರಘು ಗೌಡರಿಂದ ಭರ್ಜರಿ ಮನರಂಜನೆ ನಿರೀಕ್ಷಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದು.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಗ್ ಬಾಸ್ ಮನೆಗೆ? ಬಿಗ್ ಬಾಸ್ ಕನ್ನಡ ಸೀಸನ್ 8 ಮನೆಗೆ ತುಪ್ಪದ ಬೆಡಗಿ, ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ ಕಾಲಿಡುತ್ತಾರೆ ಎಂಬ ಸುದ್ದಿ ಭರ್ಜರಿಯಾಗಿ ಸದ್ದುಮಾಡುತ್ತಿದೆ. ಡ್ರಗ್ ಪ್ರಕರಣದ ಆರೋಪದಲ್ಲಿ 140 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ನಟಿ, ಈಗ ಜಾಮೀನು ಪಡೆದಿದ್ದಾರೆ. ರಾಗಿಣಿ ದ್ವಿವೇದಿ ಬಗ್ ಬಾಸ್ ಮನೆಗೆ ಹೋಗುತ್ತಾರಾ ಎಂದು ಖಚಿತಪಡಿಸಿಕೊಳ್ಳಲು ವಾರಾಂತ್ಯದ ವರೆಗೆ ಕಾಯಬೇಕಿದೆ.

ಕಿರಣ್ ಶ್ರೀನಿವಾಸ್, ಸುನಿಲ್ ರಾವ್ ಬಿಗ್ ಬಾಸ್ ಮನೆ ಅತಿಥಿಗಳಾ? ಸ್ಯಾಂಡಲ್​ವುಡ್​ನ ನಟರಾದ ಕಿರಣ್ ಶ್ರೀನಿವಾಸ್ ಹಾಗೂ ಸುನಿಲ್ ರಾವ್ ಕೂಡ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಎಕ್ಸ್​ಕ್ಯೂಸ್ ಮಿ ನಟ ಸುನಿಲ್ ಅಂತೂ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಕಿರಣ್ ಫ್ಯಾನ್ ಫಾಲೋವರ್ಸ್ ಸಂಖ್ಯೆಗೂ ಕೊರತೆ ಏನಿಲ್ಲ.

‘ಲವ್ ಗುರು’ ರಾಜೇಶ್ ಮತ್ತು ಕಿರುತೆರೆ ನಟಿ ಸಮೀಕ್ಷಾ ಲವ್ ಗುರು ಖ್ಯಾತಿಯ ರಾಜೇಶ್ ಹಾಗೂ ಮೂರುಗಂಟು ನಟಿ ಸಮೀಕ್ಷಾ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಓಡಾಡುತ್ತಿದೆ. ಇಬ್ಬರೂ ಕೂಡ ಬಿಗ್ ಬಾಸ್ ಮನೆಯಲ್ಲಿ ನೋಡುಗರ ಮನಸೂರೆಗೊಳ್ಳುತ್ತಾರೆ ಎಂಬ ನಿರೀಕ್ಷೆ ಜೋರಾಗಿದೆ.

ಅಗ್ನಿಸಾಕ್ಷಿಯ ಸುಕೃತಾ ಅಮೃತವರ್ಷಿಣಿಯ ರಜಿನಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿಯಾಗಿ ಮಿಂಚಿದ್ದ ಸುಕೃತಾ ಮತ್ತು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಬಿಗ್ ಬಾಸ್ ಮನೆಯ ಅತಿಥಿಗಳಾಗಲಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಮಿಡಿ ಕ್ವಾಟ್ಲೆ ಕೊಡುತ್ತಾರಾ ತಬಲಾ ನಾಣಿ, ತರಂಗ ವಿಶ್ವ? ಕಾಮಿಡಿ ನಟನೆಯಲ್ಲಿ ಹೆಸರು ಗಳಿಸಿರುವ ಅನುಭವಿ ನಟರಿಬ್ಬರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಮಾತು ಬಿಗ್ ಬಾಸ್ ಪ್ರಿಯರದು. ಹಾಗೆಯೇ ಆದರೆ, ತಬಲಾ ನಾಣಿ ಮತ್ತು ತರಂಗ ವಿಶ್ವ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.

ಸರಿಗಮಪ.. ಹನುಮಂತ ಆಗ್ತಾರಾ ಬಿಗ್ ಬಾಸ್! ಸರಿಗಮಪ ಮೂಲಕ ಜನರ ಮನೆ-ಮನದಲ್ಲಿ ಅಚ್ಚಳಿಯದೆ ಉಳಿದ ಹೆಸರು ಹನುಮಂತ. ಆತನ ಹಾಡು, ಭಾವ, ಮಾತು ಎಲ್ಲವೂ ಜನರಿಗೆ ಇಷ್ಟ. ಹಳ್ಳಿ ಹುಡುಗ ಹನುಮಂತ ಬಿಗ್ ಬಾಸ್ ಮನೆಗೆ ಹೋಗುತ್ತಾರೆ, ಭರಪೂರ ಮನರಂಜನೆ ನೀಡುತ್ತಾರೆ ಎಂಬ ನಿರೀಕ್ಷೆ ಪ್ರೇಕ್ಷಕರದ್ದು.

ನಿರೂಪಕ ಅಮರ್ ಪ್ರಸಾದ್ ಸುದ್ದಿವಾಹಿನಿಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡು ಪರಿಚಿತರಾಗಿದ್ದ ಅಮರ್​ ಪ್ರಸಾದ್ ಹೆಸರು ಕೂಡ ಬಿಗ್​ಬಾಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಈ ಹಿಂದೆಯೂ ಹಲವು ಸುದ್ದಿ ವಾಚಕರು ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಂಡಿದ್ದರಿಂದ ಈ ಬಾರಿಯೂ ಸುದ್ದಿ ಮಾಧ್ಯಮಗಳಿಂದ ಒಬ್ಬರು ಇರಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್​ಬಾಸ್ ಶೋ..​ ಎಲ್ಲಿ ನೋಡಬಹುದು? ಎಷ್ಟೊತ್ತಿಗೆ ನೋಡಬಹುದು? ಫೆಬ್ರವರಿ 28, ಸಂಜೆ 6 ಗಂಟೆಗೆ ಅದ್ದೂರಿಯಾಗಿ ತೆರೆಕಾಣುತ್ತಿರುವ ಬಿಗ್​ಬಾಸ್​ ಸೀಸನ್​ 8 ಈ ಬಾರಿಯೂ 100 ದಿನಗಳ ಕಾಲ ನಡೆಯಲಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿರುವ ಬಿಗ್​ಬಾಸ್​ ವಾಹಿನಿಯ ಡಿಜಿಟಲ್​ ವೇದಿಕೆ Vootನಲ್ಲೂ ಲಭ್ಯವಿರಲಿದೆ. ಇನ್ನು ವಾರಾಂತ್ಯದಲ್ಲಿ ಸುದೀಪ್​ ಎಂದಿನಂತೆ ಕಾಣಿಸಿಕೊಳ್ಳಲಿದ್ದು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸೀಸನ್​ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ