AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಬಿಗ್​ ಬಾಸ್​ ಸೀಸನ್​ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ

ಬಿಗ್​ ಬಾಸ್​ 9 ಸಣ್ಣ ಗ್ಯಾಪ್​ ನಂತರ ಬರುವ ಸಾಧ್ಯತೆ ಇದೆ. ಬಿಗ್​ ಬಾಸ್​ 9 ನವೆಂಬರ್​​ನ ಲ್ಲಿ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು ಪರಮೇಶ್ವರ್​ ಗುಂಡ್ಕಲ್​.

Bigg Boss Kannada 8: ಬಿಗ್​ ಬಾಸ್​ ಸೀಸನ್​ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ
ಬಿಗ್ ಬಾಸ್ ಕನ್ನಡ
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on:Feb 25, 2021 | 5:20 PM

Share

ಇದೇ ಭಾನುವಾರದಿಂದ ಕನ್ನಡ ಬಿಗ್​ ಬಾಸ್​ 8 ಆರಂಭವಾಗುತ್ತಿದೆ. ಬಿಗ್​ ಬಾಸ್​ ಆರಂಭವಾಗುವುದಕ್ಕೂ ಮೊದಲು ಈ ಕುರಿತು ನಟ ಸುದೀಪ್​ ಹಾಗೂ ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಬಿಗ್​ ಬಾಸ್​ 8 ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಮೊದಲು ಮಾತು ಆರಂಭಿಸಿದ ಪರಮೇಶ್ವರ್​ ಗುಂಡ್ಕಲ್​, ಇದು 8ನೇ ಸೀಸನ್​. ಬೇರೇ ಬೇರೆ ವ್ಯಕ್ತಿಗಳ ನಡುವಳಿಕೆಗಳನ್ನು ತೋರಿಸೋ ಶೋ. ಈ ಶೋ ಮುಖ್ಯವಾಗಿ ಆ್ಯಕ್ಷನ್​-ರಿಯಾಕ್ಷನ್​ಗಳನ್ನು ಒಳಗೊಂಡಿರುತ್ತದೆ. ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ ಶುರು ಆಗಲಿದೆ. ನಿತ್ಯ 9:30ಕ್ಕೆ ಬಿಗ್​ ಬಾಸ್​ ಪ್ರಸಾರವಾಗಲಿದೆ ಎಂದರು.

ಈ ಬಾರಿ ಎಷ್ಟು ಸ್ಪರ್ಧಿಗಳು ಇರುತ್ತಾರೆ ಎನ್ನುವ ಪ್ರಶ್ನೆಗೆ ಪರಮೇಶ್ವರ್ ಗುಂಡ್ಕಲ್​ ಉತ್ತರಿಸಿದ್ದಾರೆ. ಈ ಬಾರಿ 17 ಸ್ಪರ್ಧಿಗಳನ್ನು ಮನೆಗೆ ಕಳುಹಿಸಬೇಕು ಎನ್ನುವ ಉದ್ದೇಶ ಇದೆ. ಇವರನ್ನು ಈಗಾಗಲೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಯಾರಾದರೂ ಒಬ್ಬರಿಗೆ ಪಾಸಿಟಿವ್​ ಬಂದರೂ ಅವರನ್ನು ಮನೆ ಒಳಗೆ ಕಳುಹಿಸೋಕೆ ಆಗಲ್ಲ. ಹೀಗಾಗಿ ಈಗಲೇ ಸ್ಪರ್ಧಿಗಳ ಲೆಕ್ಕ ನೀಡೋಕೆ ಆಗಲ್ಲ ಎಂದಿದ್ದಾರೆ ಅವರು. ​

ಈ ಬಾರಿಯದ್ದು ಸೆಲೆಬ್ರಿಟಿ ಸೀಸನ್​. ಹೀಗಾಗಿ, ಜನಸಾಮಾನ್ಯರು ಮನೆ ಒಳಗೆ ಹೋಗಲ್ಲ. ಸ್ಪರ್ಧಿಗಳಿಗೆ ಬಯೋಬಬಲ್​ ಕ್ರಿಯೇಟ್​ ಮಾಡೋಕೆ ತುಂಬಾನೇ ಒದ್ದಾಡುತ್ತಿದ್ದೇವೆ. ಕೊರೊನಾ ಇರುವುದರಿಂದ ತುಂಬಾನೇ ಎಚ್ಚರಿಕೆ ವಹಿಸಿ ಈ ಬಾರಿಯ ಸ್ಪರ್ಧಿಗಳನ್ನು ಕಳುಹಿಸುತ್ತಿದ್ದೇನೆ. ಬಿಗ್​ ಬಾಸ್​ ಮನೆ ತುಂಬಾನೇ ಭಿನ್ನವಾಗಿದೆ. ಗಾರ್ಡನ್​ ಏರಿಯಾ ಬದಲಾಯಿಸಲಾಗಿದೆ. ಈ ಬಾರಿ ಬಿಗ್​ ಬಾಸ್​ ವೂಟ್​ನಲ್ಲಿ ಲೈವ್​​ ಮೂಲಕ 24 ಗಂಟೆಗಳ ಕಾಲ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದರು.

ಬಿಗ್​ ಬಾಸ್​ ಸೀಸನ್​ 9ರ ಬಗ್ಗೆ ಮಾಹಿತಿ ನೀಡಿದ ಪರಮೇಶ್ವರ್​, ಬಿಗ್​ ಬಾಸ್​ 8, 100 ದಿನಗಳ ನಂತರ ಪೂರ್ಣಗೊಳ್ಳುತ್ತಿದೆ. ಐಪಿಎಲ್​ ಮಾದರಿಯಲ್ಲೇ ಈ ಬಾರಿಯ ಬಿಗ್​ ಬಾಸ್​ ವೇಳಾಪಟ್ಟಿ ಕೂಡ ಸ್ವಲ್ಪ ಆಚೀಚೆ ಆಗಿದೆ. ಹೀಗಾಗಿ, ಬಿಗ್​ ಬಾಸ್​ 9 ಸಣ್ಣ ಗ್ಯಾಪ್​ ನಂತರ ಬರುವ ಸಾಧ್ಯತೆ ಇದೆ. ಬಿಗ್​ ಬಾಸ್​ 9 ನವೆಂಬರ್​​ನ ಲ್ಲಿ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಸುದೀಪ್​ ಏನಂದ್ರು?

ಪ್ರೋಮೋ ಮಾಡೋದು ತುಂಬಾನೇ ಮಜಾ ಇತ್ತು. ಈ ಬಾರಿಯ ಪ್ರೋಮೋಗಳು ತುಂಬಾನೇ ಇಷ್ಟವಾಗಿವೆ. ಈ ಬಾರಿ ಬಂದಿದ್ದು ಜನಸಾಮಾನ್ಯರ ಪ್ರೋಮೋ . ಬಿಗ್​ ಬಾಸ್​​ ಅನ್ನು ನಾನು ಯಾವಾಗಲೂ ಎಂಜಾಯ್​ ಮಾಡುತ್ತೇನೆ ಎಂದು ಸುದೀಪ್​ ಮಾತು ಆರಂಭಿಸಿದರು.

ಇವರು ಸ್ಪರ್ಧಿಗಳನ್ನು ತಂದು ಮನೆ ಒಳಗೆ ಇಡುತ್ತಾರೆ. ಆದರೆ, ನಂತರ ಅವರನ್ನು ನಾನು ಹ್ಯಾಂಡಲ್​ ಮಾಡಬೇಕು. ಮನೆ ಒಳಗೆ ಹೋದವರು ಹೀಗೆ ಆಡ್ತಾರೆ, ಹಾಗೆ ಆಡ್ತಾರೆ ಎಂದು ಹೇಳೋದು ಕಷ್ಟ. ಏನೋ ಮಾಡಲು ಹೋಗಿ ಏನೋ ಮಾಡಿದವರನ್ನ ನೋಡಿದ್ದೇನೆ. ಶೂಟಿಂಗ್​ಗೆ ಹೋಗುವಾಗ ಏನು ನಡೆಯುತ್ತೆ ಎನ್ನುವುದು ಖಾತ್ರಿ ಇರುತ್ತದೆ. ಆದರೆ, ಇಲ್ಲಿ ಹಾಗೆ ಆಗುವುದಿಲ್ಲ. ಸ್ಪರ್ಧಿಗಳು ಏನು ಮಾತನಾಡುತ್ತಾರೋ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದಿದ್ದಾರೆ.

ಬಿಗ್​ ಬಾಸ್​ ಮನೆ ಒಳಗೆ ನೀವು ಹೋಗೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ನಾನು ಕೇಳಿದಷ್ಟು ಸಂಭಾವನೆಯನ್ನು ಕೊಡುತ್ತಾರೆ ಎಂದರೆ ಮನೆಯ ಒಳಗೆ ಹೋಗೋಕೆ ಸಿದ್ಧನಿದ್ದೇನೆ. ಸೆಲೆಬ್ರಿಟಿಗಳೇ ಮನೆಯ ಒಳಗೆ ಹೋದರೆ ಆಮೇಲೆ ಇಲ್ಲಿ ನಿರೂಪಣೆ ಮಾಡೋದು ಯಾರು ಎನ್ನುವ ಪ್ರಶ್ನೆ ಬರುತ್ತದೆ ಎಂದು ನಕ್ಕರು ಸುದೀಪ್​.

ಇದನ್ನೂ ಓದಿ: Bigg Boss Kannada 8: ಕನ್ನಡ ಬಿಗ್​ ಬಾಸ್​-8ಕ್ಕೆ ಆಯ್ಕೆಯಾದ ಸ್ಪರ್ಧಿಗಳು ಸ್ಟಾರ್​ ಹೋಟೆಲ್​ಗಳಲ್ಲಿ ಕ್ವಾರಂಟೈನ್?

Published On - 4:44 pm, Thu, 25 February 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More