ಬೆಂಗಳೂರು: ಬಹುನಿರೀಕ್ಷಿತ ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ತಿಂಗಳ ಅಂತ್ಯಕ್ಕೆ ಜನರನ್ನು ರಂಜಿಸಲು ಅದ್ಧೂರಿಯಾಗಿ ತೆರೆ ಮೇಲೆ ಬರಲಿದೆ. ಕೊರೊನಾದಿಂದಾಗಿ ಕಳೆದ ವರ್ಷ ನಡೆಯದ ಬಿಗ್ ಬಾಸ್ ಈ ವರ್ಷ ನಡೆಯಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಆಯ್ಕೆಯಾದ ಸ್ಪರ್ಧಿಗಳು ನಿನ್ನೆಯಿಂದ (ಫೆಬ್ರವರಿ 17) ಕ್ವಾರಂಟೈನ್ ಆಗಿದ್ದಾರಂತೆ. ನಗರದ ವಿವಿಧ ಹೋಟೆಲ್ಗಳಲ್ಲಿ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 8 ಫೆಬ್ರವರಿ 28 ರಿಂದ ಪ್ರಾರಂಭವಾಗಲಿದೆ. ಶೋ ಪ್ರಸಾರವಾಗುವ ಬಗ್ಗೆ ಕನ್ನಡ ವಾಹಿನಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟೀಸರ್ ಬಿಡುಗಡೆ ಮಾಡಿದ್ದು, ಫೆಬ್ರವರಿ 28 ರಂದು ಶೋ ಪ್ರಸಾರವಾಗುವುದನ್ನು ಖಚಿತಪಡಿಸಿದೆ. ಸದ್ಯ ಕೆಲ ದಿನಗಳಿಂದ ಭಾರತದಲ್ಲಿ ಕೊರೊನಾ ಆತಂಕ ಮತ್ತೆ ಹೆಚ್ಚಾಗುತ್ತಿದೆ. ಇವೆಲ್ಲವನ್ನೂ ನೋಡಿದ್ರೆ ಸ್ಪರ್ಧಿಗಳು ತಮ್ಮ ಕೋವಿಡ್ 19 ಪರೀಕ್ಷೆಗಳ ನಂತರ ಬಿಗ್ ಬಾಸ್ ಮನೆಗೆ ಪ್ರವೇಶಿಸುವುದು ಗ್ಯಾರಂಟಿಯಾಗಿದೆ.
ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ಸೆಲ್ಫ್ ಕ್ವಾರಂಟೈನ್ ಮಾಡಿಕೊಳ್ಳಬೇಕು. ಹೀಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 8 ಗೆ ಆಯ್ಕೆಯಾದ ಅಭ್ಯರ್ಥಿಗಳು ಫೆಬ್ರವರಿ 17 ರಿಂದ ಕ್ವಾರಂಟೈನ್ ಆಗುವ ಸಾಧ್ಯತೆಯಿದೆ. ನಗರದ ವಿವಿಧ ಹೋಟೆಲ್ಗಳಲ್ಲಿ ಸ್ಪರ್ಧಿಗಳು ಕ್ವಾರಂಟೈನ್ ಆಗಲಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲು ಇನ್ನಿತರ ಕೆಲವು ಮೆಡಿಕಲ್ ಚೆಕಪ್’ಗೆ ಒಳಗಾಗಬೇಕಾಗುತ್ತದೆ. ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬಿಗ್ ಬಾಸ್ ಮನೆಯನ್ನು ಆಗಾಗ್ಗೆ ಸ್ವಚ್ಛಗೊಳಿಸಲಾಗುತ್ತಿದೆ. ಪ್ರದರ್ಶನದುದ್ದಕ್ಕೂ ವಿಶೇಷ ವೈದ್ಯಕೀಯ ತಂಡವೂ ಇರಲಿದೆ.
ಮತ್ತೊಂದೆಡೆ ಹಿಂದಿನ ಸೀಸನ್ಗಳಂತೆ ಬಿಗ್ ಬಾಸ್ ಮನೆ ಹೊಸ ಲುಕ್ ಪಡೆದಿದೆ. ಶೋಗೆ ಸ್ಪರ್ಧಿಗಳನ್ನು ಸ್ವಾಗತಿಸಲು ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಸೀಸನ್ನಲ್ಲಿ ಸೆಲೆಬ್ರಿಟಿಗಳು ಮಾತ್ರ ಇರಲಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಬಾರಿ ದಂಪತಿ ಸ್ಪರ್ಧಿಗಳಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ
Bigg Boss Kannada 8 ಪ್ರವೇಶಿಸುವ ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ..
Bigg Boss Kannada 8: ಬಿಗ್ ಬಾಸ್ ವೀಕೆಂಡ್ ಶೋಗೆ ಸುದೀಪ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?