ರಾಬರ್ಟ್‌ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಕಮಾಲ್ ಏನು? ಡಿ ಬಾಸ್ ಬರ್ತ್‌ಡೇ ದಿನ ಏನ್ ಮಾಡುದ್ರು.. ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ

Roberrt Trailer | ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾದ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದೆ. ಒಂದ್ಕಡೆ ಟ್ರೇಲರ್‌ ಕ್ರೇಜ್‌ ಜೊತೆಗೆ ಹಾಡುಗಳ ಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಹಾಗಿದ್ರೆ ಸದ್ಯ ಹಾಡುಗಳ ಹಬ್ಬಕ್ಕೆ ನಡೀತಿರೋ ಸಿದ್ಧತೆ ಹೇಗಿದೆ. ಇನ್ನು ದರ್ಶನ್‌ ಬರ್ತ್‌ಡೇ ದಿನ ದರ್ಶನ್‌ ಏನ್ ಮಾಡಿದ್ರು ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.

ರಾಬರ್ಟ್‌ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಕಮಾಲ್ ಏನು? ಡಿ ಬಾಸ್ ಬರ್ತ್‌ಡೇ ದಿನ ಏನ್ ಮಾಡುದ್ರು.. ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ
ರಾಬರ್ಟ್​ ಸಿನಿಮಾ ಟೀಸರ್​ನ ಒಂದು ದೃಶ್ಯ
Follow us
ಆಯೇಷಾ ಬಾನು
|

Updated on:Feb 18, 2021 | 9:58 AM

ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕು ಅಂದ್ರೆ ಇಬ್ಬೊಬ್ಬರ ಲೈಫ್‌ನಲ್ಲಿ ವಿಲನ್‌ ಆಗಲೇಬೇಕು ಅಂತ ಖಡಕ್‌ ಡೈಲಾಗ್‌ ಹೊಡೆದು ಅಭಿಮಾನಿಗಳ ತಲೆಯಲ್ಲಿ ಬರ್ತ್‌ಡೇ ದಿನ ಹುಳ ಬಿಟ್ಟಿದ್ದಾರೆ. ಶಬರಿ ಮುಂದೆ ಸೋಲೋದು ಗೊತ್ತು.. ರಾವಣನ ಮುಂದೆ ಗೆಲ್ಲೋದು ಗೊತ್ತು ಅನ್ನೋ ಗತ್ತು ದಚ್ಚು ಅಭಿಮಾನಿಗಳು ಮತ್ತಷ್ಟು ಕತ್ತು ಎತ್ತಿ ಗತ್ತಿನಲ್ಲೇ ನಡೆಯುವಂಥಾ ಕ್ರೇಜ್ ಸೃಷ್ಟಿಸಿದೆ. ಸ್ಯಾಂಡಲ್‌ವುಡ್‌ ರಾಬರ್ಟ್ ಟ್ರೇಲರ್‌ ರಿಲೀಸ್ ಆಗಿ 2 ದಿನಕ್ಕೆ 6 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಪಡೆದಿದ್ರೆ, 2 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಟಾಲಿವುಡ್‌ ರಾಬರ್ಟ್‌ ಟ್ರೇಲರ್‌ಗೆ ಸಿಕ್ಕಿದೆ.

ಅಂದ್ಹಾಗೆ ಸದ್ಯ ಅವ್ರ ಅಭಿಮಾನಿಗಳು ಇನ್ನೂ ಕೂಡ ಟ್ರೇಲರ್‌ ನೋಡಿ ಹಬ್ಬದ ರೀತಿ ಸಂಭ್ರಮಿಸ್ತಿರೋವಾಗ್ಲೇ ಚಿತ್ರದ ಹಾಡುಗಳ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಅಂದ್ಹಾಗೆ ಸದ್ಯ ಫೆಬ್ರವರಿ 26 ಹಾಗೂ ಫೆಬ್ರವರಿ 28ಕ್ಕೆ ಹಾಡುಗಳನ್ನ ರಿಲೀಸ್‌ ಮಾಡೋ ಪ್ಲ್ಯಾನ್ ಮಾಡಿದ್ಯಂತೆ. ಫೆಬ್ರವರಿ 26ರಂದು ಹುಬ್ಬಳ್ಳಿಯಲ್ಲಿ ಹಾಗೂ ಫೆಬ್ರವರಿ 28ರಂದು ಹೈದರಾಬಾದ್‌ನಲ್ಲಿ ರಾಬರ್ಟ್‌ ಆಡಿಯೋ ಅಬ್ಬರ ಶುರುವಾಗಲಿದೆ.

ಈಗಾಗಲೇ ಟ್ರೇಲರ್‌ ಹಾಗೂ ಸಾಂಗ್‌ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ರೆ, ಇತ್ತ ದರ್ಶನ್‌ ಫೆಬ್ರವರಿ 16ರಂದು ಹುಟ್ಟುಹಬ್ಬದ ದಿನ ಎಲ್ಲಿದ್ರು ಅಂತ ಅಭಿಮಾನಿಗಳಿಗೆ ದೊಡ್ಡ ಕುತೂಹಲವಿತ್ತು. ಆದ್ರೆ, ದರ್ಶನ್‌, ರಾಬರ್ಟ್‌ ನಿರ್ಮಾಪಕ ಉಮಾಪತಿ ಸೇರಿದಂತೆ ಅವ್ರ ಆಪ್ತರು ಹಾಗೂ ನಟರ ಜತೆ ಮೈಸೂರಿನ ಬಳಿ ಇರೋ ಫಾರ್ಮ್‌ ಹೌಸ್‌ನಲ್ಲಿ ಕಾಲ ಕಳೆದಿದ್ದಾರೆ. ಅದ್ರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್​ (Challenging Star Darshan) ಹುಟ್ಟುಹಬ್ಬದ ದಿನದಂದು ದರ್ಶನ್ ಜನ್ಮದಿನಾಚರಣೆ ಪ್ರಯುಕ್ತ ‘ರಾಬರ್ಟ್​’ (Roberrt) ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್​ ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದರು. ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಅರ್ಧತಾಸಿನಲ್ಲಿ ಸುಮಾರು 4.50 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿತ್ತು.

ಮಾರ್ಚ್​ 11ರಂದು ಶಿವರಾತ್ರಿ ದಿನವೇ ರಾಬರ್ಟ್​ ಸಿನಿಮಾ ಬಿಡುಗಡೆಯಾಗಲಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್, ವಿನೋದ್ ಪ್ರಭಾಕರ್​, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್ ಸೇರಿದಂತೆ ಮೊದಲಾದವರು ಅಭಿನಯಿಸಿರುವ ಈ ಚಿತ್ರದ ಕುರಿತು ಬಹು ನಿರೀಕ್ಷೆ ವ್ಯಕ್ತವಾಗುತ್ತಿದೆ. ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶನ ಮಾಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ವಿ.ಹರಿಕೃಷ್ಣ ಅವರು ಬ್ಯಾಕ್​ಗ್ರೌಂಡ್ ಸ್ಕೋರ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಜೋರಾಗಿಯೇ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ. ಒಟ್ನಲ್ಲಿ ಸದ್ಯ ಟ್ರೇಲರ್‌ ಮಾಡ್ತಿರೋ ಮೋಡಿಗೆ ಬೆರಗಾಗಿ ಕಾಯ್ತಿರೋ ಫ್ಯಾನ್ಸ್‌ ಇನ್ನು ಸಾಂಗ್‌ ರಿಲೀಸ್‌ಗೆ ಹೇಗೆ ರೆಡಿಯಾಗ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ. ಇದನ್ನೂ ಓದಿ: Roberrt Trailer: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್

Published On - 7:42 am, Thu, 18 February 21

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ