Bigg Boss Kannada 8 ಪ್ರವೇಶಿಸುವ ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ..
ಈ ಬಾರಿ ಈ ಮನೆಗೆ ಯಾರೆಲ್ಲ ಪ್ರವೇಶ ಮಾಡಲಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.
Updated on: Feb 02, 2021 | 5:10 PM

tv9 kannada digital news digest important developments of the day february 28 2021

ಬಿಗ್ ಬಾಸ್ ಆರಂಭದಲ್ಲಿ ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಗುರುತಿಸಿಕೊಂಡವರನ್ನು ಮಾತ್ರ ಕರೆಸಿಕೊಳ್ಳುತ್ತಿದ್ದರು. ನಂತರ ಸಾಮಾನ್ಯ ವ್ಯಕ್ತಿಗಳಿಗೂ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಕಳೆದ ಬಾರಿಯಿಂದ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸೋದಕ್ಕೆ ಅವಕಾಶವಿಲ್ಲ. ಹೀಗಾಗಿ, ಈ ಬಾರಿಯೂ ಬಿಗ್ ಬಾಸ್ಮನೆಯಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಈ ಬಾರಿ ಈ ಮನೆಗೆ ಯಾರೆಲ್ಲ ಪ್ರವೇಶ ಮಾಡಲಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ರವಿಶಂಕರ್ ಗೌಡ: ಸಿಲ್ಲಿ ಲಲ್ಲಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಇವರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರಂತೆ.

ಹನುಮಂತ: ಸರಿಗಮಪ ಖ್ಯಾತಿಯ ಹನುಮಂತ ಕೂಡ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

Chief Minister BS Yediyurappa is working his old age says Vinay Guruji

ವಿನಯಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಡಲಿದ್ದಾರಂತೆ.

ಸುನೀಲ್: ನಟ ಸುನೀಲ್ ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರಂತೆ.

ನಟ ಅನಿರುದ್ಧ್: ಕಿರುತೆರೆಯಲ್ಲಿ ಹೆಚ್ಚು ಹೆಸರು ಮಾಡಿರುವ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲಿದ್ದಾರಂತೆ.

ವೈಷ್ಣವಿ ಗೌಡ: ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಇವರು ಕೂಡ ರಿಯಾಲಿಟಿ ಶೋನಲ್ಲಿ ಇರಲಿದ್ದಾರಂತೆ.

ಅಮರ್ ಪ್ರಸಾದ್: ಸುದ್ದಿ ವಾಹಿನಿ ಆ್ಯಂಕರ್ ಅಮರ್ ಪ್ರಸಾದ್ ಕೂಡ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಮಾತಿದೆ.

ನಯನಾ: ಕಾಮಿಡಿ ಕಿಲಾಡಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ ನಯನಾ.




