AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಬಿಗ್​ ಬಾಸ್ ವೀಕೆಂಡ್​ ಶೋಗೆ ಸುದೀಪ್​ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Bigg Boss Kannada 8: ಸಾಕಷ್ಟು ವೀಕ್ಷಕರು ಸುದೀಪ್​ಗಾಗಿಯೇ ಬಿಗ್​ ಬಾಸ್​ ನೋಡುವವರಿದ್ದಾರೆ. ಹೀಗಾಗಿ, ಮುಂದಿನ ಸೀಸನ್​ಗಳನ್ನೂ ಅವರೇ ನಡೆಸುಕೊಡಬಹುದು ಎನ್ನಲಾಗುತ್ತಿದೆ.

Bigg Boss Kannada 8: ಬಿಗ್​ ಬಾಸ್ ವೀಕೆಂಡ್​ ಶೋಗೆ ಸುದೀಪ್​ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?
ಬಿಗ್​ ಬಾಸ್ ಆರಂಭದಲ್ಲಿ ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಗುರುತಿಸಿಕೊಂಡವರನ್ನು ಮಾತ್ರ ಕರೆಸಿಕೊಳ್ಳುತ್ತಿದ್ದರು. ನಂತರ ಸಾಮಾನ್ಯ ವ್ಯಕ್ತಿಗಳಿಗೂ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಕಳೆದ ಬಾರಿಯಿಂದ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸೋದಕ್ಕೆ ಅವಕಾಶವಿಲ್ಲ. ಹೀಗಾಗಿ, ಈ ಬಾರಿಯೂ ಬಿಗ್ ಬಾಸ್​​ಮನೆಯಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ರಾಜೇಶ್ ದುಗ್ಗುಮನೆ
| Edited By: |

Updated on:Feb 02, 2021 | 2:17 PM

Share

ಇದೇ ತಿಂಗಳಿಂದ ಕನ್ನಡ ಬಿಗ್​ ಬಾಸ್​ ಸೀಸನ್​ 8 ರಿಯಾಲಿಟಿ ಶೋ ತೆರೆಗೆ ಬರೋಕೆ ಸಿದ್ಧವಾಗಿದೆ. ಬಿಗ್​ ಬಾಸ್​ ಮನೆ ಒಳಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ಇದರ ಜತೆ ಜತೆಗೆ ಸುದೀಪ್​ ಸಂಭಾವನೆ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ. ಹಾಗಾದರೆ, ಸುದೀಪ್​ ಒಂದು ಸೀಸನ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದಕ್ಕೆ ಇಲ್ಲಿದೆ ವಿವರ.

ಸೀಸನ್​ 1ರಿಂದ ಕನ್ನಡ ಬಿಗ್​ ಬಾಸ್​​ಅನ್ನು ಸುದೀಪ್​ ಅವರೇ ನಡೆಸಿಕೊಡುತ್ತಿದ್ದಾರೆ. ಈ ಬಾರಿಯು ಬಿಗ್​ ಬಾಸ್​ ಮನೆಗೆ ಸುದೀಪ್ ಸಾರಥ್ಯವೇ ಇರಲಿದೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಸುದೀಪ್​ ಬಿಗ್​ ಬಾಸ್​ ಸ್ಪರ್ಧಿಗಳ ಜತೆ ಮಾತುಕತೆ ನಡೆಸುತ್ತಾರೆ. ಸುದೀಪ್​ ತಮ್ಮ ಮಾತಿನ ಮೂಲಕವೇ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರ ನಿರೂಪಣೆಯೆ ಬಿಗ್​ ಬಾಸ್​ಗೆ ಒಂದು ಶೋಭೆ ಎಂದರೆ ತಪ್ಪಾಗಲಾರದು. ಹೀಗಾಗಿ, ಬಿಗ್​ಬಾಸ್​ಗೆ ಸುದೀಪ್​ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.

ಬಿಗ್​ ಬಾಸ್​ ಮೂರು ಸೀಸನ್​ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್​ ನಡೆಸಿಕೊಟ್ಟಿದ್ದರು. ನಂತರದ ಐದು ಸೀಸನ್​ಗೆ ಸುದೀಪ್​ ಒಪ್ಪಂದ ಮಾಡಿಕೊಂಡಿದ್ದರು. ಸೀಸನ್​ 8ಕ್ಕೆ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈ ಐದು ಸೀಸನ್​ಗೆ ಸುದೀಪ್​ 20 ಕೋಟಿ ರೂಪಾಯಿ ಪಡೆದಿದ್ದಾರೆ. ಅಂದರೆ, ಒಂದು ಸೀಸನ್​ಗೆ 4 ಕೋಟಿ ರೂಪಾಯಿ ಆಗಲಿದೆ.

ಇನ್ನು, 8 ಸೀಸನ್​ ಪೂರ್ಣಗೊಂಡ ನಂತರವೂ ಸುದೀಪ್​ ಅವರೇ ಬಿಗ್​ ಬಾಸ್​ ನಡೆಸಿಕೊಡುವ ಸಾಧ್ಯತೆ ಇದೆ. ಸಾಕಷ್ಟು ವೀಕ್ಷಕರು ಸುದೀಪ್​ಗಾಗಿಯೇ ಬಿಗ್​ ಬಾಸ್​ ನೋಡುವವರಿದ್ದಾರೆ. ಹೀಗಾಗಿ, ಮುಂದಿನ ಸೀಸನ್​ಗಳನ್ನೂ ಅವರೇ ನಡೆಸಿಕೊಡಬಹುದು ಎನ್ನಲಾಗುತ್ತಿದೆ.

12 ವಾರಗಳ ಬಿಗ್ ಬಾಸ್ ಸೀಸನ್​ಗೆ ಸಲ್ಲೂ ಪಡೆಯಲಿರೋದು ಬರೋಬ್ಬರಿ ರೂ. 450 ಕೋಟಿ!!!

Published On - 2:15 pm, Tue, 2 February 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More