Rajamarthanda Trailer: ಅಪ್ಪನ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಮುದ್ದು ಕಂದ ಜೂ.ಚಿರು

Junior Chiru: ಚಿರಂಜೀವಿ ಸರ್ಜಾ ಅಭಿನಯಾದ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಆಗಿದೆ. ಅದರಲ್ಲೂ ವಿಶೇಷ ಅಂದ್ರೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ರ ಮುದ್ದು ಕಂದ ಜೂ.ಚಿರು ಸಿನಿಮಾ ಟ್ರೇಲರ್ ಲಾಂಚ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮುದ್ದು ಕೈಗಳಿಂದ ವಿಡಿಯೋ ಪ್ಲೇ ಮಾಡುವ ಮೂಲಕ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ್ದಾರೆ.

  • TV9 Web Team
  • Published On - 7:47 AM, 19 Feb 2021
Rajamarthanda Trailer: ಅಪ್ಪನ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಮುದ್ದು ಕಂದ ಜೂ.ಚಿರು
ಪುಟ್ಟ ಪುಟ್ಟ ಮುದ್ದು ಕೈಗಳಿಂದ ವಿಡಿಯೋ ಪ್ಲೇ ಮಾಡುವ ಮೂಲಕ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಜೂ.ಚಿರು

ಬೆಂಗಳೂರು: ಇಂದು ಸರ್ಜಾ ಫ್ಯಾಮಿಲಿಗೆ ಶುಭ ದಿನ. ಎರಡೆರಡು ಸಿಹಿ ಸುದ್ದಿ. ಒಂದು ಕಡೆ ಇಂದು ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಅದ್ದೂರಿಯಾಗಿ ತೆರೆ ಕಂಡಿದೆ. ಮೂರು ವರ್ಷಗಳ ಬ್ರೇಕ್​ನ ನಂತರ ಪೊಗರು ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿಕೊಟ್ಟಿದೆ. ಧ್ರುವ ಖರಾಬ್ ಲುಕ್​ಗೆ ಫ್ಯಾನ್ಸ್ ಫೀದಾ ಆಗಿದ್ದಾರೆ. ಮತ್ತೊಂದೆಡೆ ಚಿರಂಜೀವಿ ಸರ್ಜಾ ಅಭಿನಯಾದ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಆಗಿದೆ. ಅದರಲ್ಲೂ ವಿಶೇಷ ಅಂದ್ರೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ರ ಮುದ್ದು ಕಂದ ಜೂ.ಚಿರು ಸಿನಿಮಾ ಟ್ರೇಲರ್ ಲಾಂಚ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮುದ್ದು ಕೈಗಳಿಂದ ವಿಡಿಯೋ ಪ್ಲೇ ಮಾಡುವ ಮೂಲಕ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಪೊಗರು ಸಿನಿಮಾ ರಿಲೀಸ್ ದಿನವೇ ಚಿರು ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಇನ್ನು ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಸಿನಿಮಾ ಟ್ರೇಲರ್ ಇಂದು ಬಿಡುಗಡೆಯಾಗಿದ್ದು ಚಿರು ಸಿನಿಮಾ ಟ್ರೇಲರ್​ಗೆ ಧ್ರುವ ಸರ್ಜಾ ಕಂಠದಾನ ಮಾಡಿದ್ದಾರೆ. ಇಂದು ಬೆಳಗ್ಗೆ 7ಗಂಟೆಗೆ ಜೂ.ಚಿರು ಅಮೃತ ಹಸ್ತದಿಂದ ಟ್ರೇಲರ್ ರಿಲೀಸ್ ಬಗ್ಗೆ ನಟಿ ಮೇಘನಾ ರಾಜ್ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ರಾಜಮಾರ್ತಾಂಡ ಚಿರಂಜೀವ ಸರ್ಜಾ ಅಭಿನಯದ ಕೊನೆಯ ಸಿನಿಮಾ.

ಚಿರು 2020ರ ಜೂನ್ 7ರಂದು ನಿಧನರಾದ್ರು. ದುಃಖದಲ್ಲಿ ಮುಳುಗಿದ್ದ ಕುಟುಂಬಕ್ಕೆ 2020ರ ಅಕ್ಟೋಬರ್ 22ರಂದು ಭರವಸೆಯ ಬೆಳಕಂತೆ ಮೇಘನಾ ಚಿರು ಪುತ್ರನಾಗಿ ಜೂ.ಚಿರು ಜನನವಾಯಿತು. ಮುದ್ದು ಕಂದಮ್ಮ ತನ್ನ ಅಪ್ಪನ ಸಿನಿಮಾ ಟ್ರೇಲರ್​ ರಿಲೀಸ್ ಮಾಡಿರೂ ವಿಶೇಷ ಸನ್ನಿವೇಶಕ್ಕೆ ಸಿನಿಮಾ ಇಂಡಸ್ಟ್ರಿ ಇಂದು ಸಾಕ್ಷಿಯಾಗಿದೆ. ಜೊತೆಗೆ ಪೊಗರು ಸಿನಿಮಾ ರಿಲೀಸ್ ಆಗುವ ಥಿಯೇಟರ್​ಗಳಲ್ಲಿ ರಾಜಮಾರ್ತಾಂಡ ಟ್ರೇಲರ್ ಕೂಡ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಒಂದೇ ದಿನ ಬೆಳ್ಳಿ ಪರದೆ ಮೇಲೆ ಸಹೋದರರು ಕಮಾಲ್ ಮಾಡಲಿದ್ದಾರೆ. ಧ್ರುವ ಸಿನಿಮಾ.. ಚಿರು ಟ್ರೇಲರ್ ಅಬ್ಬರ ಶುರುವಾಗಲಿದೆ.

Rajamarthanda

ಪುಟ್ಟ ಪುಟ್ಟ ಮುದ್ದು ಕೈಗಳಿಂದ ವಿಡಿಯೋ ಪ್ಲೇ ಮಾಡುವ ಮೂಲಕ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಜೂ.ಚಿರು

ಇದನ್ನೂ ಓದಿ: Meghana Raj | ಸಿಂಬಾ ಎಂದು ಜೂ.ಚಿರುವನ್ನು ಪರಿಚಯಿಸಿದ ಮೇಘನಾ ರಾಜ್.. ಪ್ರೇಮಿಗಳ ದಿನದಂದೇ ಚಿರು ಪುತ್ರನ ವಿಡಿಯೋ ರಿವಿಲ್