‘ಮಹದಾಯಿ ಸಭೆಯಲ್ಲಿ ನನಗೆ ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಿದ್ರು.. ಆಗ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ’

‘ಮಹದಾಯಿ ಸಭೆಯಲ್ಲಿ ನನಗೆ ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಿದ್ರು.. ಆಗ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ’
ರಮೇಶ್ ಜಾರಕಿಹೊಳಿ

ನಾನು ಸರ್ಕಾರಿ ಶಾಲೆಯಲ್ಲಿ ಓದಿದವ, ನನಗೆ ಇಂಗ್ಲಿಷ್ ಬರಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಜಿಲ್ಲೆಯ ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ರಮೇಶ್ ಜಾರಕಿಹೊಳಿ​ ಹೇಳಿದರು.

KUSHAL V

|

Feb 27, 2021 | 8:32 PM

ಬೆಳಗಾವಿ: ಮಹದಾಯಿ ವಿವಾದ ವಿಚಾರವಾಗಿ ದೆಹಲಿಯಲ್ಲಿ ಸಭೆ ಇತ್ತು. 3 ದಿನಗಳ ಹಿಂದೆ ಸಭೆ ಇತ್ತು. ಸಭೆಯಲ್ಲಿ ನನಗೆ ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಲು ಮುಂದಾದರು. ನಾನು ಸರ್ಕಾರಿ ಶಾಲೆಯಲ್ಲಿ ಓದಿದವ, ನನಗೆ ಇಂಗ್ಲಿಷ್ ಬರಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಜಿಲ್ಲೆಯ ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ರಮೇಶ್ ಜಾರಕಿಹೊಳಿ​ ಹೇಳಿದರು.

ನಮ್ಮ ಮನೆಯಲ್ಲಿ ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾವೆಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲೇ ಹುಟ್ಟಿದ್ದೇವೆ. ನನ್ನ ಮೊಮ್ಮಗ ಕೂಡ ಸರ್ಕಾರಿ ಆಸ್ಪತ್ರೆಯಲ್ಲೇ ಜನಿಸಿದ್ದಾನೆ ಎಂದು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದರು.

‘ಗೋಕಾಕ್ ಜನ ಮನವಿ ಮಾಡಿದರೆ ನನಗೆ ಅಪಮಾನ ಆಗುತ್ತೆ’ ಯಾವುದೇ ಕೆಲಸವಿರಲಿ ಜನರು ಮನವಿ ಮಾಡುವ ಅಗತ್ಯವಿಲ್ಲ. ಗೋಕಾಕ್​ ಜನರು ನನಗೆ ಮನವಿ ಮಾಡುವ ಜರೂರತ್ ಇಲ್ಲ. ಯಾವುದೇ ಕೆಲಸ ಇರಲಿ ಆದೇಶ ಮಾಡುವ ಹಕ್ಕು ಜನರಿಗಿದೆ ಎಂದು ಸಚಿವ ರಮೇಶ್​ ಜಾರಕಿಹೊಳಿ ಹೇಳಿದರು.

ನಿಮ್ಮ ಆಶೀರ್ವಾದದಿಂದ ದೊಡ್ಡ ಪ್ರಮಾಣದಲ್ಲಿ ಬೆಳೀತಿದ್ದೇನೆ. ಗೋಕಾಕ್ ಜನ ಮನವಿ ಮಾಡಿದರೆ ನನಗೆ ಅಪಮಾನ ಆಗುತ್ತೆ. ಗೋಕಾಕ್​ನಲ್ಲಿ ಕನ್ನಡ ಸಾಹಿತ್ಯ ಭವನ, ಸಭಾಭವನ ನಿರ್ಮಿಸಲು ಕ್ರಮ ವಹಿಸುತ್ತೇನೆ ಎಂದು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ರಮೇಶ್​ ಹೇಳಿದರು.

ಬಿಜೆಪಿ ಹೈಕಮಾಂಡ್‌ ನನಗೆ ಟಿಕೆಟ್‌ ನೀಡಲಿ-ಮುತಾಲಿಕ್‌ ಅತ್ತ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ವಿಜಯಪುರ ನಗರದಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ. ಬೆಳಗಾವಿ ಕ್ಷೇತ್ರದ ಬೈಎಲೆಕ್ಷನ್‌ನಲ್ಲಿ ಸ್ಪರ್ಧೆಗೆ ಬಯಸಿದ್ದೇನೆ. ಬಿಜೆಪಿ ಹೈಕಮಾಂಡ್‌ ನನಗೆ ಟಿಕೆಟ್‌ ನೀಡಲಿ ಎಂದು ಮುತಾಲಿಕ್‌ ಹೇಳಿದರು. ನನಗೆ ಟಿಕೆಟ್‌ ನೀಡದಿದ್ರೂ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಇದನ್ನೂ ಓದಿ: ‘ಹಿಂದುತ್ವವನ್ನ ಟೀಕೆ‌ ಮಾಡೋರು ಹಿಂದೂ ವಿರೋಧಿಗಳಲ್ಲ; RSS​​ನವರು ಜನರ ಬ್ರೇನ್​ ವಾಷ್​ ಮಾಡುತ್ತಿದ್ದಾರೆ’

Follow us on

Related Stories

Most Read Stories

Click on your DTH Provider to Add TV9 Kannada