Bigg Boss Kannada 8: ಕನ್ನಡ ಬಿಗ್​ ಬಾಸ್​​ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!

100 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಇರುತ್ತಾರೆ. 17 ಜನ ಮನೆ ಸೇರಿದರೂ ಹಂತ ಹಂತವಾಗಿ ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಾ ಹೋಗುತ್ತಾರೆ. ಕೊನೆಗೆ ಗೆಲ್ಲೋದು ಒಬ್ಬರು ಮಾತ್ರ.

Bigg Boss Kannada 8: ಕನ್ನಡ ಬಿಗ್​ ಬಾಸ್​​ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!
ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on:Feb 26, 2021 | 4:31 PM

ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಬಿಗ್​ ಬಾಸ್​ಗೆ ಚಾಲನೆ ಸಿಗಲಿದೆ. ಬಿಗ್​ ಬಾಸ್​ ಮನೆಗೆ ತೆರಳುವವರು ಈಗಾಗಲೇ ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಭಾನುವಾರ ಈ ಸ್ಪರ್ಧಿಗಳು ನೇರವಾಗಿ ಬಿಗ್​ ಬಾಸ್​ ವೇದಿಕೆ ಏರಲಿದ್ದಾರೆ. ಹಾಗಾದರೆ, ಬಿಗ್​ ಬಾಸ್​ ಶೋ ನಡೆಸೋಕೆ ಎಷ್ಟು ತಂತ್ರಜ್ಞರ ಅವಶ್ಯಕತೆ ಇದೆ ಎನ್ನುವ ಪ್ರಶ್ನೆಗೆ ಅಚ್ಚರಿಯ ಉತ್ತರ ಸಿಕ್ಕಿದೆ. 100 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಇರುತ್ತಾರೆ. 17 ಜನ ಮನೆ ಸೇರಿದರೂ ಹಂತ ಹಂತವಾಗಿ ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಾ ಹೋಗುತ್ತಾರೆ. ಕೊನೆಗೆ ಗೆಲ್ಲೋದು ಒಬ್ಬರು ಮಾತ್ರ. 100 ದಿನಗಳ ಕಾಲ ಸಾಕಷ್ಟು ಜನ ತಂತ್ರಜ್ಞರು ಕೆಲಸ ಮಾಡುತ್ತಾರೆ. ಹಾಗಾದರೆ, ಬಿಗ್​ ಬಾಸ್​ ಉತ್ತಮ ರೀತಿಯಲ್ಲಿ ಮೂಡಿ ಬರಲು ಎಷ್ಟು ಜನರು ಶ್ರಮಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಗ್​​ ಬಾಸ್​8ಗೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಕಲರ್ಸ್​ ಕನ್ನಡ ವಾಹಿನಿಯ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ 300 ಜನರು ಕೆಲಸ ಮಾಡುತ್ತಿದ್ದರು. ಆದರೆ, ಈ ವರ್ಷ ಸೋಮವಾರದಿಂದ ಶುಕ್ರವಾರದವರೆಗೆ ಮನೆಯಲ್ಲಿ ಏನೆಲ್ಲ ಆಗುತ್ತಿದೆ ಎನ್ನುವುದುನ್ನು ವೂಟ್​ನಲ್ಲಿ 24 ಗಂಟೆ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ, ಎರಡು ಪಿಸಿಆರ್​ ರೂಂಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಕಾರಣಕ್ಕೆ 100 ಜನರನ್ನು ಹೆಚ್ಚುವರಿಯಾಗಿ ಕೆಲಸ ಮಾಡಲಿದ್ದಾರೆ. ಈ ಬಾರಿ ಒಟ್ಟು 400 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. 80ಕ್ಕೂ ಅಧಿಕ ಕ್ಯಾಮೆರಾಗಳು ಇರಲಿವೆ ಎಂದರು ಪರಮೇಶ್ವರ್​.

17 ಸ್ಪರ್ಧಿಗಳು

ಈ ಬಾರಿ ಎಷ್ಟು ಸ್ಪರ್ಧಿಗಳು ಇರುತ್ತಾರೆ ಎನ್ನುವ ಪ್ರಶ್ನೆಗೆ ಪರಮೇಶ್ವರ್ ಗುಂಡ್ಕಲ್​ ಉತ್ತರಿಸಿದ್ದಾರೆ. ಈ ಬಾರಿ 17 ಸ್ಪರ್ಧಿಗಳನ್ನು ಮನೆಗೆ ಕಳುಹಿಸಬೇಕು ಎನ್ನುವ ಉದ್ದೇಶ ಇದೆ. ಇವರನ್ನು ಈಗಾಗಲೇ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಯಾರಾದರೂ ಒಬ್ಬರಿಗೆ ಪಾಸಿಟಿವ್​ ಬಂದರೂ ಅವರನ್ನು ಮನೆ ಒಳಗೆ ಕಳುಹಿಸೋಕೆ ಆಗಲ್ಲ. ಹೀಗಾಗಿ ಈಗಲೇ ಸ್ಪರ್ಧಿಗಳ ಲೆಕ್ಕ ನೀಡೋಕೆ ಆಗಲ್ಲ ಎಂದಿದ್ದಾರೆ ಅವರು. ​

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​ ಸೀಸನ್​ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ

Published On - 4:31 pm, Fri, 26 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್