ತಾರಾ ಸಮರ: ಬಿಗ್​ ಬಾಸ್ ಶುರು ಸಮಯಕ್ಕೇ​ ಡಿ ಬಾಸ್ ರಾಬರ್ಟ್​ ಸಿನಿಮಾ ಪ್ರಿ-ರೀಲಿಸ್ ಈವೆಂಟ್

ತಾರಾ ಸಮರ: ಬಿಗ್​ ಬಾಸ್ ಶುರು ಸಮಯಕ್ಕೇ​ ಡಿ ಬಾಸ್ ರಾಬರ್ಟ್​ ಸಿನಿಮಾ ಪ್ರಿ-ರೀಲಿಸ್ ಈವೆಂಟ್
ದರ್ಶನ್​-ಸುದೀಪ್​

ದರ್ಶನ್​ ಹಾಗೂ ಸುದೀಪ್​ ನಡುವಿನ ಸ್ನೇಹ ಮುರಿದು ಬಿದ್ದಿರುವ ವಿಚಾರ ಗೊತ್ತೇ ಇದೆ. ಹೀಗಿರುವಾಗ ಎರಡೂ ಕಾರ್ಯಕ್ರಮಗಳು ಒಂದೇ ಸಮಯಕ್ಕೆ ಆಯೋಜನೆಗೊಂಡಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Rajesh Duggumane

|

Feb 28, 2021 | 5:04 PM

ಭಾನುವಾರ ಬಂತೆಂದರೆ ಸಾಕು ಪ್ರೇಕ್ಷಕರನ್ನು ರಂಜಿಸೋಕೆ ಕಿರುತೆರೆಯರವರು ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಇಂದು ಪ್ರೇಕ್ಷರ ಪಾಲಿಗೆ ಹಬ್ಬದೂಟವೇ ಸರಿ. ಏಕೆಂದರೆ, ಒಂದುಕಡೆ ಕನ್ನಡ ಬಿಗ್​ ಬಾಸ್​ ಸೀಸನ್​ 8ಗೆ ಗ್ರ್ಯಾಂಡ್​ ಎಂಟ್ರಿ ಸಿಗುತ್ತಿದ್ದರೆ, ಮತ್ತೊಂದು ಕಡೆ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಪ್ರೀ ರಿಲೀಸ್​ ಕಾರ್ಯಕ್ರಮ ನಡೆಯಲಿದೆ. ಎರಡೂ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

ಸಂಜೆ ಆರು ಗಂಟೆಗೆ ಕಿಚ್ಚ ಸುದೀಪ್​ ಬಿಗ್​ ಬಾಸ್​ ಸೀಸನ್​ 8ಗೆ ಗ್ರ್ಯಾಂಡ್​ ಓಪನಿಂಗ್​ ನೀಡಲಿದ್ದಾರೆ. ರಾಬರ್ಟ್​ ಸಿನಿಮಾ ಪ್ರಿ ರೀಲೀಸ್​ ಕಾರ್ಯಕ್ರಮ ಕೂಡ ಹುಬ್ಬಳ್ಳಿಯಲ್ಲಿ ಆರು ಗಂಟೆಗೆ ಆರಂಭವಾಗಲಿದೆ. ಎರಡೂ ಕಾರ್ಯಕ್ರಮಗಳು ಸ್ಯಾಂಡಲ್​ವುಡ್​ ಪ್ರೇಕ್ಷಕರ ಪಾಲಿಗೆ ತುಂಬಾನೇ ಇಂಪಾರ್ಟೆಂಟ್​.

ದರ್ಶನ್​ ಹಾಗೂ ಸುದೀಪ್​ ನಡುವಿನ ಸ್ನೇಹ ಮುರಿದು ಬಿದ್ದಿರುವ ವಿಚಾರ ಗೊತ್ತೇ ಇದೆ. ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗೋಲ್ಲ ಎನ್ನುವದು ಗುಟ್ಟಾಗಿ ಏನು ಉಳಿದಿಲ್ಲ. ಹೀಗಿರುವಾಗ ಎರಡೂ ಕಾರ್ಯಕ್ರಮಗಳು ಒಂದೇ ಸಮಯಕ್ಕೆ ಆಯೋಜನೆಗೊಂಡಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಲರ್ಸ್​ನಲ್ಲಿ ಬಿಗ್​ ಬಾಸ್​ ಸೀಸನ್​ 8 ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿದೆ. ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ರಾತ್ರಿ 10-11 ಗಂಟೆವರೆಗೂ ನಡೆಯಲಿದೆ. 17 ಸ್ಪರ್ಧಿಗಳು ಈ ಬಾರಿ ಬಿಗ್​ ಬಾಸ್​ ಮನೆ ಪ್ರವೇಶಿಸುವ ನಿರೀಕ್ಷೆ ಇದೆ. ಮನೆ ಒಳಗೆ ಅಭ್ಯರ್ಥಿಗಳು ಹೋಗುವುದರ ಜತೆಗೆ ಮನರಂಜನೆ ಕಾರ್ಯಕ್ರಮಗಳು ಕೂಡ ಇರಲಿವೆ.

ಹುಬ್ಬಳ್ಳಿಯಲ್ಲಿ ರಾಬರ್ಟ್​ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ರಾಬರ್ಟ್​ ಪ್ರಿ ರಿಲೀಸ್​ ಕಾರ್ಯಕ್ರಮ ನಡೆಯಲಿದೆ. ಯಸ್ ಮಿಡಿಯಾ ಡಿಜಿಟಲ್ ವೇದಿಕೆ (ಯ್ಯೂಟ್ಯೂಬ್) ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೀವು ಈ ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ದರ್ಶನ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: D Boss Darshan: ಮುಂದಿನ ಚಿತ್ರಕ್ಕಾಗಿ ತೆಲುಗು ನಿರ್ಮಾಪಕ-ನಿರ್ದೇಶಕರ ಜತೆ ಕೈಜೋಡಿಸಿದ ದರ್ಶನ್

Follow us on

Related Stories

Most Read Stories

Click on your DTH Provider to Add TV9 Kannada