ರಾಬರ್ಟ್ ಸಿನಿಮಾದ ಬಿಡುಗಡೆಗೂ ಮುನ್ನ ಕಾರ್ಯಕ್ರಮದಲ್ಲಿ ಟಾಲಿವುಡ್‌ನ ದೊಡ್ಡ ನಿರ್ಮಾಪಕ ಬಿವಿಎನ್ ಪ್ರಸಾದ್ ಕೂಡ ಆಗಮಿಸಿದ್ದು, ಸಿನಿಮಾ ಬಗ್ಗೆ ಮಾತಾಡಿದ ಪ್ರಸಾದ್, ಮುಂದಿನ ಸಿನಿಮಾ ದರ್ಶನ್‌ಗೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಸುಕುಮಾರ್ ನಿರ್ದೇಶನ ಇರುವ ಚಿತ್ರಕ್ಕೆ ಪ್ರಸಾದ್ ಬಂಡವಾಳ ಹಾಕುತ್ತಿರುವುದರಿಂದ ಖಚಿತಗೊಂಡಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ, ದರ್ಶನ್ ಬೇರೆ ಭಾಷೆಯ ನಿರ್ದೇಶಕರ ಜೊತೆ ಕೆಲಸ ಮಾಡುವ ಸವಾಲು ತೆಗೆದುಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರಲಿದೆ ಎನ್ನುವುದು ಮುತ್ತಿನ ನಗರಿಯಿಂದ ಕೇಳಿ ಬಂದಿರುವ ಮಾತು.
ಇತ್ತೀಚೆಗೆ ದರ್ಶನ್ ನೀಡಿದ್ದ ಸಂದರ್ಶನದಲ್ಲಿ ವೀರಮದಕರಿ ಸಿನಿಮಾ ತೆರೆಗೆ ಬರುವುದು ತಡವಾಗಲಿದೆ ಎಂದು ಹೇಳಿದ್ದು, ಹೀಗಾಗಿ ನಡುವೆ ಸಿಗುವ ಅಂತರದಲ್ಲಿ ಬೇರೆ ಸಿನಿಮಾ ಮಾಡುತ್ತೇನೆ ಎಂದು ಹಿಂಟ್ ಕೊಟ್ಟಿದ್ದಾರೆ. ಅಕ್ಟೋಬರ್ ಅಷ್ಟರಲ್ಲಿ ಮತ್ತೆ ದೊಡ್ಡ ಪರದೆ ಮೇಲೆ ಬರುತ್ತೇನೆ ಎಂದು ಹೇಳಿದರು. ಆ ಸಿನಿಮಾ ಬೇರೆ ಯಾವುದೂ ಅಲ್ಲ, ಸುಕುಮಾರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರಲಿರುವ ಸಿನಿಮಾನೇ ಎನ್ನುವುದು ಈಗ ಪಕ್ಕಾ ಆಗಿದೆ. ಹೀಗಾಗಿ ದಚ್ಚು ಅಭಿಮಾನಿಗಳು ಈಗ ಸಿಕ್ಕಾಪಟ್ಟೆ ಪುಳಕಿತರಾಗಿದ್ದಾರೆ.
ಇದನ್ನೂ ಓದಿ: ರಾಬರ್ಟ್ ಪ್ರೀ ರಿಲೀಸ್.. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡಿ ಬಾಸ್ ದರ್ಶನ್!