ನಿಜಕ್ಕೂ ಇದೊಂದು ದೊಡ್ಡ ಸಾಧನೆ: ಪುನೀತ್ ರಾಜ್ಕುಮಾರ್ಗೆ ಅಭಿನಂದಿಸಿದ ಕಿಚ್ಚ ಸುದೀಪ್
Sudeep - Puneeth Rajkumar: ಸಾಕಷ್ಟು ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಅವರ ಜೀವನದ 45 ವರ್ಷಗಳನ್ನು ಸಿನಿಮಾಗಾಗೇ ಮುಡಿಪಿಟ್ಟಿದ್ದು ವಿಶೇಷ. ಈ ವಿಶೇಷ ದಿನವನ್ನು ಸುದೀಪ್ ನೆನೆದಿದ್ದು, ಅಭಿನಂದನೆ ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ಗೆ 45 ವರ್ಷ. ವಿಶೇಷ ಎಂದರೆ, ಅವರು ಚಿತ್ರರಂಗದಲ್ಲಿ ಕಳೆದಿದ್ದು ಕೂಡ 45 ವರ್ಷವೇ! ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಪುನೀತ್ ಶಿಶುವಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಚಿತ್ರ ಕೂಡ ಹೌದು. ಈ ಸಿನಿಮಾ ತೆರೆಕಂಡು 45 ವರ್ಷಗಳು ತುಂಬಿವೆ. ಪುನೀತ್ ಸಿನಿಮಾ ರಂಗದಲ್ಲಿ 45 ವರ್ಷ ಕಳೆದ ಬಗ್ಗೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ರಾಜ್‌ಕುಮಾರ್ ಹಾಗೂ ಆರತಿ ಒಟ್ಟಾಗಿ ನಟಿಸಿದ್ದ ಪ್ರೆಮದ ಕಾಣಿಕೆ ಸಿನಿಮಾ 1976ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಪುನೀತ್ ಶಿಶುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ಒಂದು ವರ್ಷ ತುಂಬಿದಾಗ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಪುನೀತ್ ಅಭಿನಯಿಸಿದ್ದರು. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಹೊಸ ಬೆಳಕು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಪುನೀತ್ ನಟಿಸಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಜೀವನದ 45 ವರ್ಷಗಳನ್ನು ಅವರು ಸಿನಿಮಾಗಾಗೇ ಮುಡಿಪಿಟ್ಟಿದ್ದು ವಿಶೇಷ. ಈ ವಿಶೇಷ ದಿನವನ್ನು ಸುದೀಪ್ ನೆನೆದಿದ್ದು, ಅಭಿನಂದನೆ ತಿಳಿಸಿದ್ದಾರೆ.
Congrats @PuneethRajkumar .. 45 years is almost ur entire life. HUGE ACHIEVEMENT THIS. Many more years to come and Wishing U more Power. ??
— Kichcha Sudeepa (@KicchaSudeep) February 28, 2021
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಅಭಿನಂದನೆಗಳು ಪುನೀತ್ ರಾಜ್‌ಕುಮಾರ್. 45 ವರ್ಷಗಳನ್ನು ನೀವು ಚಿತ್ರರಂಗದಲ್ಲಿ ಕಳೆದಿದ್ದೀರಾ. ಇದೊಂದು ದೊಡ್ಡ ಸಾಧನೆ. ಇನ್ನೂ ಹಲವು ವರ್ಷಗಳನ್ನು ನೀವು ಚಿತ್ರರಂಗದಲ್ಲಿ ಕಳೆಯಲಿದ್ದೀರಿ ಮತ್ತು ಹೆಚ್ಚಿನ ಪವರ್ ನಿಮಗೆ ಸಿಗಲಿ ಎಂದಿದ್ದಾರೆ.
ಇದನ್ನೂ ಓದಿ: Kiccha Sudeep: ಸುದೀಪ್ ಜತೆ ಪ್ರೇಮ್ಸ್ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!
Published On - 4:23 pm, Sun, 28 February 21