Kiccha Sudeep: ಸುದೀಪ್​ ಜತೆ ಪ್ರೇಮ್ಸ್​ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!

Kiccha Sudeep: ಟ್ವೀಟ್​ ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಪ್ರೇಮ್​-ಸುದೀಪ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆಯಲ್ಲ ಎಂದು ಸಂತಸಗೊಂಡಿದ್ದರು.

Kiccha Sudeep: ಸುದೀಪ್​ ಜತೆ ಪ್ರೇಮ್ಸ್​ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!
ಪ್ರೇಮ್​ ಹಾಗೂ ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 12, 2021 | 3:37 PM

ನಟ ಕಿಚ್ಚ ಸುದೀಪ್​ ಹಾಗೂ ನಿರ್ದೇಶಕ ಪ್ರೇಮ್​ ವಿಲನ್​ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್​ ಜತೆ ಶಿವರಾಜ್​ಕುಮಾರ್​ ಕೂಡ ಬಣ್ಣ ಹಚ್ಚಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ನಂತರ ನೆಲಕಚ್ಚಿತ್ತು. ಈ ಸಿನಿಮಾ ತೆರೆಕಂಡು ಮೂರು ವರ್ಷಗಳೇ ಕಳೆದಿವೆ. ಈಗ ಅಚ್ಚರಿ ಎಂಬಂತೆ ಈಗ ಪ್ರೇಮ್​​ ಸುದೀಪ್​ ಜತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ! ಆದರೆ, ಈ ವಿಚಾರಕ್ಕೆ ಒಂದು ಟ್ವಿಸ್ಟ್​ ಇದೆ.

ಇಂದು ಮುಂಜಾನೆ 11 ಗಂಟೆಗೆ ಪ್ರೇಮ್​​ ಟ್ವಿಟ್ಟರ್​ ಖಾತೆಯಿಂದ ಟ್ವೀಟ್​ ಒಂದನ್ನು ಮಾಡಲಾಗಿದೆ. ನನ್ನ ಮತ್ತು ಸುದೀಪ್ ಅವರ ಕಾಂಬಿನೇಷನ್ ಅಲ್ಲಿ ಬರುತ್ತಿರುವ #NewAvatarSoon ಚಿತ್ರದ ಬಗ್ಗೆ ಒಂದು ಮುಖ್ಯವಾದ ಸುದ್ದಿ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಭಾರತದಲ್ಲೇ ಮಾಡದ ಸಿನಿಮಾವನ್ನು ನಾನು ಮಾಡಲು ಹೊರಟಿದ್ದೇನೆ. ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ನಲ್ಲಿ ಹಿಸ್ಟರಿ ರಿಪೀಟ್ಸ್​ ಎನ್ನುವ ಹ್ಯಾಶ್​ಟ್ಯಾಗ್​ ಕೂಡ ಇದೆ.

ಇದನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಪ್ರೇಮ್​-ಸುದೀಪ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆಯಲ್ಲ ಎಂದು ಸಂತಸಗೊಂಡಿದ್ದರು. ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಸಿನಿಮಾ ಕತೆ ಹೇಗಿರಲಿದೆ ಎಂದು ಪ್ರಶ್ನೆ ಮಾಡಿದ್ದರು.

ನಿಜವಾದ ಟ್ವಿಟರ್​ ಖಾತೆ ಹಾಗೂ ನಕಲಿ ಖಾತೆ

ಆದರೆ, ಅಸಲಿ ವಿಚಾರ ಏನೆಂದರೆ ಪ್ರೇಮ್​​ ಹೆಸರಲ್ಲಿ ಮಾಡಿಕೊಂಡಿರುವ ನಕಲಿ ಖಾತೆ ಇದು. ನಿರ್ದೇಶಕ ಪ್ರೇಮ್​ ಅವರ ಟ್ವಿಟ್ಟರ್​ ಖಾತೆಯಲ್ಲಿರುವ ಪ್ರೊಫೈಲ್​ ಪಿಕ್ಚರ್ ಅನ್ನೇ​ ಈ ನಕಲಿ ಖಾತೆಯ ಡಿಪಿಯಲ್ಲೂ ಬಳಸಲಾಗಿದೆ. ಪ್ರೇಮ್​​​ ಖಾತೆಯ ಬಳಕೆದಾರರ ಐಡಿ @directorprems ಎಂದಿದ್ದರೆ, ನಕಲಿ ಖಾತೆಗೆ ಕೊನೆಯಲ್ಲಿ ಒಂದು S​ ಹೆಚ್ಚಾಗಿ ಸೇರಿಸಲಾಗಿದೆ. ಅಂದರೆ, ನಕಲಿ ಖಾತೆಯ ಬಳಕೆದಾರರ ಐಡಿ @directorpremss ಎಂದಿದೆ. ಪ್ರೊಫೈಲ್​ ಒಳಗೆ ಇಣುಕಿದರೆ ಮಾತ್ರ ಅದು ನಕಲಿ ಖಾತೆ ಎಂದು ಗೊತ್ತಾಗುತ್ತದೆ. ಟ್ವೀಟ್​ ಅಷ್ಟನ್ನೇ ನೋಡಿ ಮುಂದುವರಿದರೆ ನೀವು ಮೋಸ ಹೋಗುವುದು ಗ್ಯಾರಂಟಿ.

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ…

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್