AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8: ಬಿಗ್​ ಬಾಸ್​ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ…

Bigg Boss Kannada season 8: ಕೊರೊನಾ ವೈರಸ್​ ಸಂದರ್ಭದಲ್ಲಿ ಲಾಕ್​ಡೌನ್​ 1.0, ಲಾಕ್​ಡೌನ್​ 2.0 ಎಂದು ಕರೆಯುತ್ತಾ ಬರಲಾಗಿತ್ತು. ಈಗ ಬಿಗ್​ ಬಾಸ್​​ಗೂ ಲಾಕ್​ಡೌನ್​​ 8.0 ಎಂದು ಕರೆದಿರೋದು ವಿಶೇಷ.

Bigg Boss Kannada 8: ಬಿಗ್​ ಬಾಸ್​ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ...
Bigg Boss Kannada 8: ಬಿಗ್​ ಬಾಸ್​ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ...
ರಾಜೇಶ್ ದುಗ್ಗುಮನೆ
|

Updated on:Feb 12, 2021 | 1:34 PM

Share

ಕನ್ನಡ ಬಿಗ್​ ಬಾಸ್​ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ವೈರಸ್​ ಇರುವ ಕಾರಣ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ವೈರಸ್​ ಪರೀಕ್ಷೆ ಮಾಡಿಸೋದು ಕಡ್ಡಾಯವಾಗಿದೆ. ಈಗ ಬಿಗ್​ ಬಾಸ್​ ಆರಂಭಕ್ಕೂ ಮೊದಲೇ ಸಾಕಷ್ಟು ಬದಲಾವಣೆಯೊಂದಿಗೆ ಕಿಚ್ಚ ಸುದೀಪ್​ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.

ಇಂದು ಕಲರ್ಸ್​ ಕನ್ನಡ ವಾಹಿನಿಯವರು ಸಾಮಾಜಿಕ ಜಾಲತಾಣ ಫೆಸ್​ಬುಕ್​​ನಲ್ಲಿ ಹೊಸ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಸುದೀಪ್​​ ತುಂಬಾನೇ ಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬಟ್ಟೆ ತೊಟ್ಟಿರುವ ಅವರು, ತಲೆಗೆ ಪೇಟ ಸುತ್ತಿದ್ದಾರೆ. ಹಣೆಯಲ್ಲಿ ದೊಡ್ಡ ತಿಲಕವಿಟ್ಟಿದ್ದಾರೆ. ಕೊರಳಲ್ಲಿ ದೊಡ್ಡ ದೊಡ್ಡ  ಸರಗಳನ್ನು ಧರಿಸಿದ್ದಾರೆ. ಭುಜಕ್ಕೆ ಶಾಲು ಕೂಡ ಇದೆ. ಒಟ್ಟಿನಲ್ಲಿ ಪಕ್ಕಾ ಜೋಯಿಸರ ಲುಕ್​ನಲ್ಲಿ ಸುದೀಪ್​ ಕಾಣಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ವಿಚಾರ ಎಂದರೆ ಬಿಗ್​ ಬಾಸ್​ ಕಣ್ಣು ಕೂಡ ಕೆಂಪಾಗಿದೆ.

ಕೊರೊನಾ ವೈರಸ್​ ಸಂದರ್ಭದಲ್ಲಿ ಲಾಕ್​ಡೌನ್​ 1.0, ಲಾಕ್​ಡೌನ್​ 2.0 ಎಂದು ಕರೆಯುತ್ತಾ ಬರಲಾಗಿತ್ತು. ಈಗ ಬಿಗ್​ ಬಾಸ್​​ಗೂ ಲಾಕ್​ಡೌನ್​​ 8.0 ಎಂದು ಕರೆದಿರೋದು ವಿಶೇಷ. ಲಾಕ್​​ಡೌನ್​ ಎಂದರೆ ಮನೆಯಿಂದ ಯಾರೂ ಹೊರ ಬರುವಂತಿರಲಿಲ್ಲ. ಬಿಗ್​ ಬಾಸ್​ ಮನೆ ಕೂಡ ಅದೇ ರೀತಿ ಆಗಿರುವುದರಿಂದ ಹೀಗೆ ಕರೆದಿರಬಹುದು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಈ ಬಗ್ಗೆ ಬರೆದಿರುವ ಪೋಸ್ಟ್​ನಲ್ಲಿ, ಲಾಕ್​ಡೌನ್​ 8.O ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್​ ಮಾಡಿ, ಕಮೆಂಟ್​ನಲ್ಲಿ ಹೇಳಿ ಎಂದು ಬರೆದಿದ್ದಾರೆ. ಆದರೆ, ಎಲ್ಲಿಯೂ ಬಿಗ್​ ಬಾಸ್​ ಆರಂಭದ ದಿನ ಬರೆದುಕೊಂಡಿಲ್ಲ.

ಈ ಮಧ್ಯೆ, ಬಿಗ್​ ಬಾಸ್​ ಮನೆ ಒಳಗೆ ಯಾರೆಲ್ಲ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿಬಾರಿಯೂ ಬಿಗ್​ ಬಾಸ್​ ಆರಂಭದ ದಿನವೇ ಮನೆ ಒಳಗೆ ಹೋಗುವ ಅಭ್ಯರ್ಥಿಯ ಹೆಸರು ಅಧಿಕೃತವಾಗುತ್ತದೆ. ಆದಾಗ್ಯೂ, ಕೆಲವರು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಹರಿದಾಡುತ್ತವೆ.ಈ ಬಾರಿ, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಜಕ್ಕರ್​, ಗಾಯಕ ಹನುಮಂತ, ನಯನಾ, ಟಿವಿ ಆ್ಯಂಕರ್​ ಅಮರ್​ ಪ್ರಸಾದ್​, ಕಿರುತೆರೆ ನಟಿ ವೈಷ್ಣವಿ ಗೌಡ, ನಟ ಸುನಿಲ್​, ವಿನಯ್​ ಗುರೂಜಿ, ರವಿಶಂಕರ್​ ಗೌಡ ಬಿಗ್​ ಬಾಸ್​ ಮನೆ ಸೇರಲಿರುವ ಅಭ್ಯರ್ಥಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಕನ್ನಡ-8 ಆರಂಭಕ್ಕೆ ಮುಹೂರ್ತ ಫಿಕ್ಸ್, ಫೆಬ್ರವರಿ 28ಕ್ಕೆ ಗ್ರ್ಯಾಂಡ್​ ಎಂಟ್ರಿ?

ಸಾಮಾನ್ಯವಾಗಿ ಅಕ್ಟೋಬರ್​ ತಿಂಗಳಲ್ಲಿ ಬಿಗ್​ ಬಾಸ್​ ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಬಿಗ್​ ಬಾಸ್​ ಆರಂಭ ತಡವಾಗಿದೆ. ಕೊರೊನಾ ಮಧ್ಯೆ ಬಿಗ್​ ಬಾಸ್​ ನಡೆಯೋದೆ ಅನುಮಾನ ಎಂದೂ ಹೇಳಲಾಗಿತ್ತು. ಆದರೆ, ಕೊನೆಗೂ ಬಿಗ್​ ಬಾಸ್ ಪ್ರಸಾರಗೊಳ್ಳುತ್ತಿದೆ. ಈ ಬಾರಿ ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಎನ್ನಲಾಗುತ್ತಿದೆ. ಕೊರೊನಾ ನೆಗೆಟಿವ್​ ಬಂದ ನಂತರವೇ ಅಭ್ಯರ್ಥಿಗಳನ್ನು ಮನೆ ಒಳಗೆ ಬಿಡುವ ಸಾಧ್ಯತೆ ಇದೆ.

Published On - 1:20 pm, Fri, 12 February 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More