Bigg Boss Kannada: ಬಿಗ್​ ಬಾಸ್​ ಕನ್ನಡ-8 ಆರಂಭಕ್ಕೆ ಮುಹೂರ್ತ ಫಿಕ್ಸ್, ಫೆಬ್ರವರಿ 28ಕ್ಕೆ ಗ್ರ್ಯಾಂಡ್​ ಎಂಟ್ರಿ?

Bigg Boss Kannada Season 8: ಬಿಗ್​ಬಾಸ್​ ಕನ್ನಡ 8ನೇ ಆವೃತ್ತಿ ಆರಂಭ ದಿನಾಂಕವನ್ನು ಎಲ್ಲಿಯೂ ಘೋಷಣೆ ಮಾಡಿಲ್ಲ. ಪ್ರೋಮೋ ರಿಲೀಸ್​ ಮಾಡಿದ ​ಮೇಲೂ ಬಿಗ್​ ಬಾಸ್​ ಆರಂಭಕ್ಕೆ ಏಕಿಷ್ಟು ತಡ ಎನ್ನುವುದು ಸದ್ಯ ಅಭಿಮಾನಿಗಳ ಪ್ರಶ್ನೆ.

Bigg Boss Kannada: ಬಿಗ್​ ಬಾಸ್​ ಕನ್ನಡ-8 ಆರಂಭಕ್ಕೆ ಮುಹೂರ್ತ ಫಿಕ್ಸ್, ಫೆಬ್ರವರಿ 28ಕ್ಕೆ ಗ್ರ್ಯಾಂಡ್​ ಎಂಟ್ರಿ?
ಕನ್ನಡ ಬಿಗ್ ಬಾಸ್ 8 ಆರಂಭಕ್ಕೆ ಕ್ಷಣಗಣನೆ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Feb 09, 2021 | 10:29 AM

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಪ್ರೋಮೋ ರಿಲೀಸ್​ ಆಗಿ ತಿಂಗಳಾಗುತ್ತಾ ಬಂದಿದೆ. ಬಿಗ್​ ಬಾಸ್​ ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂದು ಕಲರ್ಸ್​​ ಕನ್ನಡ ವಾಹಿನಿಯವರು ಈ ಮೊದಲೇ ತಿಳಿಸಿದ್ದರು. ಫೆಬ್ರವರಿಯ ಮೊದಲ ವಾರ ಕಳೆದರೂ ಈವರೆಗೆ ಈ ರಿಯಾಲಿಟಿ ಶೋ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಬಗ್ಗೆ ಯಾವುದೇ ಅಪ್ಡೇಟ್​ ಇಲ್ಲ. ಮೂಲಗಳ ಪ್ರಕಾರ ಬಿಗ್​ ಬಾಸ್​ ಫೆಬ್ರವರಿ 28ರಿಂದ ಆರಂಭಗೊಳ್ಳಲಿದೆಯಂತೆ. ನಂತರ 100 ದಿನಗಳ ಕಾಲ ಜನರಿಗೆ ಮನರಂಜನೆ ನೀಡಲಿದೆ. ಬಿಗ್​ ಬಾಸ್​ ಆರಂಭಕ್ಕೂ ಮೊದಲು ದೊಡ್ಡ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅಂದು ಎಲ್ಲ ಸ್ಪರ್ಧಿಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಬರಮಾಡಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮ ಪ್ರತಿಬಾರಿ ಭಾನುವಾರವೇ ನಡೆಯುತ್ತದೆ. ಈಗ ಫೆಬ್ರವರಿ 28 ಭಾನುವಾರವೇ ಬಂದಿದ್ದು, ಹೀಗಾಗಿ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೊಮ್ಮೆ ಈ ತಿಂಗಳು 28ರಿಂದ ಬಿಗ್​ ಬಾಸ್​ ಆರಂಭವಾದರೆ, ಜೂನ್​ ತಿಂಗಳಲ್ಲಿ ಬಿಗ್​ ಬಾಸ್​ ಫಿನಾಲೆ ನಡೆಯುತ್ತದೆ.

ಬಿಗ್​ ಬಾಸ್​ 8 ಫೆಬ್ರವರಿಯಿಂದ ಆರಂಭವಾಗಲಿದೆ ಎಂದು ವಾಹಿನಿ ಈ ಮೊದಲು ಘೋಷಣೆ ಮಾಡಿತ್ತು. ಆದರೆ, ದಿನಾಂಕವನ್ನು ಎಲ್ಲಿಯೂ ಘೋಷಣೆ ಮಾಡಿರಲಿಲ್ಲ. ಪ್ರೋಮೋ ರಿಲೀಸ್​ ಮಾಡಿದ ​ಮೇಲೂ ಬಿಗ್​ ಬಾಸ್​ ಆರಂಭಕ್ಕೆ ಏಕಿಷ್ಟು ತಡ ಎನ್ನುವುದು ಸದ್ಯ ಅಭಿಮಾನಿಗಳ ಪ್ರಶ್ನೆ.

ಈ ಮಧ್ಯೆ, ಬಿಗ್​ ಬಾಸ್​ ಮನೆ ಒಳಗೆ ಯಾರೆಲ್ಲ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿಬಾರಿಯೂ ಬಿಗ್​ ಬಾಸ್​ ಆರಂಭದ ದಿನವೇ ಮನೆ ಒಳಗೆ ಹೋಗುವ ಅಭ್ಯರ್ಥಿಯ ಹೆಸರು ಅಧಿಕೃತವಾಗುತ್ತದೆ. ಆದಾಗ್ಯೂ, ಕೆಲವರು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಹರಿದಾಡುತ್ತವೆ.ಈ ಬಾರಿ, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಜಕ್ಕರ್​, ಗಾಯಕ ಹನುಮಂತ, ನಯನಾ, ನಟಿ ವಿನಯಾ ಪ್ರಸಾದ್, ಟಿವಿ ಆ್ಯಂಕರ್​ ಅಮರ್​ ಪ್ರಸಾದ್​, ಕಿರುತೆರೆ ನಟಿ ವೈಷ್ಣವಿ ಗೌಡ, ನಟ ಸುನಿಲ್​, ವಿನಯ್​ ಗುರೂಜಿ, ರವಿಶಂಕರ್​ ಗೌಡ ಬಿಗ್​ ಬಾಸ್​ ಮನೆ ಸೇರಲಿರುವ ಅಭ್ಯರ್ಥಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada 8 ಪ್ರವೇಶಿಸುವ ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ

ಸಾಮಾನ್ಯವಾಗಿ ಅಕ್ಟೋಬರ್​ ತಿಂಗಳಲ್ಲಿ ಬಿಗ್​ ಬಾಸ್​ ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಬಿಗ್​ ಬಾಸ್​ ಆರಂಭ ತಡವಾಗಿದೆ. ಕೊರೊನಾ ಮಧ್ಯೆ ಬಿಗ್​ ಬಾಸ್​ ನಡೆಯೋದೆ ಅನುಮಾನ ಎಂದೂ ಹೇಳಲಾಗಿತ್ತು. ಆದರೆ, ಕೊನೆಗೂ ಬಿಗ್​ ಬಾಸ್ ಪ್ರಸಾರಗೊಳ್ಳುತ್ತಿದೆ. ಈ ಬಾರಿ ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಎನ್ನಲಾಗುತ್ತಿದೆ. ಕೊರೊನಾ ನೆಗೆಟಿವ್​ ಬಂದ ನಂತರವೇ ಅಭ್ಯರ್ಥಿಗಳನ್ನು ಮನೆ ಒಳಗೆ ಬಿಡುವ ಸಾಧ್ಯತೆ ಇದೆ.

Published On - 9:32 pm, Mon, 8 February 21