Roberrt Pre Release Event | ‘ಉತ್ತರ ಕರ್ನಾಟಕಕ್ಕೆ ಬಂದ್ರೆ ನಾವು ಚಪ್ಪಲಿ ಬಿಟ್ಟು ಮಾತಾಡಬೇಕು; ನೀವು ಹಾಕಿದ ಅನ್ನದಿಂದಲೇ ಈ ದೇಹ ಇರೋದು’

ಉತ್ತರ ಕರ್ನಾಟಕಕ್ಕೆ ಬಂದ್ರೆ ನಾವು ಚಪ್ಪಲಿ ಬಿಟ್ಟು ಮಾತಾಡಬೇಕು. ಇಲ್ಲಿಯ ಜನತೆ ನಮ್ಮನ್ನ ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ ಎಂದು ರಾಬರ್ಟ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ನಟ ದರ್ಶನ್ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು.

  • TV9 Web Team
  • Published On - 23:46 PM, 28 Feb 2021
Roberrt Pre Release Event | ‘ಉತ್ತರ ಕರ್ನಾಟಕಕ್ಕೆ ಬಂದ್ರೆ ನಾವು ಚಪ್ಪಲಿ ಬಿಟ್ಟು ಮಾತಾಡಬೇಕು; ನೀವು ಹಾಕಿದ ಅನ್ನದಿಂದಲೇ ಈ ದೇಹ ಇರೋದು’
ದರ್ಶನ್

ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಬಂದ್ರೆ ನಾವು ಚಪ್ಪಲಿ ಬಿಟ್ಟು ಮಾತಾಡಬೇಕು. ಇಲ್ಲಿಯ ಜನತೆ ನಮ್ಮನ್ನ ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ ಎಂದು ರಾಬರ್ಟ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ನಟ ದರ್ಶನ್ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ನಮ್ಮ ತಂದೆಯವರಿಗೆ ಕೆಲಸ ಇಲ್ಲದಿದ್ದಾಗ ಅವರಿಗೆ ಉದ್ಯೋಗ ಕೊಟ್ಟಿದ್ದು ಉತ್ತರ ಕರ್ನಾಟಕದ ಮಂದಿ. ನಮ್ಮ ಮೈಸೂರು ಮನೆ ಇದೇ ಜನರು ಕೊಟ್ಟ ಕಾಣಿಕೆ ಎಂದು ಉತ್ತರ ಕರ್ನಾಟಕದ ಮಂದಿಯನ್ನ ನೆನೆದು ದರ್ಶನ್​ ಭಾವುಕರಾದರು.

ತದ ನಂತರ, ಉತ್ತರ ಕರ್ನಾಟಕದ ಶೈಲಿಯಲ್ಲಿ ಡೈಲಾಗ್ ಹೊಡೆದ ಯಜಮಾನ ನಮಗೆ ಯಾವುದೇ ಜಾತಿ,ಮತ,ಭೇದ ಇಲ್ಲ. ಎಲ್ಲರೂ ಹಾಕಿದ ಅನ್ನದಿಂದಲೇ ಈ ದೇಹ ಇರೋದು. ನನಗೆ ಅಭಿಮಾನಿಗಳೇ ಸೆಲೆಬ್ರಿಟಿಗಳು. ನಾನ್ ಬಾಸ್ ಅಲ್ಲ.. ನೀವೇ ನನ್ನ ಬಾಸ್ ಎಂದು ಹೇಳಿದರು.

ಇದರ ಜೊತೆಗೆ, ದಯವಿಟ್ಟು ನಾನು ಕಾರು ಚಲಾಯಿಸುವಾಗ ಯಾರೂ ನನ್ನ ಗಾಡಿಯ ಪಕ್ಕದಲ್ಲಿ ಬರಬೇಡಿ. ಒಂದು ವೇಳೆ, ಅಪಘಾತ ಆದ್ರೆ ನಿಮ್ಮ ಜೀವಕ್ಕೇ ಹಾನಿ ಎಂದು ತಮ್ಮ ಅಭಿಮಾನಿಗಳಿಗೆ D ಬಾಸ್ ಮನವಿ ಮಾಡಿದರು.

ಇದನ್ನೂ ಓದಿ: Roberrt Pre Release Event | ಗಂಡು ಮೆಟ್ಟಿದ ನಾಡಲ್ಲಿ ‘ರಾಬರ್ಟ್​’ ಆರ್ಭಟ: ‘ಯಜಮಾನ’ನ ಕಂಡು ಮಂದಿ ಫುಲ್​ ಫಿದಾ!