ಬ್ಯಾಟರಿ ತಯಾರಿಕೆಗೆ ಧುಮುಕಲಿದೆ ರಿಲಯನ್ಸ್; ಅಂಬಾನಿ ಸಿದ್ಧಪಡಿಸಿದ್ದಾರೆ ಹೊಸ ತಂತ್ರ?

ಬಹುತೇಕ ಕಾರು ಹಾಗೂ ಬೈಕ್​ ಕಂಪೆನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಸಿದ್ಧಪಡಿಸುತ್ತಿವೆ. ಜನರು ಕೂಡ ಎಲೆಕ್ಟ್ರಿನ್​ ವಾಹನ ಖರೀದಿಗೆ ಒತ್ತು ನೀಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್​ ಈ ಲೆಕ್ಕಾಚಾರ ಹಾಕಿಕೊಂಡಿದೆ.

ಬ್ಯಾಟರಿ ತಯಾರಿಕೆಗೆ ಧುಮುಕಲಿದೆ ರಿಲಯನ್ಸ್; ಅಂಬಾನಿ ಸಿದ್ಧಪಡಿಸಿದ್ದಾರೆ ಹೊಸ ತಂತ್ರ?
ಮುಕೇಶ್ ಅಂಬಾನಿ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 25, 2021 | 7:28 PM

ಇತ್ತೀಚೆಗೆ ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವಷ್ಟು. ಪೆಟ್ರೋಲ್​ ದರ ಏರಿಕೆ ಒಂದು ಕಡೆಯಾದರೆ, ತಂತ್ರಜ್ಞಾನ ಅಭಿವೃದ್ಧಿ ಆಗಿದ್ದು ಮತ್ತೊಂದು ಕಡೆ. ಮೊದಲೆಲ್ಲ ಎಲೆಕ್ಟ್ರಿಕ್​ ವಾಹನಗಳನ್ನು ಚಾರ್ಜ್​ ಮಾಡಲು ತುಂಬಾನೇ ಸಮಯ ಹಿಡಿಯುತ್ತಿತ್ತು. ಆದರೆ, ಈಗ ಈ ಸಮಸ್ಯೆ ಇಲ್ಲ. ಚಾರ್ಜಿಂಗ್​ ಸ್ಟೇಷನ್​ಗಳು ಕೂಡ ಭಾರತದಲ್ಲಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಎಲಾನ್​ ಮಸ್ಕ್​​ ಟೆಸ್ಲಾ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರಿ ಕೂಡ ಬ್ಯಾಟರಿ ತಯಾರಿಕೆಗೆ ಮುಂದಾಗುವ ಸೂಚನೆ ನೀಡಿದೆ.

ಹಸಿರು ಇಂಧನಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆ ರಿಲಯನ್ಸ್​ ಸಂಸ್ಥೆ ಸೂಚನೆ ನೀಡಿತ್ತು. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ರಿಲಯನ್ಸ್​ ಸಂಸ್ಥೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹಸಿರು ಇಂಧನಕ್ಕೆ ಒತ್ತು ನೀಡಲಿದೆ ಎಂದು ಹೇಳಿತ್ತು. ಈ ನಿಟ್ಟಿನಲ್ಲಿ ರಿಲಯನ್ಸ್​ ಸಂಸ್ಥೆ ದೊಡ್ಡ ಯೋಜನೆಯನ್ನೇ ರೂಪಿಸುತ್ತಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವುದರ ಮೂಲಕ ಟೆಸ್ಲಾ ಕಂಪೆನಿಯ ಆದಾಯ ಹೆಚ್ಚುತ್ತಿದೆ. ಇದರ ಜತೆ ಟೆಸ್ಲಾ ಮಾಲೀಕ ಎಲಾನ್​ ಮಸ್ಕ್​, ಬ್ಯಾಟರಿ ಹಾಗೂ ಮತ್ತು ಸೌರ ಶಕ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ, ಅಂಬಾನಿ ಕೂಡ ಇದೇ ಮಾದರಿಯ ವ್ಯವಾಹರದಲ್ಲಿ ತೊಡಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಬ್ಯಾಟರಿ ತಯಾರಿಕೆಗೆ ಮುಂದಿನ 10 ವರ್ಷಗಳಲ್ಲಿ ರಿಲಯನ್ಸ್​ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಒಟ್ಟೂ ಆದಾಯದಲ್ಲಿ, ಕಚ್ಚಾ ತೈಲದಿಂದ ರಿಲಯನ್ಸ್​ಗೆ​ ಶೇ.60 ಆದಾಯ ಬರುತ್ತಿದೆ. ಆದರೆ, ಇದನ್ನು ಕಡಿಮೆ ಮಾಡಿ, ಹಸಿರು ಇಂಧನಕ್ಕೆ ಒತ್ತು ನೀಡುವುದು ರಿಲಯನ್ಸ್​ ಉದ್ದೇಶ.

ಬಹುತೇಕ ಕಾರು ಹಾಗೂ ಬೈಕ್​ ಕಂಪೆನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಸಿದ್ಧಪಡಿಸುತ್ತಿವೆ. ಜನರು ಕೂಡ ಎಲೆಕ್ಟ್ರಿನ್​ ವಾಹನ ಖರೀದಿಗೆ ಒತ್ತು ನೀಡುತ್ತಿದ್ದಾರೆ. ಹೀಗಾಗಿ, ಮುಂದಿನ 10 ವರ್ಷಗಳಲ್ಲಿ ಪಟ್ರೋಲ್​-ಡೀಸೆಲ್​ ವಾಹನಗಳು ಕಡಿಮೆ ಆಗಿ ಎಲೆಕ್ಟ್ರಿಕ್​ ವಾಹನಗಳು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: Netflix CEO lauds Reliance Jio: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್