ಬೆಂಗಳೂರು, ಆಗಸ್ಟ್ 23: ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ನೌಕೆ ಇಳಿಸಿದ ಮೊದಲ ದೇಶ ಭಾರತವಾಗಿದೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ ತಯಾರಾದ ಮೂರನೇ ಚಂದ್ರಯಾನ (Chandrayaan-3) ಯೋಜನೆಯಲ್ಲಿ ಲ್ಯಾಂಡರ್ ಚಂದ್ರನ ನೆಲದವನ್ನು ಮೃದುವಾಗಿ ಸ್ಪರ್ಶಿಸಿದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ಸಭೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ಆನ್ಲೈನ್ನಲ್ಲಿ ಈ ಅಪೂರ್ವ ಕ್ಷಣಗಳನ್ನು ವೀಕ್ಷಿಸಿದರು. ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಪ್ರಧಾನಿ ಮಾತನಾಡಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಚಂದ್ರಯಾನ-3 ನೆಲ ಸ್ಪರ್ಶಿಸುವ ಕ್ಷಣದಲ್ಲಿ ಯೂಟ್ಯೂಬ್ನಲ್ಲಿ ಹೊಸ ದಾಖಲೆಯೇ ನಿರ್ಮಾಣವಾಗಿ ಹೋಗಿತ್ತು. 82 ಲಕ್ಷಕ್ಕೂ ಹೆಚ್ಚು ಮಂದಿ ಯೂಟ್ಯೂಬ್ನಲ್ಲಿ ಆ ಕ್ಷಣಗಳನ್ನು ನೇರವಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು. ಇದು ಯೂಟ್ಯೂಬ್ ಮಟ್ಟಿಗೆ ಹೊಸ ದಾಖಲೆಯೇ ಆಗಿದೆ.
2022ರ ಫೀಫಾ ವರ್ಲ್ಡ್ ಕಪ್ ಕ್ವಾರ್ಟರ್ಫೈನಲ್ ಪಂದ್ಯ ಯೂಟ್ಯೂಬ್ನಲ್ಲಿ 61 ಲಕ್ಷ ನೇರ ವೀಕ್ಷಕರನ್ನು ಕಂಡಿತ್ತು. ಇದು ಯೂಟ್ಯೂಬ್ನಲ್ಲಿ ಅತಿಹೆಚ್ಚು ನೇರ ವೀಕ್ಷಣೆ ಪಡೆದ ಕಾರ್ಯಕ್ರಮ ಎಂಬ ದಾಖಲೆ ಬರೆದಿತ್ತು. ಪ್ರೀಕ್ವಾರ್ಟರ್ಫೈನಲ್ ಪಂದ್ಯವೊಂದು 52 ಲಕ್ಷ ನೇರ ವೀಕ್ಷಣೆ ಹೊಂದಿತ್ತು.
ಇದನ್ನೂ ಓದಿ: ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು
ಈಗ ಯೂಟ್ಯೂಬ್ನಲ್ಲಿ ಇಸ್ರೋದ ಚಾನಲ್ನಲ್ಲಿ ಚಂದ್ರಯಾನ ಕಾರ್ಯಕ್ರಮದ ನೇರ ಪ್ರಸಾರ ಇತ್ತು. ಲ್ಯಾಂಡಿಂಗ್ ಕ್ಷಣ ಸಮೀಪಿಸುವಾಗ ಲೈವ್ ವೀಕ್ಷಕರ ಸಂಖ್ಯೆ 82 ಲಕ್ಷ ದಾಟಿ ಹೋಗಿತ್ತು. ಇದರೊಂದಿಗೆ ಯೂಟ್ಯೂಬ್ ಲೈವ್ ವೀಕ್ಷಣೆಯಲ್ಲಿ ಚಂದ್ರಯಾನ ಪ್ರಸಾರ ಹೊಸ ದಾಖಲೆ ಸ್ಥಾಪಿಸಿದೆ.
ಇದನ್ನೂ ಓದಿ: Chandrayaan 3 Success: ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್: ಭಾರತದ ಬಾಹ್ಯಾಕಾಶ ಉದ್ಯಮದ ಪ್ರಗತಿಯ ಸಂಕೇತ
ಕಳೆದ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳು ಜಿಯೋಸಿನಿಮಾ ಆ್ಯಪ್ನಲ್ಲಿ ನೇರ ಪ್ರಸಾರವಾಗಿದ್ದವು. ಒಂದು ಪಂದ್ಯದಲ್ಲಿ 3.4 ಕೋಟಿ ಜನರು ಲೈವ್ ವೀಕ್ಷಿಸಿದ್ದರು. ಅದು ಸಾರ್ವಕಾಲಿಕ ದಾಖಲೆಯಾಗಿದೆ. ಅಂದರೆ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಅತಿಹೆಚ್ಚು ಲೈವ್ ವೀಕ್ಷಣೆ ಪಡೆದ ದಾಖಲೆ ಜಿಯೋಸಿನಿಮಾದ್ದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ