LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ.ನಷ್ಟು ಕಡಿತ ಮಾಡಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.14 ಕೆಜಿ LPG ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1723.50 ರೂ.ಗಳ ಬದಲಿಗೆ 1665 ರೂ.ಗಳಿಗೆ ಲಭ್ಯವಿರುತ್ತದೆ. ಅಂದರೆ, ಇಲ್ಲಿ 58.50 ರೂ.ಗಳ ಇಳಿಕೆ ಕಂಡುಬಂದಿದೆ. ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1769 ರೂ.ಗಳಿಗೆ ಲಭ್ಯವಿರುತ್ತದೆ.

LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ
ವಾಣಿಜ್ಯ ಸಿಲಿಂಡರ್
Image Credit source: Kashmir observer

Updated on: Jul 01, 2025 | 8:10 AM

ನವದೆಹಲಿ, ಜುಲೈ 01: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ(Commercial Cylinder Price)ಯಲ್ಲಿ 60 ರೂ.ನಷ್ಟು ಕಡಿತ ಮಾಡಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.14 ಕೆಜಿ LPG ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1723.50 ರೂ.ಗಳ ಬದಲಿಗೆ 1665 ರೂ.ಗಳಿಗೆ ಲಭ್ಯವಿರುತ್ತದೆ. ಅಂದರೆ, ಇಲ್ಲಿ 58.50 ರೂ.ಗಳ ಇಳಿಕೆ ಕಂಡುಬಂದಿದೆ. ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ 1769 ರೂ.ಗಳಿಗೆ ಲಭ್ಯವಿರುತ್ತದೆ.

ಮೊದಲು ಇದು 1826 ರೂ.ಗಳಿಗೆ ಲಭ್ಯವಿತ್ತು, ಈಗ ಅದು 57 ರೂ.ಗಳಷ್ಟು ಅಗ್ಗವಾಗಿದೆ. ಈಗ ಮುಂಬೈನಲ್ಲಿ ಈ ಸಿಲಿಂಡರ್ ದರ 1616 ರೂ. ಆಗಿದೆ. ಜೂನ್ ನಲ್ಲಿ ಇದು 1674.50 ರೂ. ಇತ್ತು. ಇದಕ್ಕೂ ಮೊದಲು, ಅಂದರೆ ಮೇ ತಿಂಗಳಲ್ಲಿ ಇದು 1699 ರೂ.ಗೆ ಲಭ್ಯವಿತ್ತು. ಇಲ್ಲಿ, ಪ್ರತಿ ಸಿಲಿಂಡರ್ ಗೆ 58.50 ರೂ. ಕಡಿತ ಮಾಡಲಾಗಿದೆ. ಚೆನ್ನೈ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1823.50 ರೂ. ಆಗಿದೆ. ಜೂನ್ ನಲ್ಲಿ ಇದು 1881 ರೂ.ಗೆ ಲಭ್ಯವಿತ್ತು. ಜೂನ್ 2025, ಮೇ 2025, ಏಪ್ರಿಲ್ 2025 ರಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳನ್ನು ಸಹ ಕಡಿಮೆ ಮಾಡಲಾಗಿತ್ತು.

ಜೂನ್ ತಿಂಗಳಲ್ಲಿ 24 ರೂ. ಇಳಿಕೆ ಕಂಡುಬಂದಿದೆ. ಮೇ ತಿಂಗಳಲ್ಲಿ 14.50 ರೂ. ಮತ್ತು ಏಪ್ರಿಲ್ ತಿಂಗಳಲ್ಲಿ 41 ರೂ. ಇಳಿಕೆ ಕಂಡುಬಂದಿದೆ. ಫೆಬ್ರವರಿಯಲ್ಲಿ 7 ರೂ. ಇಳಿಕೆ ಕಂಡುಬಂದಿದೆ, ಆದರೆ ಮಾರ್ಚ್‌ನಲ್ಲಿ 6 ರೂ. ಹೆಚ್ಚಳವಾಗಿದೆ. ಈಗ ಜುಲೈ ತಿಂಗಳಿನಲ್ಲಿಯೂ ದರಗಳನ್ನು ಕಡಿಮೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 1723.50 ರೂ.ಗೆ ಲಭ್ಯವಿತ್ತು. ಏಪ್ರಿಲ್‌ನಲ್ಲಿ ಇದರ ದರ 1762 ರೂ. ಇತ್ತು. ಮೇ ತಿಂಗಳಲ್ಲಿ ದರ 1747.50 ರೂ. ಇತ್ತು.

14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಇಂದಿನ ದರ
ದೆಹಲಿ 853 ರೂ., ಗುರುಗ್ರಾಮ 861.5 ರೂ., ಅಹಮದಾಬಾದ್ 860 ರೂ., ಪಾಟ್ನಾ 942.5 ರೂ., ಆಗ್ರಾ 865.5 ರೂ., ಬೆಂಗಳೂರು 855.5 ರೂ., ಹೈದರಾಬಾದ್ 905 ರೂ., ಪುಣೆಯಲ್ಲಿ856 ರೂ., ಮುಂಬೈ 852.50 ರೂ., ಲಕ್ನೋ 890.5 ರೂ., ವಾರಾಣಸಿಯಲ್ಲಿ 916.5 ರೂ., ಭೋಪಾಲ್ 858.5 ರೂ., ಇಂದೋರ್ 881 ರೂ., ಗಾಜಿಯಾಬಾದ್ 850.5 ರೂ. ಇದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us