
ಅನೇಕ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ಕೇವಲ ಸಾಲದ ಸಾಧನವಾಗಿ ನೋಡುತ್ತಾರೆ, ಆದರೆ ಸರಿಯಾದ ಹಣಕಾಸಿನ ಶಿಸ್ತಿನೊಂದಿಗೆ ಬಳಸಿದರೆ ಇದು ಉಚಿತವಾಗಿ ಹಣ ಅಥವಾ ಉಳಿತಾಯವನ್ನು ತಂದುಕೊಡುವ ಅತ್ಯುತ್ತಮ ಮಾರ್ಗವಾಗಿದೆ. ಆದರೆ, ಹೆಚ್ಚಿನ ರಿವಾರ್ಡ್ಸ್ ಪಡೆಯುವ ಆಸೆಗೆ ಬಿದ್ದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು (Overspending) ದೊಡ್ಡ ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಸ್ಮಾರ್ಟ್ ಆಗಿ ಕ್ರೆಡಿಟ್ ಬಳಸುವ ಕಲೆ ತಿಳಿದಿರಿ.
ಇದನ್ನೂ ಓದಿ: ಅಲ್ಪ ಹೂಡಿಕೆ; ಮೆಚ್ಯೂರಿಟಿಗೆ 35 ಲಕ್ಷ ರೂವರೆಗೆ ಗಳಿಕೆ; ಇದು ಪೋಸ್ಟ್ ಆಫೀಸ್ ಆರ್ಪಿಎಲ್ಐ ಯೋಜನೆಯ ಕೊಡುಗೆ
ಖರ್ಚು ಹೆಚ್ಚಾಗದಂತೆ ರಿವಾರ್ಡ್ಸ್ ಗರಿಷ್ಠಗೊಳಿಸಲು ಸ್ಮಾರ್ಟ್ ಸೂತ್ರಗಳು ಇಲ್ಲಿ ಕೆಳಕಂಡಂತಿವೆ:
ನಿಮ್ಮ ಕಾರ್ಡ್‌ಗಳನ್ನು ತಂತ್ರಾತ್ಮಕವಾಗಿ (Use Cards Strategically) ಬಳಸಿ. ನಿಮ್ಮ ದೈನಂದಿನ ಮತ್ತು ಅನಿವಾರ್ಯ ಖರ್ಚುಗಳಿಗಾಗಿ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಉದಾಹರಣೆಗೆ, ದಿನಸಿ (Groceries) ಖರೀದಿಗೆ ಕ್ಯಾಶ್‌ಬ್ಯಾಕ್ ನೀಡುವ ಕಾರ್ಡ್, ಇಂಧನ (Fuel) ತುಂಬಿಸಲು ಫ್ಯುಯೆಲ್ ಕಾರ್ಡ್ ಮತ್ತು ಆನ್‌ಲೈನ್ ಬಿಲ್ ಪಾವತಿಗೆ ಹೆಚ್ಚಿನ ಪಾಯಿಂಟ್ ನೀಡುವ ಕಾರ್ಡ್‌ಗಳನ್ನು ಪ್ರತ್ಯೇಕವಾಗಿ ಬಳಸಿ.
ರಿವಾರ್ಡ್ ಪಾಯಿಂಟ್‌ಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಉದಾಹರಣೆಗೆ, ಹೆಚ್‌ಡಿಎಫ್‌ಸಿ ಅಥವಾ ಎಸ್‌ಬಿಐ ಕಾರ್ಡ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ನೇರವಾಗಿ ಕ್ಯಾಶ್‌ಬ್ಯಾಕ್ ಆಗಿ ಬದಲಾಯಿಸಿಕೊಂಡರೆ ಕಡಿಮೆ ಮೌಲ್ಯ ಸಿಗಬಹುದು. ಅದೇ ಪಾಯಿಂಟ್‌ಗಳನ್ನು ವಿಮಾನ ಟಿಕೆಟ್ ಬುಕಿಂಗ್ ಅಥವಾ ಬ್ರ್ಯಾಂಡೆಡ್ ವೋಚರ್‌ಗಳಿಗೆ ಬಳಸಿಕೊಂಡರೆ ಹೆಚ್ಚಿನ ಮೌಲ್ಯ (Value-back) ಸಿಗುತ್ತದೆ.
ನಿಮ್ಮ ಬಿಲ್ ಜನರೇಟ್ ಆದ ತಕ್ಷಣ ದೊಡ್ಡ ಮೊತ್ತದ ಖರೀದಿಗಳನ್ನು ಮಾಡಿದರೆ, ನಿಮಗೆ ಹಣ ಪಾವತಿಸಲು ಸುಮಾರು 45 ರಿಂದ 50 ದಿನಗಳವರೆಗೆ ಬಡ್ಡಿ ರಹಿತ ಅವಧಿ (Interest-free period) ಸಿಗುತ್ತದೆ.
ನಿಮ್ಮ ಕ್ರೆಡಿಟ್ ಲಿಮಿಟ್ 2 ಲಕ್ಷ ರೂ. ಇದ್ದರೂ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಬ್ಯಾಂಕ್ ಆಪ್‌ನಲ್ಲಿ 20,000 ರೂ.ಗಳ ಮಿತಿಯನ್ನು ನೀವೇ ಸೆಟ್ ಮಾಡಿಕೊಳ್ಳಿ. ಇದು ನಿಮ್ಮನ್ನು ಗಡಿ ದಾಟಿ ಖರ್ಚು ಮಾಡದಂತೆ ತಡೆಯುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಹಣ ಇದೆ, ಆದರೆ, ‘ಅದು’ ಇಲ್ಲವಂತೆ; ಅಮೆರಿಕಕ್ಕೆ ವಲಸೆ ಹೋದ ಬೆಂಗಳೂರಿನ ಸ್ಟಾರ್ಟಪ್ ಸಂಸ್ಥಾಪಕಿ
ಕ್ರೆಡಿಟ್ ಕಾರ್ಡ್ ಬಳಕೆಯ ಸುವರ್ಣ ನಿಯಮವೆಂದರೆ — “ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಂದು ನಗದು ಹಣ ಇಲ್ಲದಿದ್ದರೆ, ಆ ವಸ್ತುವನ್ನು ಕ್ರೆಡಿಟ್ ಕಾರ್ಡ್‌ನಲ್ಲೂ ಖರೀದಿಸಬೇಡಿ.”
ಹಾಗೆಯೇ, ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್ ಆಸೆಗೆ ನಿಮಗೆ ಅಗತ್ಯವೇ ಇಲ್ಲದ ವಸ್ತು ಅಥವಾ ಸೇವೆಗೆ ಹಣ ವ್ಯಯಿಸಬೇಡಿ. ಇದು ಸದಾ ಗಮನದಲ್ಲಿರಲಿ. ಬಿಲ್ ಅನ್ನು ಪ್ರತಿ ತಿಂಗಳು ಪೂರ್ಣವಾಗಿ ಪಾವತಿಸಿದರೆ ಮಾತ್ರ ಕ್ರೆಡಿಟ್ ಕಾರ್ಡ್‌ನ ನಿಜವಾದ ಲಾಭ ಪಡೆಯಲು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ