ಸಾಲ ಪಡೆಯುವ ಪ್ಲ್ಯಾನ್‌ನಲ್ಲಿದ್ರೆ ಈ ವಿಷ್ಯ ಮೊದ್ಲು ತಿಳಿದುಕೊಳ್ಳಿ

ಸಾಲ ಪಡೆಯುವುದು ಹಾಗೂ ಅದನ್ನು ಸರಿಯಾದ ತಂತ್ರಗಳ ಮೂಲಕ ತೀರಿಸುವುದು ಕೂಡ ಹಣಕಾಸು ಕಲೆಯಾಗಿದೆ. ಆದರೆ ಸಾಲ ಪಡೆದ ಬಳಿಕ ತೀರಿಸಲಾಗದ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು. ನೀವೇನಾದ್ರೂ ಲೋನ್ ಪಡೆಯುವ ಮುನ್ನ ಕಡಿಮೆ ಬಡ್ಡಿದರ, ಆದಾಯದ ಮಿತಿ, ಬಡ್ಡಿದರಗಳನ್ನು ಹೋಲಿಕೆ ಮಾಡಿ. ಜತೆಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾಲ ಪಡೆಯುವ ಜಾಣ್ಮೆ ಇರಲಿ.

ಸಾಲ ಪಡೆಯುವ ಪ್ಲ್ಯಾನ್‌ನಲ್ಲಿದ್ರೆ ಈ ವಿಷ್ಯ ಮೊದ್ಲು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 21, 2026 | 7:25 PM

ಮುಖ್ಯಾಂಶಗಳು

  • ಸಾಲ ಹೆಚ್ಚಾದರೆ ಕುತ್ತಿಗೆಗೆ ಉರುಳಾಗುವುದು ಖಂಡಿತ
  • ಅವಶ್ಯಕತೆಯಿದ್ದರೆ ಮಾತ್ರ ಸಾಲ ಮಾಡುವುದು ಒಳಿತು
  • ಸಾಲದ ಪಡೆಯುವ ಮುನ್ನ ಬಡ್ಡಿದರ, ಆದಾಯದ ಮಿತಿ, ಬಡ್ಡಿದರದ ಬಗ್ಗೆ ತಿಳಿದಿರಲಿ

ಸಾಲ (Debt) ಅನ್ನೋದು ಎಂತಹವರನ್ನು ಒಂದು ಕ್ಷಣ ನಿದ್ದೆಗೆಡಿಸುತ್ತದೆ. ಹೀಗಾಗಿ ಹಿಂದೆ ಮುಂದೆ ಯೋಚಿಸಿ ಅವಶ್ಯಕತೆಯಿದ್ದರೆ ಮಾತ್ರ ಸಾಲ ಮಾಡುವುದು ಉತ್ತಮ. ನೀವೇನಾದ್ರೂ ಬ್ಯಾಂಕ್ ನಿಂದ ಲೋನ್ ತೆಗೆದುಕೊಳ್ಳುತ್ತಿದ್ದಂತೆ ಅದಕ್ಕೂ ಮುನ್ನ ಅಗತ್ಯತೆ, ಬಡ್ಡಿದರ ಸೇರಿದಂತೆ ಇನ್ನಿತ್ತರ ಅಂಶಗಳ ಮೇಲೆ ಗಮನ ಹರಿಸಿದರೆ ಸಾಲದ ಸುಳಿಯಲ್ಲಿ ಬೀಳುವುದರಿಂದ ನೀವು ಸೇಫ್ ಆಗ್ಬಹುದು. ಹಾಗಾದ್ರೆ ನೀವು ಸಾಲ ಪಡೆಯುವ ಯೋಚನೆಯಲ್ಲಿದ್ದರೆ ಈ ವಿಷ್ಯಗಳನ್ನು ತಿಳಿದುಕೊಳ್ಳಿ.

ಸಾಲ ಪಡೆಯುವ ಮುನ್ನ ನೀವು ಇದನ್ನು ತಿಳಿದಿರಲೇಬೇಕು

ಅಗತ್ಯಕ್ಕೆ ತಕ್ಕಂತೆ ಸಾಲವಿರಲಿ: ಲೋನ್ ಪಡೆಯುವ ಮುನ್ನ ನಿಜವಾಗಿ ಸಾಲ ಅಗತ್ಯವಿದೆಯೇ ಎಂದು ತಿಳಿದಿಯೇ ಎಂದು ಯೋಚಿಸಿ. ಅನಿರ್ವಾಯವಲ್ಲದಿದ್ದಾಗ ಆ ಖರ್ಚನ್ನು ಮುಂದೂಡಲು ಯೋಚಿಸಿ ಬಹಳ ಮುಖ್ಯ. ಹೌದು, ಐಷಾರಾಮಿ ಜೀವನ, ಅನಗತ್ಯ ಖರ್ಚುಗಳಿಗಾಗಿ ಸಾಲ ಮಾಡಬೇಡಿ. ಮನೆ, ಶಿಕ್ಷಣ ಹಾಗೂ ಇನ್ನಿತ್ತರ ಅಗತ್ಯವಿದ್ದರೆ ಮಾತ್ರ ಸಾಲ ಪಡೆಯಿರಿ.

ಬಡ್ಡಿ ದರಗಳ ಹೋಲಿಕೆ ಅಗತ್ಯ: ಸಾಲ ಪಡೆಯುವ ಮುನ್ನ ವಿವಿಧ ಬ್ಯಾಂಕುಗಳ ಬಡ್ಡಿ ದರಗಳ ಬಗ್ಗೆ ತಿಳಿದುಕೊಳ್ಳಿ. ಕಡಿಮೆ ಬಡ್ಡಿದರವಿರುವ ಬ್ಯಾಂಕ್ ನಲ್ಲಿ ಲೋನ್ ಪಡೆಯಿರಿ.

ಆದಾಯದ ಮಿತಿ ತಿಳಿದಿರಲಿ: ನಿಮ್ಮ ಆದಾಯಕ್ಕಿಂತ ಹೆಚ್ಚಿನ ಸಾಲ ಆರ್ಥಿಕ ಹೊರೆ ಉಂಟು ಮಾಡುತ್ತದೆ. ಹೀಗಾಗಿ ನಿಮ್ಮ ಒಟ್ಟು ಮಾಸಿಕ ಆದಾಯದ ಶೇ. 30 ರಿಂದ 40 ಕ್ಕಿಂತ ಹೆಚ್ಚು ಭಾಗ ಇಎಂಐ ಪಾವತಿಗೆ ಹೋಗದಂತೆ ನೋಡಿಕೊಳ್ಳಿ. ಒಂದು ವೇಳೆ ಹೆಚ್ಚು ಮೊತ್ತ ಇಎಂಐ ಪಾವತಿಗೆ ಹೋದರೆ ಉಳಿದ ಖರ್ಚು ವೆಚ್ಚಗಳನ್ನು ತೂಗಿಸಲು ಕಷ್ಟವಾಗಬಹುದು.

ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ

ಬ್ಯಾಂಕ್‌ ವಿಧಿಸುವ ಶುಲ್ಕಗಳ ಬಗ್ಗೆ ತಿಳಿದಿರಲಿ: ಪ್ರೊಸೆಸಿಂಗ್ ಶುಲ್ಕಗಳು ಸೇರಿದಂತೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಲ ಕ್ಲೋಸ್ ಮಾಡುವಾಗ ಬ್ಯಾಂಕ ವಿಧಿಸುವ ಶುಲ್ಕಗಳ ಬಗ್ಗೆ ಒಮ್ಮೆ ಪರಿಶೀಲಿಸಿ. ಈ ಹೆಚ್ಚುವರಿ ಶುಲ್ಕಗಳ ಪಾವತಿಗೆ ನೀವು ಹಣವನ್ನು ಎತ್ತಿಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us