ಶಾರಂಗ್ ಶಕ್ತಿ ಖರೀದಿಸಿದ ಎಲ್​ಎಟಿ ಏರೋಸ್ಪೇಸ್; ಅಗ್ಗದ ವಿಮಾನ ತಯಾರಿಸುವ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ

Deepinder Goyal's LAT Aerospace acquires Sharang Shakti: ದೀಪಿಂದರ್ ಗೋಯಲ್ ಅವರ ಎಲ್​ಎಟಿ ಏರೋಸ್ಪೇಸ್ ತನ್ನ ನಾಗರಿಕ ವಿಮಾನ ತಯಾರಿಕೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಮೂರು ವರ್ಷದ ಹಿಂದೆ ಸ್ಥಾಪನೆಯಾದ ಶಾರಂಗ್ ಶಕ್ತಿ ಎನ್ನುವ ಡಿಫೆನ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿ ಮಾಡಿದೆ.

ಶಾರಂಗ್ ಶಕ್ತಿ ಖರೀದಿಸಿದ ಎಲ್​ಎಟಿ ಏರೋಸ್ಪೇಸ್; ಅಗ್ಗದ ವಿಮಾನ ತಯಾರಿಸುವ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ
ದೀಪಿಂದರ್ ಗೋಯಲ್

Updated on: Feb 24, 2026 | 7:26 PM

ನವದೆಹಲಿ, ಫೆಬ್ರುವರಿ 24: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಮತ್ತೊಂದು ಕಂಪನಿಯಾದ ಎಲ್​ಎಟಿ ಏರೋಸ್ಪೇಸ್ ಇದೀಗ ಡಿಫೆನ್ಸ್ ಸೆಕ್ಟರ್​ನ ಸ್ಟಾರ್ಟಪ್​ವೊಂದನ್ನು ಖರೀದಿಸಿದೆ. ಗುರುಗ್ರಾಮ್​ನಲ್ಲಿರುವ ಶಾರಂಗ್ ಶಕ್ತಿ ಎನ್ನುವ ಹೊಸ ಡಿಫೆನ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿ ಮಾಡಿದೆ. ಮುಂದಿನ ತಲೆಮಾರಿನ ನಾಗರಿಕ ವಿಮಾನಯಾನ ಪ್ಲಾಟ್​ಫಾರ್ಮ್​ಗಳನ್ನು ನಿರ್ಮಿಸುವ ದೂರಗಾಮಿ ಗುರಿ ಹೊಂದಿರುವ ಎಲ್​ಎಟಿ ಏರೋಸ್ಪೇಸ್​ಗೆ ಇದು ಮಹತ್ವದ ಹೆಜ್ಜೆ ಎನಿಸಿದೆ.

ಡಿಫೆನ್ಸ್ ಏವಿಯೇಶನ್​ನಲ್ಲಿರುವ ಕಂಪನಿಗಳು ಸಿವಿಲ್ ಏವಿಯೇಶನ್​ಗೆ ಬರುವುದು ಕಡಿಮೆ. ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಎಲ್​ಎಟಿ ಏರೋಸ್ಪೇಸ್ ಇಂತಹದ್ದೊಂದು ರಿಸ್ಕ್ ತೆಗೆದುಕೊಂಡಿದೆ. ಗೋಯಲ್ ಪ್ರಕಾರ, ವಿಮಾನಯಾನದ ಪ್ರಮುಖ ತಂತ್ರಜ್ಞಾನಗಳು ಎರಡಕ್ಕೂ ಸಾಮಾನ್ಯವಾಗಿರುತ್ತವೆ.

ಶಾರಂಗ್ ಶಕ್ತಿ ಕಂಪನಿ 2023ರಲ್ಲಿ ಆರಂಭವಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಕೆಲ ಪ್ರಮುಖ ತಂತ್ರಜ್ಞಾನಗಳನ್ನು ಸ್ವಂತವಾಗಿ ಅಭಿವೃದ್ದಿಪಡಿಸಿದೆ. ಈ ಹಂತದಲ್ಲಿ ಎಲ್​ಎಟಿ ಎರೋಸ್ಪೇಸ್ ಈ ಸ್ಟಾರ್ಟಪ್ ಅನ್ನು ಖರೀದಿ ಮಾಡಿರುವುದು ಗಮನಾರ್ಹ. ಈ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿ ಡಿಫೆನ್ಸ್ ಮತ್ತು ಸಿಲಿಲ್ ಏವಿಯೇಶನ್ ವಿಮಾನಗಳನ್ನು ತಯಾರಿಸುವ ಆಶಯದಲ್ಲಿದೆ.

ದೀಪಿಂದರ್ ಗೋಯಲ್ ಅವರು ಜೊಮಾಟೊದ ಸಂಸ್ಥಾಪಕರು. ಬ್ಲಿಂಕಿಟ್ ಇತ್ಯಾದಿ ಕಂಪನಿಗಳನ್ನೂ ಖರೀದಿಸಿದ್ದಾರೆ. ಎಟರ್ನಲ್ ಅಡಿಯಲ್ಲಿ ಈ ಕಂಪನಿಗಳಿವೆ. ದೀಪಿಂದರ್ ಅವರು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಲ್​ಎಟಿ ಏರೋಸ್ಪೇಸ್ ಹಾಗು ಇತರ ಪ್ರಾಜೆಕ್ಟ್​ಗಳಲ್ಲಿ ನಿರತರಾಗಿದ್ದಾರೆ.

ಸಣ್ಣ ಗಾತ್ರದ ಎಲೆಕ್ಟ್ರಿಕ್ ವಿಮಾನಗಳನ್ನು ನಿರ್ಮಿಸಿ, ಅಗ್ಗದ ದರಕ್ಕೆ ಪ್ರಯಾಣಾವಕಾಶ ಕಲ್ಪಿಸುವುದು ದೀಪಿಂದರ್ ಗೋಯಲ್ ಅವರಿಗಿರುವ ಮಹತ್ವಾಕಾಂಕ್ಷೆ. ಸಣ್ಣ ಪುಟ್ಟ ಪಟ್ಟಣಗಳ ನಡುವೆ ವಿಮಾನ ಹಾರಾಟ ಆರಂಭಿಸುವುದು ಅವರ ಗುರಿ. ಬಸ್ಸು, ಕ್ಯಾಬ್​ಗಳಂತೆ ಸಾಮಾನ್ಯ ಜನರು ವಿಮಾನಗಳ ಬಳಸುವಂತಾಗಬೇಕು ಎಂಬುದು ಅವರ ಉದ್ದೇಶ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us