SpiceJet: ಕಳಾನಿಧಿ ಮಾರನ್​ಗೆ 380 ಕೋಟಿ ರೂ ಕೊಡಲು ಸ್ಪೈಸ್​ಜೆಟ್​ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?

|

Updated on: Jun 01, 2023 | 5:17 PM

Delhi High Court Order To SpiceJet: 2015ರಲ್ಲಿ ಸನ್ ಗ್ರೂಪ್​ನ ಕಳಾನಿಧಿ ಮಾರನ್ ಸ್ಪೈಸ್​ಜೆಟ್​ನಲ್ಲಿದ್ದ ತಮ್ಮೆಲ್ಲಾ ಪಾಲಿನ ಷೇರುಗಳನ್ನು ಅಜಯ್ ಸಿಂಗ್​ಗೆ ವರ್ಗಾಯಿಸಿರುತ್ತಾರೆ. ಇದಕ್ಕೆ ಬದಲಾಗಿ 18 ಕೋಟಿ ಕನ್ವರ್ಟಿಬಲ್ ವಾರಂಟ್ ಅನ್ನು ಕೊಡಲು ಸ್ಪೈಸ್​ಜೆಟ್ ವಿಫಲವಾಗಿದೆ ಎಂದು ಆರೋಪಿಸಿ ಮಾರನ್ 2017ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

SpiceJet: ಕಳಾನಿಧಿ ಮಾರನ್​ಗೆ 380 ಕೋಟಿ ರೂ ಕೊಡಲು ಸ್ಪೈಸ್​ಜೆಟ್​ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?
ಸ್ಪೈಸ್​ಜೆಟ್
Follow us on

ನವದೆಹಲಿ: ಷೇರು ರವಾನೆ ವಿಚಾರದಲ್ಲಿ ಉಂಟಾದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಪೈಸ್​ಜೆಟ್ ಏರ್​ಲೈನ್ ಸಂಸ್ಥೆ (SpiceJet) ತನ್ನ ಮಾಜಿ ಪ್ರೊಮೋಟರ್ ಕಳಾನಿಧಿ ಮಾರನ್ ಅವರಿಗೆ 380 ರೂ ಕಟ್ಟಿಕೊಡಬೇಕಿದೆ. ದೆಹಲಿ ಹೈಕೋರ್ಟ್ ಜೂನ್ 1ರಂದು ಸ್ಪೈಸ್​ಜೆಟ್​ಗೆ ಈ ಆದೇಶ ನೀಡಿದೆ. ನಾಲ್ಕು ವಾರದಲ್ಲಿ ತನ್ನ ಆಸ್ತಿಗಳ ಅಫಿಡವಿಟ್ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸ್ಪೈಸ್ ಜೆಟ್ ಈಗಾಗಲೇ ಮಾರನ್​ಗೆ 579.08 ಕೋಟಿ ರೂ ಕೊಟ್ಟಿದೆ. ಅದರ ಬಡ್ಡಿ ಎಲ್ಲವೂ ಸೇರಿ ಈಗ 380 ರೂ ಆಗಿದ್ದು, ಅದನ್ನೂ ಪಾವತಿಸುವಂತೆ ಸ್ಪೈಸ್​ಜೆಟ್​ಗೆ ಸೂಚಿಸಲಾಗಿದೆ. ಆದರೆ, ತಾನು 579 ಕೋಟಿ ರೂಗಳ ಅಸಲು ಹಣ ಕಟ್ಟಲಾಗಿರುವುದರಿಂದ ಬಡ್ಡಿಯಿಂದ ವಿನಾಯಿತಿ ಪಡೆಯಲು ಸ್ಪೈಸ್​ಜೆಟ್ ಸಂಧಾನಕ್ಕೆ ಮುಂದಾಗಿರುವುದು ತಿಳಿದುಬಂದಿದೆ.

ಅಂದಹಾಗೆ ಈ ಪ್ರಕರಣದ ಮೂಲ 2015ರಲ್ಲಿ ಶುರುವಾಗುತ್ತದೆ. ಸನ್ ಗ್ರೂಪ್​ನ ಕಳಾನಿಧಿ ಮಾರನ್ ಹಾಗು ಕೆಎಎಲ್ ಏರ್​ವೇಸ್ ಸ್ಪೈಸ್​ಜೆಟ್​ನಲ್ಲಿ ಹೊಂದಿದ್ದ ತಮ್ಮ ಎಲ್ಲಾ ಶೇ. 58.46ರಷ್ಟು ಪಾಲನ್ನು ಅಜಯ್ ಸಿಂಗ್ ಅವರಿಗೆ ಮಾರುತ್ತಾರೆ. ಒಟ್ಟು 35.04 ಕೋಟಿ ಈಕ್ವಿಟಿ ಶೇರುಗಳು ಅಜಯ್ ಸಿಂಗ್​ಗೆ ರವಾನೆಯಾಗುತ್ತದೆ. ಆದರೆ, ಕನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಶೇರ್​ಗಳನ್ನು ಸ್ಪೈಸ್ ಜೆಟ್ ತಮಗೆ ನೀಡುತ್ತಿಲ್ಲ ಎಂದು ಆರೋಪಿಸಿ 2017ರಲ್ಲಿ ಮಾರನ್ ಅವರು ಕೋರ್ಟ್ ಮೆಟ್ಟಿಲೇರುತ್ತಾರೆ. 2020ರಲ್ಲಿ ಕೋರ್ಟ್ ತೀರ್ಪು ಕೊಟ್ಟು ಮಾರನ್​ಗೆ 579.08 ಕೋಟಿ ಅಸಲು ಹಣಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ತಿಳಿಸುತ್ತದೆ. ಸ್ಪೈಸ್​ಜೆಟ್ ಅಸಲು ಹಣ ಕೊಡುತ್ತದೆ. ಆದರೆ, ಬಡ್ಡಿ ಹಣ ಬಾಕಿ ಉಳಿದಿರುತ್ತದೆ. 2020 ಅಕ್ಟೋಬರ್​ನಲ್ಲಿ ಬಡ್ಡಿ ಹಣ 242 ಕೋಟಿ ರೂ ಆಗಿರುತ್ತದೆ. ಈಗ ಅದು 362 ರುಪಾಯಿಯಷ್ಟಾಗಿದೆ.

ಇದನ್ನೂ ಓದಿOwn business: ಸ್ವಂತ ವ್ಯವಹಾರ ನಡೆಸಲು ಏನೇನು ಮಾಡಬೇಕು? ಈ ಕೆಲ ಅಂಶಗಳು ಗಮನದಲ್ಲಿರಲಿ

ಸ್ಪೈಸ್​ಜೆಟ್ ಇತಿಹಾಸ:

ಖ್ಯಾತ ಉದ್ಯಮಿ ಎಸ್.ಕೆ. ಮೋದಿ ಅವರು 1984ರಲ್ಲಿ ಏರ್ ಟ್ಯಾಕ್ಸಿ ಸರ್ವಿಸ್ ಆರಂಭಿಸಿದ್ದರು. 1993ರಲ್ಲಿ ಲಫ್ತಾನ್ಸಾ ಏರ್​ಲೈನ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಯಿತು. ಎಂಜಿ ಎಕ್ಸ್​ಪ್ರೆಸ್ ಎಂದು ಹೆಸರಿಡಲಾಯಿತು. 1996ರಲ್ಲಿ ಇದು ಮುಚ್ಚಿಹೋಯಿತು. 2004ರಲ್ಲಿ ಅಜಯ್ ಸಿಂಗ್ ಅವರು ಈ ಕಂಪನಿಯನ್ನು ಖರೀದಿಸಿದ್ದರು. ಸ್ಪೈಸ್​ಜೆಟ್ ಎಂದು ಹೆಸರು ಬದಲಾಯಿತು. 2010ರಲ್ಲಿ ಕಳಾನಿಧಿ ಮಾರನ್ ಶೇ. 37.7ರಷ್ಟು ಪಾಲು ಖರೀದಿ ಮಾಡಿದರು. ನಂತರ ತಮ್ಮ ಷೇರುಪಾಲು ಇನ್ನಷ್ಟು ಹೆಚ್ಚಿಸಿಕೊಂಡರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ