
ಇತ್ತೀಚೆಗಿನ ದಿನಗಳಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ (net banking) ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಆದರೆ, ದೊಡ್ಡ ವಹಿವಾಟುಗಳಿಗೆ ಚೆಕ್‌ಗಳನ್ನು ಬಳಸಲಾಗುತ್ತಿದೆ. ಆದರೆ ಚೆಕ್‌ನಲ್ಲಿ ಮೊತ್ತ ನಮೂದಿಸಿದ ಬಳಿಕ ಓನ್ಲಿ ಬರೆಯಲಾಗುತ್ತದೆ. ಈ ಪದವನ್ನು ಯಾಕೆ ಬರೆಯಲಾಗುತ್ತದೆ ಎಂದು ಒಮ್ಮೆಯಾದ್ರು ನೀವು ಯೋಚಿಸಿದ್ದೀರಾ?. ಆದರೆ ಹೀಗೆ ಬರೆಯುವುದರಿಂದ ಯಾರೂ ಮೊತ್ತವನ್ನು ಹೆಚ್ಚಿಸಲು ಆಗಲ್ಲ. ಪ್ರತಿಯೊಬ್ಬ ಗ್ರಾಹಕರು ತಮ್ಮ ಭದ್ರತೆಗಾಗಿ ಮೊತ್ತದ ಕೊನೆಗೆ ಓನ್ಲಿ ಎನ್ನುವ ಪದವನ್ನು ಬರೆಯುತ್ತಾರೆ.
ಸುರಕ್ಷತೆ: ಮೊತ್ತದ ಕೊನೆಗೆ ಓನ್ಲಿ ಬರೆಯಲೇಬೇಕು ಎಂಬ ಕಡ್ಡಾಯವಾದ ಕಾನೂನು ನಿಯಮವಿಲ್ಲ. ಆದರೆ ಈ ಪದ ಬಳಕೆಯು ವಂಚನೆ ಹಾಗೂ ತಿದ್ದುಪಡಿಗಳನ್ನು ತಡೆಯುತ್ತದೆ. ಸುರಕ್ಷತೆಗಾಗಿ ಈ ಓನ್ಲಿ ಎಂಬ ಪದವನ್ನು ಬರೆಯಲಾಗುತ್ತದೆ.
ಮೊತ್ತದ ಸ್ಪಷ್ಟತೆ: ಚೆಕ್‌ನಲ್ಲಿ ಮೊತ್ತದ ಬಳಿಕ ಓನ್ಲಿ ಎಂದು ಬರೆಯುವುದರಿಂದ ಬ್ಯಾಂಕ್ ಸಿಬ್ಬಂದಿಗೆ ಮೊತ್ತದ ಬಗ್ಗೆ ಯಾವುದೇ ಗೊಂದಲ ಉಂಟಾಗುವುದನ್ನು ತಡೆಯುತ್ತದೆ. ಅಂಕಿಗಳಲ್ಲಿ ಬರೆದ ಮೊತ್ತಕ್ಕೂ ಹಾಗೂ ಪದಗಳಲ್ಲಿ ಬರೆದ ಮೊತ್ತಕ್ಕೂ ಹೊಂದಾಣಿಕೆ ಇದೆಯೇ ಎಂದು ಇದು ತಿಳಿಸುತ್ತದೆ.
ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ
ಹೆಚ್ಚುವರಿ ಪದಗಳ ಸೇರ್ಪಡೆ ತಡೆಯಲು ಸಾಧ್ಯ: ಚೆಕ್‌ನಲ್ಲಿ ಮೊತ್ತದ ಕೊನೆಯಲ್ಲಿ ಓನ್ಲಿ ಬರೆಯದೇ ಹೋದರೆ ಬೇರೆಯವರು ಅಲ್ಲಿ ಹೆಚ್ಚುವರಿ ಪದಗಳನ್ನು ಸೇರಿಸಿ ಮೊತ್ತವನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಒಂದೇ ಒಂದು ಪದವು ಹೆಚ್ಚುವರಿ ಪದಗಳ ಸೇರ್ಪಡೆ ತಡೆಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ