ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ

ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಕಷ್ಟಪಟ್ಟು ಸಾಲ ಮಾಡಿ ಕನಸಿನ ಮನೆಯನ್ನು ಕಟ್ಟುತ್ತೇವೆ. ಅದೇ ರೀತಿ ಸುಂದರವಾದ ಮನೆಗೆ ಡೋರ್ ನಂಬರ್ ಕೂಡ ಅಷ್ಟೇ ಮುಖ್ಯ. ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಅಥವಾ ನಗರ ಸಭೆ/ ಪುರಸಭೆಗೆ ಅರ್ಜಿ ಸಲ್ಲಿಸಿದರೆ ಅಧಿಕೃತ ಮನೆ ಸಂಖ್ಯೆ ನೀಡುತ್ತಾರೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 17, 2026 | 5:28 PM

ಮುಖ್ಯಾಂಶಗಳು

  • ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ ಹೀಗೆ ಅಧಿಕೃತ ಗುರುತಿಗೆ ಮನೆ ಸಂಖ್ಯೆ ಪ್ರಮುಖ ದಾಖಲೆಯಾಗಿದೆ.
  • ಡೋರ್‌ ನಂಬರ್‌ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.
  • ಡೋರ್‌ ನಂಬರ್‌ಗೆ ಆಸ್ತಿ ಪತ್ರ, ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ಬೇಕು.

ಎಲ್ಲರ ಮನೆಗೂ ಡೋರ್ ನಂಬರ್ (door number) ಇದ್ದೆ ಇರುತ್ತದೆ. ತುರ್ತು ಸೇವೆಗಳ ಆಗಮನ, ಸ್ಥಳೀಯ ಸರ್ಕಾರಿ ದಾಖಲೆಗಳು, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ನಂತಹ ಅಧಿಕೃತ ಗುರುತಿಗೆ ಮನೆ ಸಂಖ್ಯೆ ಪ್ರಮುಖ ಆಧಾರವಾಗಿದೆ. ನೀವೇನಾದ್ರೂ ಹೊಸ ಮನೆ ಕಟ್ಟಿದ್ದರೆ ಡೋರ್ ನಂಬರ್ ಪಡೆಯುವುದು ಹೇಗೆ ಎನ್ನುವ ಗೊಂದಲ ಇರಬಹುದು. ಆದರೆ ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೆಲವು ದಿನಗಳಲ್ಲೇ ಮನೆಗೆ ಡೋರ್ ನಂಬರ್ ಪಡೆಯಬಹುದು.

 ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಹಂತ 1: ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಹಂತ 2: ಅರ್ಜಿಯೊಂದಿಗೆ ಆಸ್ತಿ ಪತ್ರ , ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರವನ್ನು ಲಗತ್ತಿಸಿ.

ಹಂತ 3: ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.

ಹಂತ 4: ಪರಿಶೀಲನೆ ಬಳಿಕ ನಿಮ್ಮ ಮನೆಯನ್ನು ಗ್ರಾಮ ಅಥವಾ ನಗರದ ಆಸ್ತಿ ನೋಂದಣಿ ರಿಜಿಸ್ಟರ್‌ನಲ್ಲಿ ನಮೂದಿಸಿ ಅಧಿಕೃತ ಡೋರ್ ನಂಬರ್ ನೀಡಲಾಗುತ್ತದೆ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಉತ್ತರ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಪ್ರಶ್ನೆ: ಹೊಸ ಮನೆಗೆ ಮನೆ ಸಂಖ್ಯೆ ಪಡೆಯಲು ಏನೆಲ್ಲಾ ದಾಖಲೆಗಳು ಬೇಕು?

ಉತ್ತರ: ಅರ್ಜಿಯೊಂದಿಗೆ ಆಸ್ತಿ ಪತ್ರ, ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರಗಳಂತಹ ದಾಖಲೆಗಳು ಬೇಕು.

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಯಾವಾಗ ನೀಡುತ್ತಾರೆ?

ಉತ್ತರ: ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಡೋರ್ ನಂಬರ್ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:27 pm, Fri, 17 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us