ನಾಮಿನಿ ಇಲ್ಲದೇ ಹೋದ್ರೆ ಮೃತ ವ್ಯಕ್ತಿಯ ಹೆಸರಿನಲ್ಲಿಟ್ಟ ಎಫ್‌ಡಿ ಹಣವು ಯಾರ ಕೈ ಸೇರುತ್ತದೆ?

ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ನಾಮಿನಿ ಹೆಸರನ್ನು ಉಲ್ಲೇಖಿಸುವುದು ಬಹಳ ಮುಖ್ಯ. ಒಂದು ವೇಳೆ ನಾಮಿನಿ ಹೆಸರು ಇಲ್ಲದೇ ಹೋದರೆ ಹಣವು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಆದರೆ ವಾರಸುದಾರರಿಗೆ ಸ್ಥಿರ ಠೇವಣಿಯ ಹಣ ಸಿಗಬೇಕು ಅಂತಾದ್ರೆ ಈ ದಾಖಲೆಗಳನ್ನು ಠೇವಣಿ ಇಟ್ಟ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗೆ ಸಲ್ಲಿಸಬೇಕು. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ನಾಮಿನಿ ಇಲ್ಲದೇ ಹೋದ್ರೆ ಮೃತ ವ್ಯಕ್ತಿಯ ಹೆಸರಿನಲ್ಲಿಟ್ಟ ಎಫ್‌ಡಿ ಹಣವು ಯಾರ ಕೈ ಸೇರುತ್ತದೆ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 03, 2026 | 9:51 AM

ಮುಖ್ಯಾಂಶಗಳು

  • ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ನಾಮಿನಿ ಹೆಸರನ್ನು ಉಲ್ಲೇಖಿಸುವುದು ಮುಖ್ಯ
  • ನಾಮಿನಿ ಇಲ್ಲದೇ ಹೋದ್ರು ಮೃತ ಪಟ್ಟ ವ್ಯಕ್ತಿ ಹೆಸರಿನಲ್ಲಿಟ್ಟ ಎಫ್‌ಡಿ ಹಣವು ವಾರಸುದಾರರ ಕೈ ಸೇರುತ್ತದೆ.
  • ಬ್ಯಾಂಕ್‌ಗೆ ಈ ಮುಖ್ಯ ದಾಖಲೆಗಳನ್ನು ನೀಡಿ ಮೃತ ವ್ಯಕ್ತಿಯ ಹೆಸರಿನಲ್ಲಿರುವ ಎಫ್‌ಡಿ ಹಣವನ್ನು ಪಡೆಯಬಹುದು

ಕೆಲವರು ತಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಸ್ಥಿರ ಠೇವಣಿ (fixed deposit) ಇಡುತ್ತಾರೆ. ಈ ಹೂಡಿಕೆಯಿಂದ ಖಚಿತ ಆದಾಯ, ಸುರಕ್ಷಿತ ಬಂಡವಾಳ ಹಾಗೂ ಸಾಲದ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಒಂದು ವೇಳೆ ಠೇವಣಿ ಇಟ್ಟ ಹಣಕ್ಕೆ ನಾಮಿನಿ ಹೆಸರನ್ನು ಸೇರಿಸದೇ ಹೋದರೆ ಆ ಮೊತ್ತವು ಯಾರ ಕೈ ಸೇರುತ್ತದೆ ಎಂಬ ಗೊಂದಲವಿರಬಹುದು. ಆದರೆ ಸ್ಥಿರ ಠೇವಣಿ ಇಟ್ಟ ವೇಳೆ ನಾಮಿನಿ ಹೆಸರನ್ನು ಉಲ್ಲೇಖಿಸಿ.  ನಾಮಿನಿ ಇಲ್ಲದೆ ಹೋದಲ್ಲಿ ಆ ಮೊತ್ತವು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳ (Legal Heirs) ಕೈ ಸೇರುತ್ತದೆ.

ನಾಮಿನಿ ಇಲ್ಲದಿದ್ರೆ ಸ್ಥಿರ ಠೇವಣಿ ಮೊತ್ತ ಯಾರ ಕೈ ಸೇರುತ್ತದೆ?

ಸ್ಥಿರ ಠೇವಣಿಯಿರಲಿ, ಬ್ಯಾಂಕ್ ಸಾಲವೇ ಇರಲಿ, ನಾಮಿನಿ ಹೆಸರನ್ನು ಉಲ್ಲೇಖಿಸುವುದು ಬಹಳ ಮುಖ್ಯ. ಒಂದು ವೇಳೆ ನಾಮಿನಿ ಹೆಸರು ಉಲ್ಲೇಖಿಸಿದ ಪಕ್ಷದಲ್ಲಿ ಠೇವಣಿ ಇಟ್ಟ ವ್ಯಕ್ತಿ ಮೃತ ಪಟ್ಟರೆ, ಆ ಎಲ್ಲಾ ಮೊತ್ತವು ಆ ವ್ಯಕ್ತಿಯ ಪತ್ನಿ, ಮಕ್ಕಳು ಅಥವಾ ತಂದೆ ತಾಯಿಗೆ ಸೇರುತ್ತದೆ. ಒಂದು ವೇಳೆ ಮೃತ ಪಟ್ಟ ವ್ಯಕ್ತಿಗೆ ಮದುವೆಯಾಗದೆ ಹೋದಲ್ಲಿ ಈ ಸ್ಥಿರ ಠೇವಣಿಯ ಮೊತ್ತವು ಒಡಹುಟ್ಟಿದವರಿಗೆ ಸೇರುತ್ತದೆ.

ಹಣ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

  • ಖಾತೆದಾರರ ಮರಣ ಪ್ರಮಾಣ ಪತ್ರ
  • ಕಾನೂನು ಉತ್ತರಾಧಿಕಾರಿ ಪ್ರಮಾಣ ಪತ್ರ
  • ಖಾತೆದಾರರ ಜತೆಗಿನ ಸಂಬಂಧವನ್ನು ಸಾಬೀತುಪಡಿಸುವ ಗುರುತಿನ ಚೀಟಿಗಳು

ಪರಿಶೀಲನೆ ಪ್ರಕ್ರಿಯೆ ಹೇಗಿರುತ್ತದೆ?

ಹಂತ 1: ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಮೃತ ಪಟ್ಟ ವ್ಯಕ್ತಿಯ ವಾರಸುದಾರ ನೀಡಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತದೆ.

ಹಂತ 2: ಯಾವುದೇ ವಿವಾದಗಳಿಲ್ಲದಿದ್ದರೆ, ವಾರಸುದಾರ ನೀಡಿರುವ ದಾಖಲೆಗಳು ಸರಿಯಾಗಿದ್ದರೆ, ಹಣವನ್ನು ಕಾನೂನುಬದ್ಧ ವಾರಸುದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ಹಂತ 3: ಮೃತ ವ್ಯಕ್ತಿ ಇಟ್ಟ ಸ್ಥಿರ ಠೇವಣಿ ಮೊತ್ತವು ತುಂಬಾ ಹೆಚ್ಚಾಗಿದ್ದರೆ, ಸಿವಿಲ್ ಕೋರ್ಟ್‌ನಿಂದ ಸಕ್ಸೆಷನ್ ಸರ್ಟಿಫಿಕೇಟ್ ತಂದು ಬ್ಯಾಂಕ್ ಗೆ ನೀಡುವುದು ಕಡ್ಡಾಯ.

ಇದನ್ನೂ ಓದಿ: ತಿಳಿವಳಿಕಸ್ಥರಿಗೆ ಪಿಎಫ್ ಸಾಕು ಎನ್ನುತ್ತಿದೆ ಇಪಿಎಫ್​ಒ; ಇಪಿಎಫ್ ಮತ್ತು ವಿಪಿಎಫ್ ಸಂಯೋಜನೆಯಿಂದ ಕೋಟಿ ಗಳಿಕೆ ಹೇಗೆ ಸಾಧ್ಯ?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ನಾಮಿನಿ ಇಲ್ಲದೆ ಹೋದಲ್ಲಿ ಫಿಕ್ಸೆಡ್ ಡೆಪಾಸಿಟ್ ಹಣ ಯಾರಿಗೆ ಸೇರುತ್ತದೆ?

ಉತ್ತರ: ಒಂದು ವೇಳೆ ನಾಮಿನಿ ಹೆಸರು ಇಲ್ಲದೆ ಹೋದರೆ ಹಣವು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ.

ಪ್ರಶ್ನೆ: ಮೃತ ವ್ಯಕ್ತಿ ಠೇವಣಿ ಇಟ್ಟ ಹಣ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಖಾತೆದಾರರ ಮರಣ ಪ್ರಮಾಣ ಪತ್ರ, ಕಾನೂನು ಉತ್ತರಾಧಿಕಾರಿ ಪ್ರಮಾಣ ಪತ್ರ ಹಾಗೂ ಖಾತೆದಾರರ ಜತೆಗಿನ ಸಂಬಂಧವನ್ನು ಸಾಬೀತುಪಡಿಸುವ ಗುರುತಿನ ಚೀಟಿ ಈ ದಾಖಲೆಗಳನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ನೀಡಬೇಕು.

ಪ್ರಶ್ನೆ: ಸ್ಥಿರ ಠೇವಣಿ ಇಡುವುದರಿಂದ ಆಗುವ ಪ್ರಯೋಜನಗಳೇನು?

ಉತ್ತರ: ಸ್ಥಿರ ಠೇವಣಿ ಇಡುವುದರಿಂದ ಖಚಿತ ಆದಾಯ, ಸುರಕ್ಷಿತ ಬಂಡವಾಳ ಹಾಗೂ ಸಾಲದ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us