Gold Silver Price on 10th November: ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2024 November 10th: ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಸೋಮವಾರ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 50 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ 1 ರೂ ಕಡಿಮೆ ಆಗಿದೆ. ಕೆಲ ದಿನಗಳ ಹಿಂದೆ 100 ರೂ ಇದ್ದ ಬೆಳ್ಳಿ ಬೆಲೆ ಇವತ್ತು 93 ರೂಗೆ ಇಳಿದಿದೆ.

Gold Silver Price on 10th November: ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Nov 11, 2024 | 9:58 AM

ಬೆಂಗಳೂರು, ನವೆಂಬರ್ 10: ವಾರಾಂತ್ಯದ ಚಿನ್ನದ ಬೆಲೆ ಇಳಿಕೆ ಈ ವಾರದ ಆರಂಭದಲ್ಲೂ ಮುಂದುವರಿದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಎರಡು ಕೂಡ ಇಂದು ಸೋಮವಾರ ಕಡಿಮೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 5 ರೂನಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,275 ರೂನಿಂದ 7,270 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 1 ರೂನಷ್ಟು ಅಗ್ಗಗೊಂಡಿದೆ. 94 ರೂ ಇದ್ದ ಅದರ ಬೆಲೆ 93 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 79,300 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 72,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,300 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 10ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,300 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,480 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 93 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,300 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 93 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 72,700 ರೂ
  • ಚೆನ್ನೈ: 72,700 ರೂ
  • ಮುಂಬೈ: 72,700 ರೂ
  • ದೆಹಲಿ: 72,850 ರೂ
  • ಕೋಲ್ಕತಾ: 72,700 ರೂ
  • ಕೇರಳ: 72,700 ರೂ
  • ಅಹ್ಮದಾಬಾದ್: 72,750 ರೂ
  • ಜೈಪುರ್: 72,850 ರೂ
  • ಲಕ್ನೋ: 72,850 ರೂ
  • ಭುವನೇಶ್ವರ್: 72,700 ರೂ

ಇದನ್ನೂ ಓದಿ: Petrol Diesel Price on November 11: ಕಚ್ಚಾತೈಲ ಬೆಲೆಯಲ್ಲಿ ಏರಿಳಿತ, ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,680 ರಿಂಗಿಟ್ (70,860 ರುಪಾಯಿ)
  • ದುಬೈ: 3,070 ಡಿರಾಮ್ (70,530 ರುಪಾಯಿ)
  • ಅಮೆರಿಕ: 820 ಡಾಲರ್ (69,190 ರುಪಾಯಿ)
  • ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,680 ರುಪಾಯಿ)
  • ಕತಾರ್: 3,080 ಕತಾರಿ ರಿಯಾಲ್ (71,170 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,280 ರುಪಾಯಿ)
  • ಓಮನ್: 324.50 ಒಮಾನಿ ರಿಯಾಲ್ (71,100 ರುಪಾಯಿ)
  • ಕುವೇತ್: 248.30 ಕುವೇತಿ ದಿನಾರ್ (68,320 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,300 ರೂ
  • ಚೆನ್ನೈ: 10,200 ರೂ
  • ಮುಂಬೈ: 9,300 ರೂ
  • ದೆಹಲಿ: 9,300 ರೂ
  • ಕೋಲ್ಕತಾ: 9,300 ರೂ
  • ಕೇರಳ: 10,200 ರೂ
  • ಅಹ್ಮದಾಬಾದ್: 9,300 ರೂ
  • ಜೈಪುರ್: 9,300 ರೂ
  • ಲಕ್ನೋ: 9,300 ರೂ
  • ಭುವನೇಶ್ವರ್: 10,200 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us