Gold Silver Price on 18th October: ಚಿನ್ನ, ಬೆಳ್ಳಿ ಬೆಲೆ ಇಂದೂ ಕೂಡ ಭಾರೀ ಏರಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ಬೆಲೆ?

Bullion Market 2024 October 18th: ಕಳೆದ ಎರಡು ದಿನಗಳಿಂದ 65 ರೂನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು 60 ರೂನಷ್ಟು ದುಬಾರಿಯಾಗಿದೆ. ಇದರೊಂದಿಗೆ ಮೂರು ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 125 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ ಇಂದು ಎರಡು ರೂನಷ್ಟು ಭರ್ಜರಿ ಏರಿಕೆ ಕಂಡಿದೆ.

Gold Silver Price on 18th October: ಚಿನ್ನ, ಬೆಳ್ಳಿ ಬೆಲೆ ಇಂದೂ ಕೂಡ ಭಾರೀ ಏರಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ಬೆಲೆ?
ಚಿನ್ನ

Updated on: Oct 18, 2024 | 10:23 AM

ಬೆಂಗಳೂರು, ಅಕ್ಟೋಬರ್ 18: ಭಾರತದಲ್ಲಿ ಇಂದು ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver rates) ಎರಡೂ ಭರ್ಜರಿ ಹೆಚ್ಚಳ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 60 ರೂನಷ್ಟು ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,180 ರೂ ಇದ್ದದ್ದು 7,240 ರೂಗೆ ಏರಿಕೆ ಆಗಿದೆ. ದೆಹಲಿ ಮೊದಲಾದೆಡೆ 7,255 ರೂ ಗರಿಷ್ಠ ಬೆಲೆ ಇದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಬರೋಬ್ಬರಿ 2 ರೂನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಹೆಚ್ಚೂಕಡಿಮೆ ಎರಡೂವರೆ ರೂನಷ್ಟು ಏರಿಕೆಯಾಗಿ 94 ರೂ ಗಡಿ ದಾಟಿದೆ. ಇತರೆಡೆ ಬೆಳ್ಳಿ ಬೆಲೆ 99 ರೂ ಮತ್ತು 105 ರೂ ಇದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಕೆಲವೆಡೆ ಏರಿಕೆ ಆಗಿರುವುದು ಬಿಟ್ಟರೆ ಉಳಿದಂತೆ ಅಷ್ಟು ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 78,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 72,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,410 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,980 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,240 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,980 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 941 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 72,400 ರೂ
  • ಚೆನ್ನೈ: 72,400 ರೂ
  • ಮುಂಬೈ: 72,400 ರೂ
  • ದೆಹಲಿ: 72,550 ರೂ
  • ಕೋಲ್ಕತಾ: 72,400 ರೂ
  • ಕೇರಳ: 72,400 ರೂ
  • ಅಹ್ಮದಾಬಾದ್: 72,450 ರೂ
  • ಜೈಪುರ್: 72,550 ರೂ
  • ಲಕ್ನೋ: 72,550 ರೂ
  • ಭುವನೇಶ್ವರ್: 72,400 ರೂ

ಇದನ್ನೂ ಓದಿ: ನೇರ ತೆರಿಗೆ ಸಂಗ್ರಹ, 2014ರಲ್ಲಿ 6.96 ಕೋಟಿ ರೂ, 2023ರಲ್ಲಿ 19.60 ಲಕ್ಷ ಕೋಟಿ ರೂ; ಸರ್ಕಾರಕ್ಕೆ ಹತ್ತು ವರ್ಷದಲ್ಲಿ ತೆರಿಗೆ ಸುಗ್ಗಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (70,860 ರುಪಾಯಿ)
  • ದುಬೈ: 2,970 ಡಿರಾಮ್ (67,980 ರುಪಾಯಿ)
  • ಅಮೆರಿಕ: 820 ಡಾಲರ್ (68,940 ರುಪಾಯಿ)
  • ಸಿಂಗಾಪುರ: 1,096 ಸಿಂಗಾಪುರ್ ಡಾಲರ್ (70,160 ರುಪಾಯಿ)
  • ಕತಾರ್: 2,980 ಕತಾರಿ ರಿಯಾಲ್ (68,720 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,050 ರುಪಾಯಿ)
  • ಓಮನ್: 316.50 ಒಮಾನಿ ರಿಯಾಲ್ (69,120 ರುಪಾಯಿ)
  • ಕುವೇತ್: 242.40 ಕುವೇತಿ ದಿನಾರ್ (66,470 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,410 ರೂ
  • ಚೆನ್ನೈ: 10,500 ರೂ
  • ಮುಂಬೈ: 9,900 ರೂ
  • ದೆಹಲಿ: 9,900 ರೂ
  • ಕೋಲ್ಕತಾ: 9,900 ರೂ
  • ಕೇರಳ: 10,500 ರೂ
  • ಅಹ್ಮದಾಬಾದ್: 9,900 ರೂ
  • ಜೈಪುರ್: 9,900 ರೂ
  • ಲಕ್ನೋ: 9,900 ರೂ
  • ಭುವನೇಶ್ವರ್: 10,500 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us