Gold Silver Price on 25th October: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 October 25th: ಇಂದು ಶುಕ್ರವಾರ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾದರೆ, ಬೆಳ್ಳಿ ಸ್ವಲ್ಪ ಅಗ್ಗಗೊಂಡಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,295 ರೂಗೆ ಏರಿದೆ. 18 ಕ್ಯಾರಟ್ ಚಿನ್ನದ ಬೆಲೆ 5,969 ರೂಗೆ ಏರಿದೆ. ಬೆಳ್ಳಿ ಬೆಲೆ 98 ರೂ ಮತ್ತು 107 ರೂಗೆ ಇಳಿದಿದೆ.

Gold Silver Price on 25th October: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Oct 25, 2024 | 10:19 AM

ಬೆಂಗಳೂರು, ಅಕ್ಟೋಬರ್ 25: ನಿನ್ನೆ ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಶುಕ್ರವಾರ ತುಸು ಹೆಚ್ಚಳಗೊಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿಕೆ ಆಗಿದೆ. ವಿದೇಶಗಳ ಮಾರುಕಟ್ಟೆಗಳಲ್ಲಿ ಯಾವ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಮಾತ್ರವೇ ಕಳೆದ ಎರಡು ವಾರಗಳಿಂದ ತೀವ್ರ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗುತ್ತಿವೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಗ್ರಾಮ್​ಗೆ 3 ರೂನಷ್ಟು ಇಳಿಕೆ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 98 ರೂ ಆಗಿದೆ. ಚೆನ್ನೈ ಮೊದಲಾದೆಡೆ 111 ರೂನಿಂದ 107 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 79,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 72,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 25ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,580 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,690 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 98 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,580 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 98 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 72,950 ರೂ
  • ಚೆನ್ನೈ: 72,950 ರೂ
  • ಮುಂಬೈ: 72,950 ರೂ
  • ದೆಹಲಿ: 73,100 ರೂ
  • ಕೋಲ್ಕತಾ: 72,950 ರೂ
  • ಕೇರಳ: 72,950 ರೂ
  • ಅಹ್ಮದಾಬಾದ್: 73,000 ರೂ
  • ಜೈಪುರ್: 73,100 ರೂ
  • ಲಕ್ನೋ: 73,100 ರೂ
  • ಭುವನೇಶ್ವರ್: 72,950 ರೂ

ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡ್ ಮತ್ತು ಎರಡು ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,680 ರಿಂಗಿಟ್ (71,160 ರುಪಾಯಿ)
  • ದುಬೈ: 3,070 ಡಿರಾಮ್ (70,270 ರುಪಾಯಿ)
  • ಅಮೆರಿಕ: 820 ಡಾಲರ್ (68,940 ರುಪಾಯಿ)
  • ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,650 ರುಪಾಯಿ)
  • ಕತಾರ್: 3,080 ಕತಾರಿ ರಿಯಾಲ್ (71,030 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,040 ರುಪಾಯಿ)
  • ಓಮನ್: 324.50 ಒಮಾನಿ ರಿಯಾಲ್ (70,860 ರುಪಾಯಿ)
  • ಕುವೇತ್: 248.30 ಕುವೇತಿ ದಿನಾರ್ (68,160 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,800 ರೂ
  • ಚೆನ್ನೈ: 10,700 ರೂ
  • ಮುಂಬೈ: 9,800 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,800 ರೂ
  • ಕೇರಳ: 10,700 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 10,700 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us