ಬೆಂಗಳೂರು, ಸೆಪ್ಟಂಬರ್ 18: ಚಿನ್ನದ ಬೆಲೆ ಭಾರತದಲ್ಲಿ ಸತತ ಎರಡನೇ ದಿನ ಇಳಿಕೆಯಾಗಿದೆ. ನಿನ್ನೆ ಗ್ರಾಮ್ಗೆ 15ರಿಂದ 16ರೂನಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಒಂದು ರೂನಷ್ಟು ಅಗ್ಗಗೊಂಡಿದೆ. ಬೆಳ್ಳಿ ಬೆಲೆಯೂ ಇಂದು ಗ್ರಾಮ್ಗೆ ಒಂದು ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲಿ ನಿನ್ನೆ ಚಿನ್ನದ ಬೆಲೆ ಒಂದಷ್ಟು ಏರಿಕೆ ಆಗಿತ್ತು. ಇವತ್ತು ಬಹುತೇಕ ತಟಸ್ಥವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಇಂದು ಬಡ್ಡಿದರ ಎಷ್ಟು ಕಡಿತಗೊಳಿಸಬಹುದು ಎನ್ನುವ ಕುತೂಹಲ ಹೂಡಿಕೆದಾರರಲ್ಲಿ ಇದೆ. ಇದೇ ನಿರೀಕ್ಷೆಯಲ್ಲಿ ಚಿನಿವಾರಪೇಟೆಯಲ್ಲಿ ಎಂದಿನಂತೆ ಇಂದು ವ್ಯವಹಾರ ಗೌಣವಾಗಿದೆ. ಇಂದು ರಾತ್ರಿ ಫೆಡರಲ್ ರಿಸರ್ವ್ ತನ್ನ ದರ ಪರಿಷ್ಕರಣೆ ನಿರ್ಧಾರ ಪ್ರಕಟಸಲಿದೆ. 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಆಗುವ ನಿರೀಕ್ಷೆ ಕಳೆದ ಒಂದು ತಿಂಗಳಿಂದಲೂ ಇದೆ. ಒಂದು ವೇಳೆ 50 ಮೂಲಾಂಕಗಳಷ್ಟು ದರ ಇಳಿಕೆಯಾದರೆ ಚಿನಿವಾರ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 68,640 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 68,640 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,600 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: Petrol Diesel Price on September 18: ಬಿಹಾರ, ಛತ್ತೀಸ್ಗಢದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ