
ನವದೆಹಲಿ, ಫೆಬ್ರುವರಿ 18: ಗೂಗಲ್ ಸಿಇಒ, ಹಾಗೂ ಭಾರತ ಮೂಲದ ಸುಂದರ್ ಪಿಚೈ (Sundar Pichai) ಅವರು ಭಾರತ-ಅಮೆರಿಕ ಕನೆಕ್ಟ್ (India America Connect initiative) ಎನ್ನುವ ಮಹತ್ವದ ಉಪಕ್ರಮ ಘೋಷಿಸಿದ್ದಾರೆ. ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಂದರ್ ಪಿಚೈ, ಭಾರತ ಹಾಗು ಅಮೆರಿಕ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಮುದ್ರದೊಳಗೆ ಕೇಬಲ್ ಮಾರ್ಗಗಳನ್ನು (Subsea cable routes) ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
‘ಭಾರತ-ಅಮೆರಿಕ ಕನೆಕ್ಟ್ ಉಪಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಉಪಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಹಾಗೂ ದಕ್ಷಿಣ ಗೋಳಾರ್ಧದ ವಿವಿಧ ಸ್ಥಳಗಳ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಾಗರದೊಳಗೆ ಹೊಸ ಕೇಬಲ್ ಮಾರ್ಗಗಳನ್ನು ಅಳವಡಿಸಲಾಗುತ್ತದೆ. ಈ ಉಪಕ್ರಮದಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಕೌಶಲ್ಯಾಭಿವೃದ್ಧಿಯಲ್ಲೂ ಹೂಡಿಕೆ ಮಾಡುವ ಅಗತ್ಯ ಇದೆ. ಹೀಗಾಗಿ, ಕೌಶಲ್ಯ ಯೋಜನೆಗಳನ್ನೂ ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಹೊಸ ಗೂಗಲ್ ಎಐ ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಕೂಡ ಇದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಎಐ ಅನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ಜೆನ್ ಎಐನಿಂದ ಸ್ಕೈಏರ್ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಲ್ಲಿ ಅಸಾಧಾರಣ ತಿರುವಿನಲ್ಲಿ (extraordinary trajectory) ಭಾರತ ಸಾಗುತ್ತಿದೆ. ಈ ದೇಶದ ಎಐ ಪರಿವರ್ತನೆಯಲ್ಲಿ ಜೊತೆಯಾಗಲು ಗೂಗಲ್ ಬದ್ಧವಾಗಿದೆ. ಭಾರತದ ವೈವಿಧ್ಯತೆ, ಭಾಷಾ ಪರಿಸರ, ಉತ್ತಮ ಡಿಜಿಟಲ್ ಪಬ್ಲಕ್ ಇನ್ಫ್ರಾಸ್ಟ್ರಕ್ಚರ್ಗಳು ನಾವೀನ್ಯತೆಗೆ ಭದ್ರ ಬುನಾದಿ ಹಾಕುತ್ತವೆ ಎಂದು ಗೂಗಲ್ ಸಿಇಒ ಅಭಿಪ್ರಾಯಪಟ್ಟಿದ್ದಾರೆ.
ಸುಂದರ್ ಪಿಚೈ ಮಾತನಾಡಿರುವ ವಿಡಿಯೋ
#WATCH | Delhi | At a Google event, CEO Sundar Pichai says, “Today, we are announcing the India-America Connect Initiative, which will deliver new sub-sea cable routes to increase AI connectivity between India and the US and multiple locations across the southern hemisphere. For… pic.twitter.com/JhAdnsh58r
— ANI (@ANI) February 18, 2026
ಗೂಗಲ್ ಸಂಸ್ಥೆ ಭಾರತದಲ್ಲಿ ಎಐ ಮೂಲಸೌಕರ್ಯಕ್ಕಾಗಿ ಐದು ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜಿಸಿದೆ. ಇದರ ಭಾಗವಾಗಿ ಇಂಡಿಯಾ-ಅಮೆರಿಕ ಕನೆಕ್ಟ್ ಉಪಕ್ರಮ ಆರಂಭಿಸಲಾಗಿದೆ. ಸಮುದ್ರದೊಳಗಿನಿಂದ ಕೇಬಲ್ಗಳನ್ನು ಅಳವಡಿಸುವುದು, ಫೈಬರ್ ಆಪ್ಟಿಕ್ ಮಾರ್ಗಗಳನ್ನು ನಿರ್ಮಿಸುವುದು, ಮತ್ತು ಇಂಟರ್ನ್ಯಾಷನಲ್ ಲ್ಯಾಂಡಿಂಗ್ ಸ್ಟೇಷನ್ಗಳನ್ನು ನಿರ್ಮಿಸುವುದು ಗೂಗಲ್ನ ಯೋಜನೆಗಳಲ್ಲಿ ಸೇರಿವೆ.
ಇದನ್ನೂ ಓದಿ: ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್ಕಂಪ್ಯೂಟಿಂಗ್ ಸಿಸ್ಟಂ
ಅಮೆರಿಕದ ಪಶ್ಚಿಮ ಕರಾವಳಿ ಭಾಗದಿಂದ ಸಮುದ್ರದೊಳಗೆ ಕೇಬಲ್ಗಳನ್ನು ಭಾರತ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ ಕಡೆಗೆ ಹಾಯಿಸಲಾಗುತ್ತದೆ. ಭಾರತದಿಂದ ಸಿಂಗಾಪುರ, ಸೌತ್ ಆಫ್ರಿಕಾ ಆಸ್ಟ್ರೇಲಿಯಾಗೆ ಕೆನ್ಕಟ್ ಆಗುವ ವಿವಿಧ ಸಬ್ಸೀ ಕೇಬಲ್ ಮಾರ್ಗಗಳನ್ನೂ ಮಾಡಲಾಗುತ್ತದೆ. ವಿಶಾಖಪಟ್ಟಣಂನಲ್ಲಿ ಹೊಸ ಇಂಟರ್ನ್ಯಾಷನಲ್ ಸಬ್ಸೀ ಗೇಟ್ವೀ ಸ್ಥಾಪಿಸಲಾಗುತ್ತದೆ. ಹಾಗೆಯೇ, ನಾಲ್ಕು ಫೈಬರ್ ಆಪ್ಟಿಕ್ ರೂಟ್ಗಳನ್ನೂ ನಿರ್ಮಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ