Subsidized Chana Dal: ‘ಭಾರತ್ ದಾಲ್’- ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕಡಲೆ ಮಾರಾಟ

'Bharat Dal' Brand: ಸದ್ಯ ದೆಹಲಿ ಎನ್​ಸಿಆರ್ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ‘ಭಾರತ್ ದಾಲ್’ ಬ್ರ್ಯಾಂಡ್ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಕಡಲೆ ಮಾರಾಟ ಮಾಡುತ್ತಿದೆ.

Subsidized Chana Dal: ‘ಭಾರತ್ ದಾಲ್’- ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕಡಲೆ ಮಾರಾಟ
ಭಾರತ್ ದಾಲ್

Updated on: Jul 18, 2023 | 12:20 PM

ನವದೆಹಲಿ, ಜುಲೈ 18: ಹತೋಟಿ ಮೀರುವ ಬೆಲೆಗಳನ್ನು ಇಳಿಸುವ ನಿಟ್ಟಿನಲ್ಲಿ ಸರ್ಕಾರ ಸಬ್ಸಿಡಿ ದರದಲ್ಲಿ (Subsidized Price) ವಸ್ತುಗಳನ್ನು ಮಾರುವುದುಂಟು. ಟೊಮೆಟೋವನ್ನು 80 ರೂಗೆ ಸರ್ಕಾರ ಮಾರುತ್ತಿದೆ. ಅದೇ ರೀತಿ ಸರ್ಕಾರ ಈಗ ಕಡಲೆಯನ್ನು ಸಬ್ಸಿಡಿ ದರದಲ್ಲಿ ಮಾರುತ್ತಿದೆ. ‘ಭಾರತ್ ದಾಲ್’ ಬ್ರ್ಯಾಂಡ್ (Bharat Dal) ಹೆಸರಿನಲ್ಲಿ ಕಡಲೆಯನ್ನು ಮಾರಲಾಗುತ್ತಿದೆ. ಸಬ್ಸಿಡಿ ಬೆಲೆಯಲ್ಲಿ ಭಾರತ್ ದಾಲ್ ಮಾರುವ ಯೋಜನೆಯನ್ನು ಕೇಂದ್ರ ಆಹಾರ ಸಚಿವ ಪೀಯುಶ್ ಗೋಯಲ್ ಜುಲೈ 17ರಂದು ಆರಂಭಿಸಿದ್ದಾರೆ. ತೊಗರಿಬೇಳೆ ಬೆಲೆ ತೀವ್ರವಾಗಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ‘ಭಾರತ್ ದಾಲ್’ ಕಡಲೆ ಒಂದು ಕೆಜಿಗೆ 60 ರುಪಾಯಿ ಬೆಲೆ ಹೊಂದಿದೆ. 30 ಕಿಲೋ ಚೀಲದಷ್ಟು ಕಡಲೆ ತೆಗೆದುಕೊಂಡರೆ ಒಂದು ಕಿಲೋಗೆ 55 ರೂ ಬೆಲೆ ಆಗುತ್ತದೆ.

ಸದ್ಯ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ವಿವಿಧ ಮಳಿಗೆಗಳಲ್ಲಿ ಭಾರತ್ ದಾಲ್ ಮಾರಾಟ ನಡೆಯುತ್ತಿದೆ. ಕೇಂದ್ರೀಯ ಭಂಡಾರ್ ಮತ್ತು ಸಫಲ್​ನ ವಿವಿಧ ಅಂಗಡಿಗಳಲ್ಲೂ ಸಬ್ಸಿಡಿ ದರದ ಕಡಲೆ ಮಾರಾಟ ಆಗುತ್ತಿದೆ.

ಇದನ್ನೂ ಓದಿTomato: ಕೆಜಿಗೆ 90 ಅಲ್ಲ, 80 ರೂಗೆ ಟೊಮೆಟೋ; ಇಂದಿನಿಂದಲೇ ಸರ್ಕಾರದಿಂದ ಮಾರಾಟ

ಬೇಳೆ ಕಾಳುಗಳ ರೀಟೇಲ್ ಬೆಲೆ ಎಷ್ಟಿದೆ? (1 ಕಿಲೋಗೆ)

  • ಹುರಿಗಡಲೆ: 74.68 ರೂ
  • ತೊಗರಿಬೇಳೆ: 134.48 ರೂ
  • ಉದ್ದಿನಬೇಳೆ: 113.45 ರೂ
  • ಹೆಸರುಕಾಳು: 110.23 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us