
ಒಂದೇ ಒಂದು ರೂಪಾಯಿ ಸಾಲ ಮಾಡದೇನೇ ಮನೆ ಕಟ್ಟಲು ಸಾಧ್ಯನಾ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಸಾಲ ಮಾಡದೇನೇ ಮನೆ ಕಟ್ಟಲು ಸಾಧ್ಯವಿಲ್ಲ. ನೀವೇನಾದ್ರೂ ಗೃಹ ಸಾಲ (Home Loan) ಮಾಡಿದ್ರೆ ಇಎಂಐ ಕಟ್ಟಲು ಒದ್ದಾಡುತ್ತಿರಬಹುದು. ನಿಮ್ಮ ಇಎಂಐ ಮೊತ್ತ ಹೆಚ್ಚಿದ್ದರೆ ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ಅದೇಗೆ ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ.
ಮುಂಗಡ ಪಾವತಿ: ನಿಮ್ಮ ಬಳಿ ಹೆಚ್ಚುವರಿ ಹಣ ಅಥವಾ ವಾರ್ಷಿಕ ಬೋನಸ್ ಸಿಕ್ಕರೆ ಸಾಲದ ಅಸಲನ್ನು ಪಾವತಿ ಮಾಡಿ. ಅಸಲು ಕಡಿಮೆಯಾದ್ರೆ ಸಹಜವಾಗಿ ಬಡ್ಡಿದರವು ಕಡಿಮೆಯಾಗುತ್ತದೆ.
ಸಾಲದ ಅವಧಿ ವಿಸ್ತರಿಸಿಕೊಳ್ಳಿ: ನಿಮ್ಮ ಸಾಲದ ಮರುಪಾವತಿ ಅವಧಿ 10 ರಿಂದ 15 ವರ್ಷವಿದ್ದರೆ ನೀವು ಅದನ್ನು 20 ವರ್ಷಕ್ಕೆ ವಿಸ್ತರಿಸಿ. ಈ ಬಗ್ಗೆ ಸಾಲ ಪಡೆದಿರುವ ಬ್ಯಾಂಕ್ ಗಳಲ್ಲಿ ಮಾತನಾಡಿ. ಮರುಪಾವತಿಯ ಅವಧಿ ಹೆಚ್ಚಾದರೆ ತಿಂಗಳ ಇಎಂಐ ಮೊತ್ತ ಕಡಿಮೆಯಾಗುತ್ತದೆ.
ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿ: ಬ್ಯಾಲೆನ್ಸ್ ಟ್ರಾನ್ಸ್‌ಫರ್ ಎನ್ನುವುದು ಕೂಡ ಗೃಹಸಾಲದ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಸಾಲ ಪಡೆದುಕೊಂಡ ಬ್ಯಾಂಕ್‌ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸಿಗುವ ಇತರೆ ಬ್ಯಾಂಕುಗಳಿಗೆ ನಿಮ್ಮ ಗೃಹ ಸಾಲವನ್ನು ವರ್ಗಾಯಿಸಿಕೊಳ್ಳುವುದು ಉತ್ತಮ.
ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ: ನಿಮ್ಮ ಆದಾಯ ಹೆಚ್ಚಾದಂತೆ, ಪ್ರತಿ ತಿಂಗಳು ಪಾವತಿಸುವ ಇಎಂಐ ಮೊತ್ತವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿ. ಹೀಗೆ ಮಾಡುವುದರಿಂದ ಸಾಲದ ಅವಧಿ ಹಾಗೂ ಬಡ್ಡಿದರವು ಕಡಿಮೆಯಾಗುತ್ತದೆ.
ಬ್ಯಾಂಕ್ ಜತೆಗೆ ಸಂಧಾನ ಮಾಡಿಕೊಳ್ಳಿ: ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದು, ನಿಯಮಿತವಾಗಿ ಇಎಂಐ ಪಾವತಿಸುತ್ತಿದ್ದರೆ ನಿಮಗೆ ಈ ಆಯ್ಕೆಯಿದೆ. ಬ್ಯಾಂಕ್ ಜತೆಗೆ ಬಡ್ಡಿ ದರ ಕಡಿಮೆ ಮಾಡುವಂತೆ ವಿನಂತಿಸಬಹುದಾಗಿದೆ. ಈ ಬಗ್ಗೆ ಬ್ಯಾಂಕ್ ಜತೆಗೆ ಮಾತುಕತೆ ನಡೆಸಿ ಆರ್ಥಿಕ ಹೊರೆ ಮಾಡಿಕೊಳ್ಳಿ.
ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ
ಪ್ರಶ್ನೆ: ಗೃಹ ಸಾಲವು ಉತ್ತಮ ಆಯ್ಕೆಯೇ?
ಉತ್ತರ: ಮನೆ ಕಟ್ಟುವವರಿಗೆ ಗೃಹ ಸಾಲವು ಅತ್ಯಂತ ಉತ್ತಮ ಆಯ್ಕೆಯಾಗಿದೆ. ಇತರೆ ಸಾಲಗಳಿಗೆ ಹೋಲಿಸಿದರೆ ಈ ಸಾಲದ ಬಡ್ಡಿ ದರವು ಕಡಿಮೆ ಇರುತ್ತದೆ.
ಪ್ರಶ್ನೆ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ಸಂಬಳದ ಎಷ್ಟು ಭಾಗವಿದ್ದರೆ ಉತ್ತಮ?
ಉತ್ತರ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ನಿಮ್ಮ ಸಂಬಳದ ಶೇಕಡಾ 40ರ ಒಳಗಿದ್ದರೆ ಅದು ಅತ್ಯಂತ ಸುರಕ್ಷಿತ ಹಾಗೂ ಉತ್ತಮ ಮೊತ್ತವಾಗಿದೆ.
ಇಎಂಐ ಮೊತ್ತವು ಹೊರೆಯಾಗುತ್ತಿದ್ದರೆ ಏನು ಮಾಡಬೇಕು?
ಇಎಂಐ ಕಂತುಗಳ ಅವಧಿ ಹೆಚ್ಚಳ, ಮುಂಗಡ ಪಾವತಿ ಹಣದಲ್ಲಿ ಹೆಚ್ಚಳ, ಕಡಿಮೆ ಬಡ್ಡಿದರವಿರುವ ಬ್ಯಾಂಕ್ ಗೆ ಗೃಹ ಸಾಲ ವರ್ಗಾಯಿಸುವ ಮೂಲಕ ಈ ಹೊರೆ ಕಡಿಮೆ ಮಾಡಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Tue, 27 October 26