ಗೃಹ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಸಾಲ ತೀರಿಸುವವರು ಯಾರು?

ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಗೃಹ ಸಾಲ ಮಾಡಿ ಕನಸಿನ ಮನೆ ಕಟ್ಟುತ್ತಾರೆ. ಆದರೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಗೃಹ ಸಾಲವನ್ನು ಖಾತರಿದಾರ, ಸಹ ಅರ್ಜಿದಾರರು ಅಥವಾ ಉತ್ತರಾಧಿಕಾರಿ ತೀರಿಸುವವನಾಗಿರುತ್ತಾನೆ. ಸಾಲ ಪಡೆಯುವಾಗಲೇ ಗೃಹ ಸಾಲಕ್ಕೆ ವಿಮೆ ಮಾಡಿಸಿದ್ದರೆ ಬ್ಯಾಂಕುಗಳು ವಿಮಾ ಮೊತ್ತದಿಂದ ಸಾಲವನ್ನು ವಸೂಲಿ ಮಾಡುತ್ತವೆ.

ಗೃಹ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಸಾಲ ತೀರಿಸುವವರು ಯಾರು?
ಸಾಂದರ್ಭಿಕ ಚಿತ್ರ
Image Credit source: DEV IMAGES/Moment/Getty Images

Updated on: Aug 26, 2026 | 6:00 PM

ಮುಖ್ಯಾಂಶಗಳು

  • ಬಹುತೇಕರು ತಮ್ಮ ಕನಸಿನ ಮನೆ ನಿರ್ಮಾಣಕ್ಕಾಗಿ ಗೃಹ ಸಾಲ ಮಾಡುತ್ತಾರೆ
  • ಬ್ಯಾಂಕ್‌ ವ್ಯಕ್ತಿಯ ಮಾಸಿಕ ಆದಾಯ ಹಾಗೂ ಆಸ್ತಿಯ ಮೌಲ್ಯದ ಮೇಲೆ ಸಾಲ ನೀಡುತ್ತವೆ
  • ಗೃಹ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಅದನ್ನು ತೀರಿಸುವ ಜವಾಬ್ದಾರಿ ಉತ್ತರಾಧಿಕಾರಿಗಳದ್ದಾಗಿರುತ್ತದೆ

ಬಹುತೇಕರು ಮನೆ ನಿರ್ಮಾಣಕ್ಕೆ ಅಥವಾ ಫ್ಲಾಟ್ ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಗೃಹ ಸಾಲ (Home loan) ಪಡೆಯುತ್ತಾರೆ. ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಬ್ಯಾಂಕ್ ಸಾಲ ಬೇಗನೇ ಮಂಜೂರು ಮಾಡುತ್ತವೆ. ಆದರೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಸಹ ಅರ್ಜಿದಾರನು ಈ ಸಾಲವನ್ನು ಪಾವತಿಸಬೇಕೇ ಹೀಗೆ ಸಾಕಷ್ಟು ಗೊಂದಲ ನಿಮ್ಮಲ್ಲಿ ಇರಬಹುದು. ಒಂದು ವೇಳೆ ಗೃಹ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಆ ಸಾಲವನ್ನು ತೀರಿಸುವ ಜವಾಬ್ದಾರಿ ಪ್ರಾಥಮಿಕವಾಗಿ ಸಹ-ಸಾಲಗಾರರು ಅಥವಾ ಮೃತ ವ್ಯಕ್ತಿಯ ಉತ್ತರಾಧಿಕಾರಿಗಳದ್ದಾಗಿರುತ್ತದೆ.

ಗೃಹ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಯಾರು ಸಾಲ ತೀರಿಸುವವರು?

  • ಜಂಟಿ ಗೃಹ ಸಾಲ ಪಡೆದುಕೊಂಡಿದ್ದರೆ ಮೃತ ವ್ಯಕ್ತಿಯ ನಂತರ ಉಳಿದ ಸಹ-ಸಾಲಗಾರರು ಸಂಪೂರ್ಣ ಸಾಲವನ್ನು ಮರುಪಾವತಿಸಬೇಕು.
  • ಮೃತ ವ್ಯಕ್ತಿ ಸಾಲ ಪಡೆಯುವಾಗ ಕ್ರೆಡಿಟ್ ಲೈಫ್ ಇನ್ಸುರೆನ್ಸ್ ಮಾಡಿಸಿದ್ದರೆ, ಆ ವ್ಯಕ್ತಿಯ ಮರಣದ ನಂತರ ವಿಮಾ ಕಂಪನಿಯು ಬಾಕಿ ಉಳಿದಿರುವ ಸಂಪೂರ್ಣ ಸಾಲದ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸುತ್ತದೆ. ಇದರಿಂದ ಕುಟುಂಬಕ್ಕೆ ಯಾವುದೇ ಸಾಲ ಹೊರೆ ಬೀಳುವುದಿಲ್ಲ.
  • ಸಾಲದ ಸಂಪೂರ್ಣ ಹೊಣೆ ಮೃತ ವ್ಯಕ್ತಿಯ ಮೇಲಿದ್ದರೆ ಮರಣದ ನಂತರ ಕಾನೂನು ಉತ್ತರಾಧಿಕಾರಿಗಳು ಅಥವಾ ಕುಟುಂಬದ ಸದಸ್ಯರು ಬಾಕಿ ಸಾಲವನ್ನು ತೀರಿಸುವ ಜವಾಬ್ದಾರಿ ಹೊರಬೇಕು.
  • ಮೃತ ವ್ಯಕ್ತಿಯ ಹೆಸರಿನಲ್ಲಿರುವ ಗೃಹ ಸಾಲವನ್ನು ತೀರಿಸಲು ಉತ್ತರಾಧಿಕಾರಿ ಅಥವಾ ಕುಟುಂಬದ ಸದಸ್ಯರು ಸಶಕ್ತರಲ್ಲದೇ ಇದ್ದರೆ ಬ್ಯಾಂಕ್ ಅಡವಿಟ್ಟ ಮನೆಯನ್ನು ಅಥವಾ ಆಸ್ತಿಯನ್ನು ವಶಪಡಿಸಿಕೊಂಡು ಮಾರಾಟ ಮಾಡುತ್ತದೆ. ಮಾರಾಟವಾದ ಮೊತ್ತವು ಸಾಲದ ಮೊತ್ತಕ್ಕಿಂತ ಹೆಚ್ಚಿದ್ದರೆ ಅದನ್ನು ವಾರಸುದಾರರಿಗೆ ನೀಡುತ್ತವೆ.

ಇದನ್ನೂ ಓದಿ: ನಿಮ್ಮ ಸಂಬಳದ ಎಷ್ಟು ಮೊತ್ತವನ್ನು ಗೃಹ ಸಾಲಕ್ಕೆ ಮೀಸಲಿಡುವುದು ಸೂಕ್ತ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಒಬ್ಬ ವ್ಯಕ್ತಿಗೆ ಗೃಹ ಸಾಲವಾಗಿ ಬ್ಯಾಂಕ್ ಎಷ್ಟು ಹಣ ನೀಡುತ್ತದೆ?

ಉತ್ತರ: ಬ್ಯಾಂಕ್‌ಗಳು ವ್ಯಕ್ತಿಯ ಮಾಸಿಕ ಆದಾಯ ಹಾಗೂ ಆಸ್ತಿಯ ಮೌಲ್ಯದ ಶೇಕಡಾವಾರು ಆಧಾರದ ಮೇಲೆ ಗೃಹ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ.

ಪ್ರಶ್ನೆ: ಗೃಹ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಯಾರು ಸಾಲ ಪಾವತಿಸುವವರಾಗಿರುತ್ತಾರೆ?

ಉತ್ತರ: ಗೃಹ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ, ಆ ಸಾಲವನ್ನು ಮರುಪಾವತಿಸುವ ಜವಾಬ್ದಾರಿಯು ಸಹ-ಅರ್ಜಿದಾರರು ಅಥವಾ ಸಹ ಸಾಲಗಾರರು,  ಉತ್ತರಾಧಿಕಾರಿಗಳಿಗೆ ಸೇರುತ್ತವೆ.

ಪ್ರಶ್ನೆ: ಗೃಹ ಸಾಲ ಪಡೆಯುವಾದ ಗೃಹ ಸಾಲ ವಿಮೆ ಮಾಡಿಸುವುದು ಕಡ್ಡಾಯವೇ?

ಉತ್ತರ: ಬ್ಯಾಂಕ್ ಗಳಲ್ಲಿ ಗೃಹ ಸಾಲ ಪಡೆಯಲು ಗೃಹ ಸಾಲ ವಿಮೆ ಮಾಡಿಸುವುದು ಕಡ್ಡಾಯವಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us