ಭಾರತದಿಂದ ಇನ್ನೂ 8-9 ವ್ಯಾಪಾರ ಒಪ್ಪಂದಗಳಿಗೆ ಮಾತುಕತೆ ಚಾಲನೆಯಲ್ಲಿ: ಪಿಯೂಷ್ ಗೋಯಲ್

India in talks for 8-9 trade agreements, says Piyush Goyal: ಭಾರತ ಸದ್ಯ 8-9 ರಾಷ್ಟ್ರಗಳು ಹಾಗೂ ಗುಂಪುಗಳೊಂದಿಗೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಈ 8-9 ದೇಶಗಳ ಜಿಡಿಪಿ ಒಟ್ಟು 15 ಟ್ರಿಲಿಯನ್ ಡಾಲರ್​ನಷ್ಟಿದೆ. ಈ ಒಪ್ಪಂದಗಳು ಹಾಗೂ ಹಿಂದಿನ ಒಪ್ಪಂದಗಳನ್ನು ಸೇರಿಸಿದರೆ ಭಾರತಕ್ಕೆ ವಿಶ್ವದ ಶೇ 75ರಷ್ಟು ಕಮರ್ಷಿಯಲ್ ಮಾರ್ಕೆಟ್​ಗೆ ಪ್ರವೇಶ ಸಿಕ್ಕಂತಾಗುತ್ತದೆ.

ಭಾರತದಿಂದ ಇನ್ನೂ 8-9 ವ್ಯಾಪಾರ ಒಪ್ಪಂದಗಳಿಗೆ ಮಾತುಕತೆ ಚಾಲನೆಯಲ್ಲಿ: ಪಿಯೂಷ್ ಗೋಯಲ್
ಪೀಯೂಷ್ ಗೋಯಲ್
Image Credit source: PTI

Updated on: Aug 24, 2026 | 1:19 PM

ನವದೆಹಲಿ, ಆಗಸ್ಟ್ 24: ಭಾರತ ಇತ್ತೀಚಿನ ವರ್ಷಗಳಿಂದ ಕೆಲವು ದೇಶಗಳು ಹಾಗೂ ಗುಂಪುಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇನ್ನೂ ಹಲವು ದೇಶಗಳ ಜೊತೆ ಮಾತುಕತೆಗಳು ನಡೆಯುತ್ತಿವೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಪ್ರಕಾರ, 8-9 ದೇಶಗಳು ಮತ್ತು ಗುಂಪುಗಳೊಂದಿಗೆ ಒಪ್ಪಂದಕ್ಕಾಗಿ ಮಾತುಕತೆಗಳು ಚಾಲನೆಯಲ್ಲಿವೆಯಂತೆ. ಜಪಾನ್‌ನಲ್ಲಿ ನಡೆದ ಭಾರತ ಮತ್ತು ಜಪಾನ್ ವ್ಯಾಪಾರ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಒಪ್ಪಂದಗಳ ಬಳಿಕ ಭಾರತಕ್ಕೆ ವಿಶ್ವದ ಶೇ. 75ರಷ್ಟು ಮಾರುಕಟ್ಟೆ ಪ್ರವೇಶ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಪೀಯೂಷ್ ಗೋಯಲ್ ನೀಡಿದ ಮಾಹಿತಿ ಈ ಕೆಳಕಂಡಂತಿದೆ:

ಹೊಸ ಒಪ್ಪಂದಗಳ ಮಾತುಕತೆ: ಭಾರತವು ಪ್ರಸ್ತುತ ಕನಿಷ್ಠ 8 ರಿಂದ 9 ದೇಶಗಳ ಗುಂಪುಗಳು ಮತ್ತು ಪ್ರತ್ಯೇಕ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸುತ್ತಿದೆ. ಈ ದೇಶಗಳು ಒಟ್ಟಾರೆಯಾಗಿ ಸುಮಾರು 15 ಟ್ರಿಲಿಯನ್ ಡಾಲರ್‌ಗಳಷ್ಟು ಜಿಡಿಪಿ ಹೊಂದಿವೆ.

ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವ ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳು

ಪ್ರಸ್ತುತ ಒಪ್ಪಂದಗಳ ವ್ಯಾಪ್ತಿ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತವು ಒಟ್ಟು 60 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ದೇಶಗಳೊಂದಿಗೆ 9 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದರೊಂದಿಗೆ ಜಪಾನ್, ಕೊರಿಯಾ ಮತ್ತು ಆಸಿಯಾನ್ (ASEAN) ಪ್ರದೇಶದ ಹಿಂದಿನ ಒಪ್ಪಂದಗಳು ಮತ್ತೊಂದು 10 ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ತೆರೆದಿವೆ.

ಒಟ್ಟು ಮಾರುಕಟ್ಟೆ ಪ್ರವೇಶ: ಪ್ರಸ್ತುತ ಭಾರತವು ಒಟ್ಟು 70 ಟ್ರಿಲಿಯನ್ ಡಾಲರ್‌ಗಳಷ್ಟು ಮಾರುಕಟ್ಟೆಗೆ ಆದ್ಯತೆಯ ಪ್ರವೇಶವನ್ನು ಮುಕ್ತಗೊಳಿಸಿದೆ. ಹೊಸ ಒಪ್ಪಂದಗಳು ಅಂತಿಮಗೊಂಡರೆ, ಜಾಗತಿಕ ವಾಣಿಜ್ಯದ ಸುಮಾರು ಶೇ. 75ರಷ್ಟು ಭಾಗವು ಮುಕ್ತ ವ್ಯಾಪಾರ ಒಪ್ಪಂದಗಳ ವ್ಯಾಪ್ತಿಗೆ ಬರಲಿದೆ.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್

ಹೂಡಿಕೆ ಅವಕಾಶಗಳು: ಭಾರತದಲ್ಲಿ ಡಾಟಾ ಸೆಂಟರ್‌ಗಳು (Data Centers), ಉತ್ಪಾದನಾ ವಲಯ (Manufacturing) ಮತ್ತು ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಅವಕಾಶಗಳಿವೆ ಎಂದು ಟೋಕಿಯೋದಲ್ಲಿ ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us