ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್

India-US trade deals finalized in principal says US ambassador: ಭಾರತ ಮತ್ತು ಅಮೆರಿಕದ ವ್ಯಾಪಾರ ಒಪ್ಪಂದದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಎರಡೂ ದೇಶಗಳ ಬಹುನಿರೀಕ್ಷಿತ ಒಪ್ಪಂದ ತಾತ್ವಿಕವಾಗಿ ಅಂತಿಮಗೊಂಡಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಹೇಳಿದ್ಧಾರೆ. ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ತಾತ್ವಿಕವಾಗಿ ಅಂತಿಮ; ಕಾನೂನು ಅಂಶಗಳು ಅಂತಿಮಗೊಳ್ಳುವುದಷ್ಟೇ ಬಾಕಿ: ರಾಯಭಾರಿ ಸೆರ್ಗಿಯೋ ಗೋರ್
ಸೆರ್ಗಿಯೋ ಗೋರ್
Image Credit source: PTI

Updated on: Aug 23, 2026 | 5:48 PM

ನವದೆಹಲಿ, ಆಗಸ್ಟ್ 23: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದವು (Interim Trade Agreement) ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಅಧಿಕೃತಗೊಳ್ಳಲಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ (Sergio Gor) ತಿಳಿಸಿದ್ದಾರೆ. ತಾತ್ವಿಕವಾಗಿ ಒಪ್ಪಂದ ಅಂತಿಮಗೊಂಡಿದೆ. ಕಾನೂನು ಮತ್ತು ಕಟ್ಟುಪಾಡುಗಳನ್ನು ರಚಿಸುವ ಕೆಲಸ ಮಾತ್ರ ಬಾಕಿ ಇದೆ ಎಂದಿದ್ದಾರೆ ಅಮೆರಿಕನ್ ರಾಯಭಾರಿ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ಅವರು ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದು ಅತ್ಯಂತ ಯಶಸ್ವಿಯಾಗಿದೆ. ಈ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ಕಾರ್ಯತಂತ್ರ ಹಾಗೂ ಆರ್ಥಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿವೆ. ರೂಬಿಯೋ ಅವರು ಈ ವರ್ಷದ ಅಂತ್ಯದೊಳಗೆ (ಅಕ್ಟೋಬರ್ ವೇಳೆಗೆ) ಮತ್ತೊಮ್ಮೆ ಭಾರತಕ್ಕೆ ಅಧಿಕೃತ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಯಭಾರಿ ಸೆರ್ಗಿಯೋ ಗೋರ್ ಅವರು ತಿಳಿಸಿದ್ದಾರೆ.

ಆರ್ಥಿಕ ಹಾಗೂ ತಂತ್ರಜ್ಞಾನ ಸಹಭಾಗಿತ್ವ

ಭಾರತದೊಂದಿಗೆ ತಂತ್ರಜ್ಞಾನ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಬಲವಾದ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಅಮೆರಿಕ ಉತ್ಸುಕವಾಗಿದೆ. ಉಭಯ ದೇಶಗಳ ನಡುವಿನ ಈ ದ್ವಿಪಕ್ಷೀಯ ಒಪ್ಪಂದವು ಎರಡೂ ರಾಷ್ಟ್ರಗಳ ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿ ತಲುಪಲು 23 ಅಂಶಗಳ ಕಾರ್ಯಯೋಜನೆ; ಕ್ರಮ ಕೈಗೊಳ್ಳಲು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ

ರಷ್ಯಾ ವಿರುದ್ಧದ ಮಸೂದೆ ಬಗ್ಗೆ ತಲೆಕೆಡಿಸಿಕೊಳ್ಳದಿರಿ…

ರಷ್ಯನ್ ತೈಲ ಖರೀದಿಸುವ ರಾಷ್ಟ್ರಗಳ ವಿರುದ್ಧ ಶೇ. 100ರಷ್ಟು ಟ್ಯಾರಿಫ್ ಅನ್ನು ವಿಧಿಸುವ ಮಸೂದೆ ಬಗ್ಗೆ ಭಾರತದ ಆತಂಕವನ್ನು ದೂರ ಮಾಡಲು ಗೋರ್ ಯತ್ನಿಸಿದ್ದಾರೆ. ಬಿಲ್ ಅನ್ನು ತಂದಿರುವುದು ಅಮೆರಿಕದ ಸಂಸತ್ತು. ಆ ಮಸೂದೆಯು ಸಂಸತ್​ನ ನಿಲುವಾಗಿದೆ. ಆದರೆ, ಸರ್ಕಾರ ಅಥವಾ ಟ್ರಂಪ್ ಅವರು ಯಾವತ್ತೂ ಕೂಡ ಇದನ್ನು ಬಹಿರಂಗವಾಗಿ ಬೆಂಬಲಿಸಿಲ್ಲ, ಅಥವಾ ಅದರ ಪರವಾಗಿ ಮಾತನಾಡಿರುವದನ್ನು ನೀವು ಕಂಡಿರಲಿಕ್ಕಿಲ್ಲ ಎಂದು ಸೆರ್ಗಿಯೋ ಗೋರ್ ಸಮಜಾಯಿಷಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us